ಪ್ಯಾರಿಸ್, ಜು. ೩೦: ಒಂದೇ ಒಲಂಪಿಕ್ ಕ್ರೀಡಾಕೂಟದಲ್ಲಿ ಒಂದಕ್ಕಿAತ ಹೆಚ್ಚು ಪದಕ ಪಡೆದ ಭಾರತದ ಮೊದಲ ಕ್ರೀಡಾಪಟು ಎಂಬ ಖ್ಯಾತಿಗೆ ಮನು ಭಾಕರ್ ಅವರು ಭಾಜನರಾಗಿದ್ದಾರೆ. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದ ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ವಿಭಾಗದ ಮಿಕ್ಸ್÷್ಡ-ಡಬಲ್ಸ್ನಲ್ಲಿ ಭಾರತದ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ ಕಂಚು ಪಡೆಯುವ ಮೂಲಕ ಭಾರತಕ್ಕೆ ಪ್ರಸ್ತುತ ಒಲಂಪಿಕ್ಸ್ನಲ್ಲಿ ಎರಡನೆಯ ಪದಕವನ್ನು ತಂದುಕೊಟ್ಟಿದೆ. ಮನು ಭಾಕರ್ ಅವರು ಸಿಂಗಲ್ಸ್ ವಿಭಾಗದಲ್ಲಿಯೂ ೨ ದಿನಗಳ ಹಿಂದೆ ಕಂಚು ಪಡೆದಿದ್ದರು. ಇಂದು ಕೊರಿಯಾ ವಿರುದ್ಧ ನಡೆದ ಕಂಚು ಪದಕದ ಪಂದ್ಯದಲ್ಲಿ ಭಾರತ ೧೬ ಅಂಕಗಳನ್ನು ಗಳಿಸಿದರೆ ಕೊರಿಯಾ ೧೦ ಅಂಕಗಳನ್ನು ಗಳಿಸಿತು. ಈ ಮೂಲಕ ಭಾರತ ಪಂದ್ಯ ಗೆದ್ದು ಕಂಚು ಪದಕ ಪಡೆದುಕೊಂಡಿತು. ಮೊದಲೆರಡು ಸ್ಥಾನಗಳನ್ನು ಸರ್ಬಿಯಾ ಹಾಗೂ ಟರ್ಕಿ ಕ್ರಮವಾಗಿ ಪಡೆದುಕೊಂಡವು.
ಭಗವದ್ಗೀತೆ ಸಹಕಾರಿ - ಮನು
ಒಂದೆ ಒಲಂಪಿಕ್‌ನಲ್ಲಿ ಎರಡು ಪದಕ ಗಳಿಸಿ ಇತಿಹಾಸ ಸೃಷ್ಟಿಸಿರುವ ಮನು ಬಾಕರ್ ಅವರಿಗೆ ಭಗವದ್ಗೀತೆ ಸಹಕಾರಿಯಾಯಿತು ಎಂದು ಅವರು ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊAಡಿದ್ದಾರೆ. ಶೂಟ್ ಮಾಡುವ ಸಂದರ್ಭ ಗೀತೆಯಲ್ಲಿನ ಸಾಲುಗಳನ್ನು ನೆನಪಿಸಿಕೊಂಡೆ. ಫಲಿತಾಂಶ ಏನೇ ಇರಲಿ ನಮ್ಮ ಕಾರ್ಯವನ್ನು ನಾವು ಮಾಡಬೇಕು ಎಂಬ ಗೀತೆಯ ಸಂದೇಶ ಪದಕ ಗೆಲ್ಲುವಲ್ಲಿ ಸಹಕಾರಿಯಾಯಿತು ಎಂದು ಅವರು ಹೇಳಿದ್ದಾರೆ.
ಹಾಕಿಯಲ್ಲಿ ಭಾರತಕ್ಕೆ ಗೆಲುವು
ಭಾರತ ಪುರುಷರ ಹಾಕಿ ತಂಡವು ಒಲಂಪಿಕ್ ಹಾಕಿಯ ಗುಂಪು ಹಂತದಲ್ಲಿನ ತನ್ನ ೩ನೆ ಪಂದ್ಯದಲ್ಲಿ ಐರ್‌ಲ್ಯಾಂಡ್ ವಿರುದ್ಧ ೨-೦ ಗೋಲುಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಪ್ರಸ್ತುತ ತನ್ನ ಗ್ರೂಪ್‌ನಲ್ಲಿ ಅಗ್ರಸ್ಥಾನ ಪಡೆದಿದೆ. ಆಗಸ್ಟ್ ೧ ರಂದು ಮಧ್ಯಾಹ್ನ ೧:೩೦ ಕ್ಕೆ ಬೆಲ್ಜಿಯಮ್ ಹಾಗೂ ಆಗಸ್ಟ್ ೨ ಕ್ಕೆ ಸಂಜೆ ೪:೪೫ ಕ್ಕೆ ಆಸ್ಟ್ರೇಲಿಯಾ ವಿರುದ್ಧ ಭಾರತ ಸೆಣಸಾಡಲಿದೆ.
ಟೆನ್ನಿಸ್ ಡಬಲ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೊಡಗಿನ ರೋಹನ್ ಬೋಪಣ್ಣ ಹಾಗೂ ಬಾಲಾಜಿ ಜೋಡಿ ಮೊದಲ ಸುತ್ತಿನಲ್ಲಿಯೇ ಫ್ರಾನ್ಸ್ ದೇಶದ ಮಾನ್ ಫಿಲ್ಸ್ ಹಾಗೂ ರಾಜರ್ ಜೋಡಿ ವಿರುದ್ಧ ೫-೭, ೨-೬ ಸೆಟ್‌ಗಳ ಮೂಲಕ ಸೋಲನುಭವಿಸಿತು. ಬ್ಯಾಡ್‌ಮಿಂಟನ್‌ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೊಡಗಿನವರಾದ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ ಕ್ರಾಸ್ಟೊ ಜೋಡಿ ಗ್ರೂಪ್ ಹಂತದ ಮೂರು ಪಂದ್ಯಗಳಲ್ಲಿಯೂ ಸೋಲನುಭವಿಸಿದ್ದು ಕ್ರೀಡಾಕೂಟದಿಂದ ಹೊರಗುಳಿದಿದೆ.