ಚೆಯ್ಯಂಡಾಣೆ, ಜು. ೨೯: ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಬಾರಿ ಗಾಳಿ ಮಳೆಗೆ ಹಲ ವೆಡೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಧರೆಗುಳಿದ ಘಟನೆಗಳು ಸಂಭವಿಸಿವೆ.
ಆದರೆ ಇಲ್ಲೊಂದು ವಿದ್ಯುತ್ ಕಂಬಕ್ಕೆ ಬಿದಿರಿನ ಏಣಿಯೊಂದು ಆಸರೆ ಯಾಗಿ ನಿಂತು ಅಚ್ಚರಿ ಮೂಡಿಸಿದೆ. ಇಂತಹ ದೃಶ್ಯವೊಂದು ಕಂಡು ಬಂದದ್ದು ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡು ಗ್ರಾಮದಲ್ಲಿ.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡು ಗ್ರಾಮದ ಮಸೀದಿಯ ಸಮೀಪದಲ್ಲಿ ಮಳೆ ಗಾಳಿಗೆ ವಿದ್ಯುತ್ ಕಂಬವು ವಾಲಿನಿಂತು ಬೀಳುವ ಹಂತದಲ್ಲಿದ್ದು ಇದನ್ನು ಸರಿಪಡಿಸುವಂತೆ ಗ್ರಾಮಸ್ಥರು ಹಲವು ಬಾರಿ ಚೆಸ್ಕಾಂ ಗಮನಕ್ಕೆ ತಂದಿದ್ದಾರೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ವಾಲಿನಿಂತ ವಿದ್ಯುತ್ ಕಂಬ ಬಿದ್ದು ಅವಘಡ ಸಂಭವಿಸದAತೆ ಬಿದಿರಿನ ಏಣಿಯೊಂದು ಆಸರೆಯಾಗಿ ನಿಂತಿದೆ.
ಈ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯುತ್ ಪೂರೈಕೆ ಆಗದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬAಧಪಟ್ಟ ಚೆಸ್ಕಾಂ ಅಧಿಕಾರಿಗಳು ನಿರ್ಲಕ್ಷö್ಯ ತೋರದೆ ಅವಘಡ ಸಂಭವಿಸುವ ಮುನ್ನ ಈ ವಿದ್ಯುತ್ ಕಂಬವನ್ನು ದುರಸ್ತಿಪಡಿಸಬೇಕೆಂಬುದು ಗ್ರಾಮಸ್ಥರು ಆಗ್ರಹಿಸಿದ್ದಾರೆ.