ಮಡಿಕೇರಿ, ಜು. ೩೦: ಕಳೆದ ಹಲವಾರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕೊಡಗು ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು ಈ ಪರಿಸ್ಥಿತಿ ಇನ್ನೂ ಮುಂದುವರಿಯುತಲೇ ಇದೆ. ಭಾರೀ ಮಳೆ-ಗಾಳಿಗೆ ಜಿಲ್ಲೆ ತತ್ತರಿಸುತ್ತಿದ್ದು, ಇದೀಗ ಮತ್ತೆ ಭಾನುವಾರ ಅಪರಾಹ್ನದಿಂದ ಇನ್ನಷ್ಟು ರಭಸದ ಮಳೆ ಸುರಿಯುತ್ತಿದೆ. ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಡೆ ನೀರಿನ ಮಟ್ಟದಲ್ಲಿ ಭಾರೀ ಹೆಚ್ಚಳ ಕಂಡುಬAದಿದೆ. ಹಲವು ಆಯಾಕಟ್ಟಿನ ಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವೆಡೆ ರಸ್ತೆ ಸಂಪರ್ಕಗಳೂ ಕಡಿತಗೊಂಡಿವೆ. ಜಿಲ್ಲೆಗೆ ಇನ್ನು ೨ ದಿನ ರೆಡ್ ಅಲರ್ಟ್ ಘೋಷಣೆಯನ್ನು ಮಾಡಲಾಗಿದೆ. ಕಾವೇರಿ, ಲಕ್ಷö್ಮಣತೀರ್ಥ ಸೇರಿದಂತೆ ನದಿ, ತೋಡು, ತೊರೆಗಳು ಉಕ್ಕಿ ಹರಿಯುತ್ತಿದ್ದು ಮತ್ತೊಮ್ಮೆ ಪ್ರವಾಹ ಭೀತಿಯೂ ಎದುರಾಗಿದೆ. ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗುತ್ತಲೇ ಇದೆ.

ಬೇತ್ರಿಯಲ್ಲಿ ೬ ಮಂದಿ ರಕ್ಷಣೆ

ಬೇತ್ರಿಯ ಕಾಕೋಟುಪರಂಬು ಬಳಿ ಕಾವೇರಿ ನದಿ ನೀರಿನಲ್ಲಿ ಇಂದು ಬೆಳಿಗ್ಗೆ ೬ ಮಂದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು ಇವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ಅಪಾಯದಿಂದ ಪಾರು ಮಾಡಿರುವ ಘಟನೆಯೂ ನಡೆದಿದೆ. ಇದೀಗ ಇವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಭಾಗಮಂಡಲ ದಲ್ಲಿ ದೇವಾಲಯದ ಮೆಟ್ಟಿಲಿನ ತನಕವೂ ನೀರು ಆವರಿಸಿದೆ. ಹಲವಾರು ಕಡೆಗಳಲ್ಲಿ ರಸ್ತೆ ಕುಸಿತ, ಬರೆ ಜರಿತ, ಮರಗಳು ಉರುಳಿ ಬಿದ್ದಿರುವ ಘಟನೆಗಳೂ ಸಂಭವಿಸಿದ್ದು ಇಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಭಾಗಮಂಡಲ, ಬೇತ್ರಿ, ಕೊಟ್ಟಮುಡಿ, ಕರಡಿಗೋಡು, ಕುಶಾಲನಗರ, ಕಣಿವೆ, ಹಾರಂಗಿ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಭಾರೀ ಹೆಚ್ಚಳವಾಗಿದೆ. ಹಾರಂಗಿ ಜಲಾಶಯಕ್ಕೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಮಳೆ ಮುಂದುವರೆದ ಹಿನ್ನೆಲೆ ತಾ. ೩೧ರಂದು (ಇಂದು) ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಸರಾಸರಿ ೪.೭೦ ಇಂಚು

ಇಡೀ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣದಲ್ಲಿ ಭಾರೀ ಹೆಚ್ಚಳ ಕಂಡುಬAದಿದೆ. ಮಂಗಳವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೪.೭೦ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೭.೨೦ ಇಂಚು, ವೀರಾಜಪೇಟೆ ೪.೯೮, ಪೊನ್ನಂಪೇಟೆ ೫.೧೫, ಸೋಮವಾರಪೇಟೆ ೪.೦೮ ಹಾಗೂ ಕುಶಾಲನಗರ ತಾಲೂಕಿನಲ್ಲಿ ೨.೦೮ ಇಂಚು ಮಳೆ ದಾಖಲಾಗಿದೆ.

