ಅನಿಲ್ ಎಚ್.ಟಿ.
ಮಡಿಕೇರಿ, ಜು. ೩೦: ಮಂಗಳವಾರ ಬೆಳಗ್ಗಿನ ಜಾಣ ೪ ಗಂಟೆ ವೇಳೆಗೆ ಮನೆ ಮುಂದೆ ನಿಲ್ಲಿಸಿದ್ದ ಕಾರ್, ವ್ಯಾನ್‌ನೊಳಗೆ ನುಗ್ಗಿದ ನೀರು ನಂತರ ಮನೆಯೊಳಕ್ಕೂ ನುಗ್ಗಿಯೇ ಬಿಟ್ಟಿತ್ತು. ಮನೆಯ ಮೊದಲ ಹಂತವನ್ನು ಆಕ್ರಮಿಸಿದ್ದ ಮಹಾಮಳೆಯ ನೀರಿನಿಂದ ತಪ್ಪಿಸಿಕೊಂಡು ಎರಡನೇ ಮಹಡಿಗೆ ಅನೇಕರು ಬಂದು ನಿಂತುಕೊAಡೆವು, ನೀರಿನ ಜೊತೆಯೇ ಹಾವು, ಹುಳುಗಳು ಬರಲಾರಂಭಿಸಿ ಜೀವಭಯ ಉಂಟು ಮಾಡಿದವು, ಇಲ್ಲಿಂದ ತಪ್ಪಿಸಿಕೊಂಡು ಬರಲು ಸಾಧ್ಯವೇ ಇಲ್ಲದಂಥ ದುಸ್ಥಿತಿ ಇತ್ತು.
ಹೀಗೆಂದು ಕೇರಳದಲ್ಲಿನ ಮಹಾಮಳೆಯ ಸಂಕಷ್ಟವನ್ನು ‘ಶಕ್ತಿ’ಯೊಂದಿಗೆ ಹೇಳಿದವರು ಮೂಲತ ಸಂಪಾಜೆಯವರಾದ ಲೈನ್ಕಜೆ ಮಧುರಾಭಟ್, ವಯಾನಡಿನ ಸಮೀಪದ ಕಲ್ಪೆಟ್ಟದಲ್ಲಿ ಇತ್ತೀಚಿಗೆ ಕೆಫೆ ಪ್ರಾರಂಭಿಸಿದ್ದ ಮಧುರಾ ಲೈನ್ಕಜೆ ಹೇಳುವಂತೆ ಭೂಕುಸಿತ ಉಂಟಾದ ಸ್ಥಳದಿಂದ ಕಲ್ಪೆಟ್ಟ ೧೦ ಕಿಮೀ ದೂರದಲ್ಲಿದೆ, ಆದರೆ ಕಲ್ಪೆಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಹೇಗಿದೆ ಎಂದರೆ ಊರ ತುಂಬೆಲ್ಲಾ ನೀರು ತುಂಬಿಕೊAಡಿದೆ.
ಪ್ರತೀ ಮನೆಗೂ ನೀರು ನುಗ್ಗಿ ವಾಹನಗಳು, ಸಾಮಾಗ್ರಿಗಳಿಗೆ ಹಾನಿ ಉಂಟಾಗಿದೆ. ಮನೆಯಿಂದ ಹೊರಬಂದರೆ ನೀರು ಕುತ್ತಿಗೆಯ ಮಟ್ಟದವರೆಗೂ ತುಂಬಿಕೊAಡಿದೆ. ನಮ್ಮನ್ನು ಬೆಳಿಗ್ಗೆ ರಕ್ಷಣಾ ಪಡೆಯವರು ಬಂದು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಿದರು. ಅನೇಕರು ಅಂಗನವಾಡಿಗಳಲ್ಲಿ ಆಶ್ರಯ ಪಡೆದಿದ್ದಾರೆ.
ರಾಜಕಾಲುವೆಗಳು ಅತಿಕ್ರಮಣಗೊಂಡಿದ್ದು, ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದ ಪರಿಸ್ಥಿತಿ ಕೂಡ ಈ ದುರಂತಕ್ಕೆ ಕಾರಣ. ಹೆಸರಾಂತ ಪ್ರವಾಸಿ ತಾಣ ಕಲ್ಪೆಟ್ಟದಲ್ಲಿಯೇ ಈ ಸ್ಥಿತಿಯಾಗಿದ್ದರೆ. ವಯನಾಡಿನಲ್ಲಿ ಭೂಕುಸಿತ ಉಂಟಾದ ಮೂರು ಊರುಗಳ ದುಸ್ಥಿತಿಯನ್ನು ಊಹಿಸಬಹುದಾಗಿದೆ ಎಂದು ಮಧುರಾ ಹೇಳಿದರು.