ಕೂಡಿಗೆ, ಜು. ೩೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಪುರಾತನ ಕಾಲದ ಆನೆ ಕೆರೆಯು ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಚಿಕ್ಕತ್ತೂರು ಗ್ರಾಮದ ವಿನಾಯಕ ಯುವಕ ಸಂಘ ಮತ್ತು ಗ್ರಾಮಸ್ಥರ ಸಹಯೋಗ ದೊಂದಿಗೆ ಅರ್ಪಿಸಲಾಯಿತು.
ಚಿಕ್ಕತ್ತೂರು ಗ್ರಾಮದಲ್ಲಿರುವ ಕನ್ನಿಕ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಕಳಸ ಪೂಜೆ ನಡೆದು, ನಂತರ ಗ್ರಾಮದ ಮಹಿಳೆಯರು, ಯುವತಿಯರು ದೇವಾಲಯದ ಆವರಣದಿಂದ ಕಳಸವನ್ನು ಹೊತ್ತು ಮಂಗಳ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿ ಆನೆ ಕೆರೆಗೆ ಬಂದು ಗಂಗಾಪೂಜೆ, ಕಳಸ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಬಾಗಿನ ಅರ್ಪಿಸಲಾಯಿತು.
ಪೂಜಾ ಕೈಂಕರ್ಯಗಳನ್ನು ಕೂಡಿಗೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅರ್ಚಕ ನವೀನ್ ಭಟ್ ನೆರವೇರಿಸಿದರು.
ಈ ಸಂದರ್ಭ ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಸಿ.ಸಿ.ಸ್ವಾಮಿ, ಉಪಾಧ್ಯಕ್ಷ ಪಿ. ಎನ್. ಕೃಷ್ಣ, ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ಬಿಜು, ಗೌರವಾಧ್ಯಕ್ಷ ಯೋಗೇಂದ್ರ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯರಾದ ದಿನೇಶ್, ಪಾರ್ವತಮ್ಮ, ಕನ್ನಿಕಾ ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷ ನಾಗೇಶ್, ಗ್ರಾಮದ ಪ್ರಮುಖರಾದ ವಿಜೇಂದ್ರ, ಮಾದಪ್ಪ, ಗಣೇಶ್, ಹೂನ್ನಣ್ಣ, ಕುಮಾರ್ ಸ್ವಾಮಿ, ದೇವಾಲಯದ ಅರ್ಚಕ ನಾಗೇಂದ್ರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಸೇರಿದಂತೆ ಕೂಡ್ಲೂರು, ಕೂಡುಮಂಗಳೂರು, ದೊಡ್ಡತ್ತೂರು, ಚಿಕ್ಕತ್ತೂರು, ಹಾರಂಗಿ, ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.