ಕುಶಾಲನಗರ, ಜು. ೨೯: ಕರ್ನಾಟಕ ಭೂ ಮಂಜೂರಾತಿ ನಿಯಮಗಳು ೧೯೬೯ ಉಪ ನಿಯಮ ೩ ರ ಅಡಿ ತಾಲೂಕಿನಲ್ಲಿ ಹಂಚಿಕೆಗೆ ಲಭ್ಯವಿರುವ ಭೂಮಿಯ ವಿವರವನ್ನು ಪ್ರಕಟಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ರೈತ ಸಂಘದ ಕೊಡಗು ಸಮಿತಿ ಅಧ್ಯಕ್ಷ ಎಸ್.ಆರ್. ಮಂಜುನಾಥ್ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಪ್ರತಿ ವರ್ಷವೂ ಹಂಚಿಕೆಗೆ ಲಭ್ಯವಿರುವ ಸರ್ಕಾರಿ ಭೂಮಿಯ ಪಟ್ಟಿಯನ್ನು ತಯಾರಿಸಬೇಕು. ಈ ಮಹತ್ವದ ಕೆಲಸವನ್ನು ಕೈಗೆತ್ತಿಕೊಂಡು ಸಕಾಲದಲ್ಲಿ ತಾಲೂಕಿನಲ್ಲಿ ಭೂ ರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ದುರ್ಬಲ ಸಮುದಾಯದ ಜನರಿಗೆ ಹಂಚಲು ಕ್ರಮ ಕೈಗೊಳ್ಳಬೇಕು. ಆದರೆ ಇದುವರೆಗೂ ಭೂಮಿ ವಿವರ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಸ್ವಾತಂತ್ರö್ಯ ಪೂರ್ವದಿಂದಲೂ ಸಾಗುವಳಿ ಭೂಮಿಯಿಂದ ವಂಚಿತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಭೂಮಿ ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ಎಲ್ಲಾ ಯೋಜನೆಗಳ ಮೇಲೆ ಇದು ಅಡ್ಡ ಪರಿಣಾಮವಾಗಿದೆ. ಆದ್ದರಿಂದ ೨೦೨೪-೨೫ನೇ ಸಾಲಿನಲ್ಲಿ ತಾಲೂಕಿನ ಹಂಚಿಕೆಗೆ ಲಭ್ಯವಿರುವ ಒಟ್ಟು ಸರ್ಕಾರಿ ಭೂಮಿಯ ವಿವರ ಹಾಗೂ ದರದ ದೃಢೀಕರಣ ಪ್ರತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭ ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೆಚ್.ಇ. ಸಣ್ಣಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಹೆಚ್.ಜೆ. ಜಯಣ್ಣ, ನಿರ್ವಣಿ, ಹೆಚ್.ಎನ್. ಸ್ವಾಮಿ ಭಾಗವಹಿಸಿದ್ದರು.
ಕಾಯ್ದೆ ರದ್ದತಿಗೆ ಆಗ್ರಹ
ಇದೇ ವಿಚಾರಕ್ಕೆ ಸಂಬAಧಿಸಿದAತೆ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕಂದೇಗಾಲ ಶ್ರೀನಿವಾಸ್, ಈಗಾಗಲೇ ಸರಕಾರ ಕಂದಾಯ ಇಲಾಖೆ ಕಳೆದ ಜೂನ್ ತಿಂಗಳಲ್ಲಿ ಗುತ್ತಿಗೆ ನೀಡುವ ನಿಯಮಕ್ಕೆ ಕೊನೆ ದಿನಾಂಕವನ್ನು ನಿಗದಿ ಮಾಡಿ ಅರ್ಜಿಗಳನ್ನು ಆಹ್ವಾನಿಸಿದೆ. ಮಲೆನಾಡಿನ ಭಾಗದಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ ೧೯೭೦ ರ ನಿಯಮದಂತೆ ಭೂ ಮಿತಿ ಕಾಯ್ದೆ ಜಾರಿ ಮಾಡಬೇಕಾಗಿದ್ದು, ಇದುವರೆಗೂ ಯಾವ ಸರಕಾರಗಳು ಮಲೆನಾಡಿನ ಪ್ರದೇಶಕ್ಕೆ ಭೂಮಿತಿ ನೀತಿಯನ್ನು ರೂಪಿಸಿರುವುದಿಲ್ಲ. ಈಗಲೂ ಸಹ ಹಿಂದೆ ಬ್ರಿಟೀಷರ ಕಾಲದಲ್ಲಿ ಭೂ ಗುತ್ತಿಗೆ ನೀಡಿದ್ದ ೯೯ ವರ್ಷಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಸಹ ಭೂಮಿಗಳನ್ನು ಸರಕಾರದ ನಿಯತಕ್ಕೆ ಒಳಪಡಿಸಿಕೊಳ್ಳದೆ ಹಾಗೆಯೇ ಮುಂದುವರೆಸಿರುವುದು ನಿಜವಾದ ಭೂ ಹೀನರಿಗೆ ಭೂಮಿ ಮಂಜೂರಾತಿ ಸಿಗುವ ಕನಸು ಗಗನಕುಸುಮವಾಗುತ್ತಿದೆ ಎಂದು ಹೇಳಿದರು.
ಮಂಜೂರಾತಿ ನಿಯಮ ೧೯೬೦ ರ ಪ್ರಕಾರ ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಶೇ. ೫೦ ಮೀರದಂತೆ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದವರಿಗೆ ಭೂಮಿಯನ್ನು ಮೀಸಲಿಡಬೇಕು. ಶೇ. ೨೦ ಹಿಂದುಳಿದ ವರ್ಗಗಳಿಗೆ, ಶೇ. ೧೦ ಮಾಜಿ ಸೈನಿಕರಿಗೆ, ಶೇ. ೧೦ ಇತರ ಸಾಮಾನ್ಯ ವರ್ಗದವರಿಗೆ ಶೇ. ೫ ಸ್ವಾತಂತ್ರö್ಯ ಹೋರಾಟಗಾರರಿಗೆ ಮೀಸಲಿಡಬೇಕೆಂಬ ನಿಯಮ ಇದ್ದರೂ ಕಳೆದ ೨೦೧೯ ಮತ್ತು ೨೦೨೨ ಮತ್ತು ಈ ಹಿಂದಿನಿAದ ಕೊಡಗು ಜಿಲ್ಲೆಯಲ್ಲಿ ಸಂಬAಧಿಸಿದ ಭೂ ಮಂಜೂರಾತಿ ಸಮಿತಿ ಅಧ್ಯಕ್ಷರು ಹಾಗೂ ಕಂದಾಯಾಧಿಕಾರಿಗಳು ಈ ನಿಯಮಗಳನ್ನು ಪಾಲಿಸಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಮೇಲ್ಕಂಡ ಅಂಶಗಳನ್ನು ಜಿಲ್ಲಾಡಳಿತ ಮತ್ತು ಭೂ ಮಂಜೂರಾತಿ ಸಮಿತಿಗಳು ಪಾಲಿಸದಿದ್ದಲ್ಲಿ ಭೂ ಹೀನರೊಡಗೂಡಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ್, ಕಾರ್ಯದರ್ಶಿ ಈ. ಸಣ್ಣಪ್ಪ, ಕೆ.ಟಿ. ಆನಂದ್ ಹಾಗೂ ಚಂಗಪ್ಪ ಇದ್ದರು.