ಎಲ್ಲಾ ಹೋಬಳಿಗಳಲ್ಲೂ ಅಧಿಕ

ಜಿಲ್ಲೆಯ ಎಲ್ಲಾ ಹೋಬಳಿ ಗಳಲ್ಲೂ ಭಾರೀ ಮಳೆ ಸುರಿದಿದೆ. ವಿವಿಧ ಹೋಬಳಿಗಳ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಿದ್ದು ಜನರು ಪರಿತಪಿಸುವಂತಾಗಿದೆ. ಕಳೆದ ೨೪ ಗಂಟೆಗಳಲ್ಲಿ ಭಾಗಮಂಡಲ ಹೋಬಳಿಯಲ್ಲಿ ೯.೮೦ ಇಂಚಿನಷ್ಟು ಭಾರೀ ಮಳೆಯಾಗಿದೆ. ಮಡಿಕೇರಿ ೪.೫೧, ನಾಪೋಕ್ಲು ೬.೯೧, ಸಂಪಾಜೆ ೭.೩೮, ವೀರಾಜಪೇಟೆ ೫.೬೮, ಅಮ್ಮತ್ತಿ ಹೋಬಳಿಯಲ್ಲಿ ೪.೩೦ ಇಂಚು ಮಳೆಯಾಗಿದೆ. ಹುದಿಕೇರಿ ೫.೮೯, ಶ್ರೀಮಂಗಲ ೫.೫೭, ಪೊನ್ನಂಪೇಟೆ ೫.೯೬, ಬಾಳೆಲೆ ೩.೨೦, ಸೋಮವಾರಪೇಟೆ ೩.೨೦, ಶನಿವಾರಸಂತೆ ೨.೯೨, ಕೊಡ್ಲಿಪೇಟೆ ೩.೬೦, ಸುಂಟಿಕೊಪ್ಪ ೨.೪೮ ಹಾಗೂ ಕುಶಾಲನಗರ ಹೋಬಳಿಯಲ್ಲಿ ೧.೬೮ ಇಂಚು ಮಳೆಯಾಗಿದೆ.(೩ನೇ ಪುಟದಿಂದ) ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿರುವ ಕೆರೆಯು ಅತಿಯಾದ ಮಳೆಯಿಂದ ಭರ್ತಿಯಾಗಿ ಕೆರೆಯ ಒಂದು ಭಾಗದಲ್ಲಿ ಮಣ್ಣಿನ ಕುಸಿತದಿಂದಾಗಿ ಏರಿ ಒಡೆದು ಕೆರೆ ನೀರು ಸಮೀಪದ ಜಮೀನಿಗೆ ನುಗ್ಗಿದ ಪರಿಣಾಮ ಬೆಳೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ರೈತರುಗಳಾದ ಮಂಜುನಾಥ, ಹರೀಶ್ ಎಂಬವರಿಗೆ ಸೇರಿದ ಗದ್ದೆಗಳು ಜಲಾವೃತಗೊಂಡಿವೆ. ಅಲ್ಲದೆ ಬಿತ್ತನೆ ಮಾಡಿದ ಭತ್ತವು ನೀರಿನಲ್ಲಿ ಕೊಚ್ಚಿಹೋಗಿದೆ.

ಕೆರೆ ಒಡೆದ ಸ್ಧಳಕ್ಕೆ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಅಭಿವೃದ್ಧಿ ಅಧಿಕಾರಿ ಸಂತೋಷ್, ಕಂದಾಯ ನಿರೀಕ್ಷಕ ಸಂತೋಷ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ಕಿರ್ತನ್, ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಮ್ಮ ರಾಮೇಗೌಡ ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ರೈತರು ಹಾಜರಿದ್ದರು.

