ಸಿದ್ದಾಪುರ. ಜು. ೨೯: ಎರಡು ಕಣ್ಣುಗಳ ದೃಷ್ಟಿ ಹೀನತೆಯಿಂದ ಬಳಲುತ್ತಿದ್ದ ಮಕನ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಬಾಡಗ ಬಾಣಂಗಾಲ ಸಮೀಪದ ಹುಂಡಿ ಗ್ರಾಮದ ನಂದ ಅಪ್ಪಯ್ಯ ಎಂಬವರಿಗೆ ಸೇರಿದ ಕಾಫಿ ತೋಟ ದೊಳಗೆ ಕಾಡಾನೆಗಳ ಗುಂಪಿನಲ್ಲಿದ್ದ ಅಂದಾಜು ೧೮ ವರ್ಷ ಪ್ರಾಯದ ಮಕನ ಕಾಡಾನೆಯು ತನ್ನ ಎರಡು ಕಣ್ಣುಗಳ ದೃಷ್ಟಿ ಕಳೆದುಕೊಂಡು ಸಮರ್ಪಕವಾಗಿ ಆಹಾರವನ್ನು ಸೇವಿಸದೆ ಬಳಲಿದ್ದು ಭಾನುವಾರ ದಂದು ಸಾವನ್ನಪ್ಪಿರುವುದಾಗಿ ವನ್ಯಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ತಿಳಿಸಿದ್ದಾರೆ.

ಬಾಡಗ ಬಾಣಂಗಾಲದಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಗುಂಪಿನಲ್ಲಿ ಇದ್ದ ಈ ಮಕನ ಆನೆಯು ಕಾಡಾನೆಗಳ ಕಾದಾಟದಿಂದ ತನ್ನ ಎರಡು ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಡಾನೆ ಸಾವನ್ನ ಪ್ಪಿರುವ ವಿಚಾರ ಸೋಮವಾರದಂದು ಕಾರ್ಮಿಕರು ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ನAತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ವೀರಾಜಪೇಟೆ ವಲಯದ ಡಿಸಿಎಫ್ ಜಗನ್ನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸಾವನ್ನಪ್ಪಿರುವ ಕಾಡಾನೆಂ iÀÄನ್ನು ಕಾಫಿ ತೋಟದಿಂದ ಯಂತ್ರದ ಮೂಲಕ ಮೇಲೆತ್ತಿ ಲಾರಿಯ ಮೂಲಕ ಮಾಲ್ದಾರೆಯ ಅರಣ್ಯ ಪ್ರದೇಶಕ್ಕೆ ರವಾನಿಸಲಾಯಿತು. ಅರಣ್ಯ ಪ್ರದೇಶದ ಒಳಗೆ ಮಳೆಯ ನಡುವೆ ವನ್ಯಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಮಕನ ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಅರಣ್ಯ ಪ್ರದೇಶದ ಒಳಗೆ ಗುಂಡಿ ತೆಗೆದು ಅಂತ್ಯಕ್ರಿಯೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಬಾಡಗ ಬಾಣಂಗಾಲ ಗ್ರಾಮದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ ಇದ್ದು, ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಕಾಫಿ ತೋಟಗಳ ಒಳಗೆ ದಾಂಧಲೆ ನಡೆಸುತ್ತಾ ಕೃಷಿ ಫಸಲು ನಾಶಪಡಿಸುತ್ತಿವೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.