ಸುಂಟಿಕೊಪ್ಪ, ಜು. ೩೦: ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ನಗದು ದೋಚಿದ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.

ಸುಂಟಿಕೊಪ್ಪದ ಹೊಸ ಬಡಾವಣೆಯ ಮನು ಅಚ್ಚಮ್ಮಯ್ಯ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯ ಬೀಗವನ್ನು ಮುರಿದು ಒಳನುಗ್ಗಿ ಮನೆಯಲ್ಲಿದ್ದ ೩ ಕಪಾಟುಗಳನ್ನು ಜಾಲಾಡಿ ೧ ಲಕ್ಷದ ೭೪ ಸಾವಿರ ಮೌಲ್ಯದ ೩ ಪೌನ್ ಚಿನ್ನ ಹಾಗೂ ರೂ. ೬ ಸಾವಿರ ನಗದನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಮನೆ ಮಾಲೀಕ ಮನು ಅಚ್ಚಮ್ಮಯ್ಯ ಅವರು ಸೋಮವಾರ ಸಂಜೆ ೪ ಗಂಟೆಗೆ ಮನೆಗೆ ಬೀಗ ಹಾಕಿ ಕುಶಾಲನಗರದಲ್ಲಿರುವ ಮನೆಗೆ ತೆರಳಿದ್ದು ಮಂಗಳವಾರ ಬೆಳಿಗ್ಗೆ ಹೊಸ ಬಡಾವಣೆಯ ಮನೆಗೆ ಆಗಮಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ನಂತರ ಸುಂಟಿಕೊಪ್ಪ ಠಾಣೆಗೆ ಮಾಹಿತಿ ನೀಡಿದ್ದು, ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್, ಅಪರಾಧ ಪತ್ತೆ ದಳದ ಅಧಿಕಾರಿ ಸ್ವಾಮಿ, ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮಡಿಕೇರಿಯಿಂದ ಸ್ಥಳಕ್ಕೆ ಶ್ವಾನದಳ ಹಾಗೂ ಬೆಳಚ್ಚು ತಜ್ಞರು, ಅಪರಾಧ ವಿಭಾಗದ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು.ೆ. ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.