ಕೆರೆ ಕಾಲುವೆ ಒತ್ತುವರಿಯನ್ನು ಸಮೀಪದ ರೈತರು ಬಿಡುವ ಮೂಲಕ ಸಹಕಾರ ನೀಡಬೇಕು. ಮಳೆ ಕಡಿಮೆಯಾದ ಸಂದರ್ಭ ಸ್ಥಳೀಯ ರೈತರೊಂದಿಗೆ ಮಾತುಕತೆ ನಡೆಸಿ ಕಾಲುವೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಕೆರೆಯ ದುರಸ್ತಿಕಾರ್ಯ ಕೈಗೊಂಡ ಸಂದರ್ಭದಲ್ಲಿ ಕೆರೆಯ ನೀರು ಸರಾಗವಾಗಿ ಹರಿಯಲು ನೂತನ ತಂತ್ರಜ್ಞಾನದ ಮೂಲಕ ಪೈಪ್‌ಗಳ ಅಳವಡಿಕೆ ಮತ್ತು ಸಮರ್ಪಕವಾದ ಕಾಲುವೆಯನ್ನು ನಿರ್ಮಿಸಲು ಅರ್ಜಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಈ ವ್ಯಾಪ್ತಿಯ ರೈತರ ಆರೋಪವಾಗಿದೆ.ಕರಿಕೆ: ಭಾಗಮಂಡಲ ಕರಿಕೆ ಅಂತರ್ ರಾಜ್ಯ ಹೆದ್ದಾರಿಯ ಹದಿಮೂರನೇ ಮೈಲು ಎಂಬಲ್ಲಿ ಹಲವೆಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದ್ದು, ನಂತರ ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್ ಮತ್ತು ಪಂಚಾಯಿತಿ ಸದಸ್ಯ ಕೆ.ಎ. ನಾರಾಯಣ ನೇತೃತ್ವದಲ್ಲಿ ಗ್ರಾಮಸ್ಥರು ತೆರವುಗೊಳಿಸಿದರು. ಈ ರಸ್ತೆಯ ಹಲವೆಡೆ ಬರೆ ಕೂಡ ಕುಸಿತವಾಗಿದ್ದು, ಮರಗಳು ರಸ್ತೆಗೆ ಬಾಗಿ ಬೀಳುವ ಸ್ಥಿತಿಯಲ್ಲಿವೆ. ರಾತ್ರಿ ಸಂಚಾರಕ್ಕೆ ಅನಾನೂಕೂಲವಾಗಿದ್ದು ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣಿಸಲು ಸ್ಥಳೀಯ ಪಂಚಾಯಿತಿ ಕೋರಿದೆ.ಮಡಿಕೇರಿ: ಭಾರಿ ಗಾಳಿ ಸಹಿತ ಮಳೆಯಿಂದ ಭಾಗಮಂಡಲ ಹೋಬಳಿಯ ತಣ್ಣಿಮಾನಿ ಗ್ರಾಮದ ಕೆ.ಪಿ. ತಮ್ಮಯ್ಯ ಅವರ ಮನೆಯ ಮೇಲ್ಛಾವಣಿ ಮಳೆಯಿಂದ ಕುಸಿದು ತೀವ್ರ ಹಾನಿ ಉಂಟಾಗಿದೆ.

ಮನೆಯ ಹೆಂಚು ಪುಡಿಪುಡಿಯಾಗಿದ್ದು, ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿಯಲ್ಲಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.ಮಡಿಕೇರಿ: ಬೆಟ್ಟಗೇರಿ ಸಮೀಪದ ಕುಂಬಾರಕೊಪ್ಪ ರಸ್ತೆ ಬದಿಯಲ್ಲಿ ಭೂಕುಸಿತ ಸಂಭವಿಸಿದ್ದು, ಅಪಾಯದ ಭೀತಿ ಸೃಷ್ಟಿಯಾಗಿದೆ.

ರಸ್ತೆಯ ಬದಿ ಹಾಗೂ ಪಕ್ಕದ ಬರೆಯಿಂದಲೂ ಮಣ್ಣು ಕುಸಿದಿದೆ. ಮಳೆ ಮುಂದುವರೆದರೆ ರಸ್ತೆ ಮತ್ತಷ್ಟು ಹಾಳಾಗುವ ಸಾಧ್ಯತೆಯೂ ಇದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಮಡಿಕೇರಿ: ಚೇರಂಬಾಣೆ ಬಳಿಯ ಮದೆ-ಬೇತೂರು-ಕೊಳಗದಾಳು ಮಾರ್ಗಮಧ್ಯೆ ರಸ್ತೆಗೆ ಬರೆಕುಸಿದು ಕೆಲಕಾಲ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಂತರ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಡಿಕೇರಿ: ಧಾರಾಕಾರ ಮಳೆಯಿಂದಾಗಿ ಎಮ್ಮೆಮಾಡು ಗ್ರಾಮದ ಅಭಿದ್ ತಂಗಳ್ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆೆ. ಮನೆಯ ಹಿಂಭಾಗದ ಗೋಡೆ ಧರಾಶಾಹಿಯಾದ ಪರಿಣಾಮ ಮನೆಯೂ ಸಂಪೂರ್ಣ ಬೀಳುವ ಆತಂಕ ಸೃಷ್ಟಿಯಾಗಿದೆ. ಮನೆಯವರು ಸ್ಥಳಾಂತರಗೊAಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಮಡಿಕೇರಿ: ಇಲ್ಲಿನ ಇಂದಿರಾ ನಗರದಲ್ಲಿ ಎರಡು ಮನೆಗಳು ಅಪಾಯ ಸ್ಥಿತಿಯಲ್ಲಿದ್ದು, ಮನೆಗಳಲ್ಲಿ ವಾಸಿಸುವವರನ್ನು ನಗರಸಭೆಯಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಿದ್ದು, ಇಂದಿರಾ ನಗರದ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ವಾಸಕ್ಕೆ ನಗರಸಭೆ ವ್ಯವಸ್ಥೆ ಕಲ್ಪಿಸಿದೆ. ಈ ಹಿಂದೆ ಅವರಿಗೆ ಸ್ಥಳಾಂತರಗೊಳ್ಳುವAತೆ ನೋಟಿಸ್ ನೀಡಲಾಗಿತ್ತು. ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮದ ಹೊಸಗದ್ದೆ ಎಂಬಲ್ಲಿ ರಸ್ತೆ ಜಲಾವೃತಗೊಂಡಿದೆ. ಸ್ಥಳಕ್ಕೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರ ಆದೇಶದ ಮೇರೆಗೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಹೋಮಪ್ಪ ಬಣಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಡಿಕೇರಿ: ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ರಸ್ತೆ ಜಲಾವೃತಗೊಳ್ಳಬಾರದೆಂಬ ಮುನ್ನೆಚ್ಚರಿಕೆಯಿಂದ ಮಡಿಕೇರಿ ತಾಲೂಕಿನ ಬಾಡಗ ಗ್ರಾಮದ ಮುಖ್ಯ ರಸ್ತೆ ಬದಿಗೆ ಸ್ಯಾಂಡ್ ಬ್ಯಾಗ್’ ಗಳನ್ನು ಲೋಕೋಪಯೋಗಿ ಇಲಾಖೆಯಿಂದ ಜೋಡಿಸಲಾಗಿದೆ. ಜೊತೆಗೆ ರಸ್ತೆಯ ಚರಂಡಿಯನ್ನು ಶುಚಿಗೊಳಿಸಿದ್ದು, ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆö ಮಾಡಲಾಗಿದೆ. ಸಿದ್ದಾಪುರ: ಧಾರಾಕಾರ ಮಳೆ ಹಾಗೂ ಗಾಳಿಗೆ ಸಿಲುಕಿ ಮನೆ ಕುಸಿದ ಘಟನೆ ಚೆನ್ನಯನಕೋಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊಳಮಾಳದ ಒಂದನೇ ವಾರ್ಡಿನ ನಿವಾಸಿ ಮಂಜುಳಾ ಸುರೇಂದ್ರ ಎಂಬವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿರುತ್ತದೆ. ಮನೆಯ ಮಂದಿ ಪ್ರಾಣಪಾಯದಿಂದ ಪಾರಾಗಿದ್ದು, ಮನೆಯ ಸಾಮಾಗ್ರಿಗಳು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಶೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆ ವತಿಯಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಶೀಲಾ ಮನವಿ ಮಾಡಿದ್ದಾರೆ.ಮಡಿಕೇರಿ: ಎಸ್. ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯಲ್ಲಿ ಕಾವೇರಿ ಹೊಳೆಯಿಂದ ಪ್ರವಾಹ ಏರ್ಪಟ್ಟು ಮುಳುಗಡೆಯಾಗುವ ಸಾಧ್ಯತೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಜಿಲ್ಲೆಯಲ್ಲಿ ಸರಾಸರಿ ೩೭.೬೮ ಇಂಚು ಅಧಿಕ

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಕಳೆದ ಬಾರಿಗಿಂತ ೩೭.೬೮ ಇಂಚು ಅಧಿಕ ಮಳೆ ದಾಖಲಾಗಿದೆ. ಜನವರಿಯಿಂದ ಈತನಕ ೮೪.೫೨ ಇಂಚು ಮಳೆಯಾಗಿದ್ದು, ಕಳೆದ ವರ್ಷ ಈ ಪ್ರಮಾಣ ೪೬.೮೪ ಇಂಚಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಕಳೆದ ಬಾರಿಗಿಂತ ೩೫.೫೫ ಇಂಚು, ವೀರಾಜಪೇಟೆ ೪೦.೭೨, ಪೊನ್ನಂಪೇಟೆ ೪೪.೫೫, ಸೋಮವಾರಪೇಟೆ ೪೭.೨೩ ಹಾಗೂ ಕುಶಾಲನಗರ ತಾಲೂಕಿನಲ್ಲಿ ೨೦.೨೭ ಇಂಚು ಅಧಿಕ ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಈ ಬಾರಿ ೧೧೫ ಇಂಚು, ಕಳೆದ ವರ್ಷ ೭೯.೪೫, ವೀರಾಜಪೇಟೆ ಈ ವರ್ಷ ೭೭.೭೬, ಕಳೆದ ಬಾರಿ ೩೭.೦೪, ಪೊನ್ನಂಪೇಟೆ ತಾಲೂಕಿಗೆ ಈ ಬಾರಿ ೮೨.೨೬ ಹಾಗೂ ಕಳೆದ ವರ್ಷ ೩೭.೭೧ ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿಗೆ ಈ ಬಾರಿ ೯೭, ಕಳೆದ ವರ್ಷ ೪೯.೭೭, ಕುಶಾಲನಗರ ತಾಲೂಕಿಗೆ ಈ ಬಾರಿ ೫೦.೪೮ ಹಾಗೂ ಕಳೆದ ವರ್ಷ ೩೦.೨೧ ಇಂಚು ಮಳೆಯಾಗಿತ್ತು.ಚೆಟ್ಟಳ್ಳಿ: ಸುಂಟಿಕೊಪ್ಪ- ಮಾದಾಪುರದ ಸಂಪರ್ಕ ಸೇತುವೆಯಾದ ಹರದೂರು ಸೇತುವೆಯಲ್ಲಿ ರಾಶಿ ರಾಶಿ ತ್ಯಾಜ್ಯ, ಮರದ ದಿಮ್ಮಿಗಳು ಹರಿದು ಬರುತ್ತಿವೆ. ಮಳೆಯ ಪ್ರಮಾಣ ಹೆಚ್ಚಾದಂತೆ ನದಿಗಳು ಮೈತುಂಬಿ ಹರಿಯತೊಡಗಿ ಸುತ್ತಲಿನ ತ್ಯಾಜ್ಯ, ಮರಮುಟ್ಟುಗಳು ನದಿಯಲ್ಲಿ ತೇಲಿಬರತೊಡಗಿವೆ. ಇಲ್ಲಿನ ಹಳೆಯ ಕೆಳ ಸೇತುವೆ ಮೇಲೆ ನೀರಿನಮಟ್ಟ ಏರ ತೊಡಗಿದಂತೆ. ನದಿ ನೀರು ಕಲುಷಿತಗೊಳ್ಳುತ್ತಿದೆ.ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ಭಾಗದ ನದಿ ತೀರದ ಒಂದು ಕುಟುಂಬವನ್ನು ಸ್ಥಳೀಯ ಸರಕಾರಿ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ಹಲವಾರು ಮಂದಿ ನದಿ ತೀರದ ನಿವಾಸಿಗಳು ಪರಿಹಾರ ಕೇಂದ್ರಕ್ಕೆ ಬರಲು ಹಿಂದೇಟು ಹಾಕಿದರು. ಕಂದಾಯ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಕಿರಣ್ ಗೌರಯ್ಯ ಮನೆ ಮನೆಗೆ ತೆರಳಿ ಪರಿಹಾರ ಕೇಂದ್ರಕ್ಕೆ ಬರುವಂತೆ ಮನವಿ ಮಾಡಿದರೂ ಪರಿಹಾರ ಕೇಂದ್ರಕ್ಕೆ ಬರಲು ನಿರಾಕರಿಸಿದರು. ಇದೀಗ ಒಂದೇ ಕುಟುಂಬದ ಐದು ಮಂದಿ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ.ಸಿದ್ದಾಪುರ: ಧಾರಾಕಾರ ಮಳೆ ಪ್ರವಾಹದಿಂದಾಗಿ ಅಮ್ಮತ್ತಿ ಸಮೀಪದ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಚ್ಚಿನಾಡು ಗ್ರಾಮದ ನದಿ ತೀರದ ಅಪಾಯದಲ್ಲಿರುವ ೧೨ ಕುಟುಂಬಗಳ ೩೦ ಮಂದಿಯನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ನೇತೃತ್ವದಲ್ಲಿ ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು. ವೀರಾಜಪೇಟೆ ಹೋಬಳಿ ತೋರ ಗ್ರಾಮದ ಭೂಕುಸಿತ ಪ್ರದೇಶದಲ್ಲಿರುವ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿರುತ್ತದೆ.ಸಾಕಾನೆ ಶಿಬಿರ ಪ್ರವೇಶ ನಿರ್ಬಂಧ

ಕುಶಾಲನಗರ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರಿಗೆ ಎರಡು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ದುಬಾರೆ ಮತ್ತು ಹಾರಂಗಿಯ ಸಸ್ಯೋದ್ಯಾನ, ಆನೆ ಶಿಬಿರಗಳಿಗೆ ಇಂದು ಮತ್ತು ಆಗಸ್ಟ್ ಒಂದರAದು ಪ್ರವಾಸಿಗರ ಭೇಟಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಕೂಡಿಗೆ: ತುಂಬಿ ಹರಿಯುತ್ತಿರುವ ಕಾವೇರಿ ಕಣಿವೆ ತೂಗು ಸೇತುವೆ ಸಮೀಪದಲ್ಲಿ ಅಪಾಯಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತೂಗು ಸೇತುವೆ ಮೇಲೆ ಯಾರು ಸಂಚರಿಸದAತೆ ಮುನ್ನೆಚ್ಚರಿಕೆ ಕ್ರಮವಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ನಿರ್ಬಂಧ ವಿಧಿಸಿದ್ದಾರೆ. ಡಿವೈಎಸ್‌ಪಿ ಗಂಗಾಧರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾರಂಗಿ ಮತ್ತು ಕಾವೇರಿ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸಂಗಮದಿAದ ಮುಂದೆ ಹರಿಯುವ ಕಾವೇರಿ ನದಿಯು ಅಪಾಯಮಟ್ಟದಲ್ಲಿ ಹರಿಯುತ್ತಿರುವುದರಿಂದಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಫೀರ್ ಮಹಮ್ಮದ್, ಗ್ರಾಮ ಪಂಚಾಯತಿ ಸದಸ್ಯ ಹೆಚ್.ಎನ್.ಶಿವನಂಚಪ್ಪ ಇದ್ದರು. (೫ನೇ ಪುಟಕ್ಕೆ) (೪ನೇ ಪುಟದಿಂದ) ಗೋಣಿಕೊಪ್ಪಲು: ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಕ್ಷಿಣಕೊಡಗಿನಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಒಂದೇ ಸಮನೆ ಮಳೆ ಸುರಿಯುತ್ತಿದ್ದು, ಇದರೊಂದಿಗೆ ಗಾಳಿಯು ಬೀಸುತ್ತಿದೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ.

ಮಳೆಯೊಂದಿಗೆ ರಭಸದಿಂದ ಗಾಳಿ ಬೀಸುತ್ತಿದ್ದು ಮೇಯಲು ಬಿಟ್ಟಿದ್ದ ದನಕರುಗಳು ಮಳೆ, ಗಾಳಿಯ ರಭಸಕ್ಕೆ ಮನೆಯ ಕೊಟ್ಟಿಗೆಯಲ್ಲಿಯೇ ಕಾಲ ಕಳೆಯುತ್ತಿವೆ. ಬಾಳೆಲೆ - ನಿಟ್ಟೂರು ಮುಖ್ಯ ರಸ್ತೆಯ ಮಾರ್ಗವಾಗಿ ಹರಿಯುತ್ತಿರುವ ಲಕ್ಷö್ಮಣ ತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಗೋಣಿಕೊಪ್ಪ ನಗರದ ಕೀರೆಹೊಳೆಯಲ್ಲಿ ನೀರಿನ ಮಟ್ಟ ಹಂತ ಹಂತವಾಗಿ ಹೆಚ್ಚಾಗುತ್ತಿದೆ.ನದಿ, ಹಳ್ಳ, ತೊರೆಗಳು ನೀರಿನಿಂದ ತುಂಬುತ್ತಿವೆ. ಮುಂಜಾನೆಯಿAದಲೇ ಮಳೆ ಸುರಿದ ಹಿನ್ನೆಲೆಯಲ್ಲಿ ಗೋಣಿಕೊಪ್ಪ ನಗರದಲ್ಲಿ ವ್ಯಾಪಾರ ವಹಿವಾಟು ಕಡಿಮೆ ಆಗಿತ್ತು. ನಗರಕ್ಕೆ ಬರುವ ಜನ ಸಂದಣಿ ಎಂದಿಗಿAತಲೂ ಕಡಿಮೆಯಾಗಿದೆ.

ಭತ್ತದ ಗದ್ದೆಗಳಲ್ಲಿ ನೀರಿನ ಮಟ್ಟ ಹೆಚ್ಚಾದಂತೆ ಸಹಜವಾಗಿಯೇ ರೈತರ ಮೊಗದಲ್ಲಿ ಹರ್ಷ ಮೂಡಿತ್ತು. ಇದೀಗ ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಮಿಕರು ಭತ್ತದ ಗದ್ದೆಗಳಲ್ಲಿ ಕೆಲಸ ನಿರ್ವಹಿಸಲು ಮಳೆಯು ಅವಕಾಶ ನೀಡಲಿಲ್ಲ. ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿನ ೪೫ ಗಿರಿಜನ ಕುಟುಂಬಗಳ ಮನೆಗೆ ತೆರಳುವ ಸಂಪರ್ಕ ರಸ್ತೆಯ ಸೇತುವೆಯ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಸಂಪರ್ಕ ಕಡಿತಗೊಂಡಿದೆ.

ಸ್ಥಳಕ್ಕೆ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್, ಆರ್ ಐ ಸುದೀಂದ್ರ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು, ಬದಲಿ ಮಾರ್ಗದಲ್ಲಿ ಸದ್ಯದ ಮಟ್ಟಿಗೆಯಲ್ಲಿ ಕಾಲ್ನಡಿಗೆ ಮೂಲಕ ತೆರಳಲು ಅವಕಾಶ ಕಲ್ಪಿಸಿದರು. ವಾಹನಗಳು ಸಂಚಾರ ಮಾಡದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.

ಈಚೂರು ಗ್ರಾಮದ ಅಯ್ಯಪ್ಪ ಪೈಸಾರಿಗೆ ತೆರಳುವ ಡೋಬಿ ಕಾಲೋನಿಯ ರಸ್ತೆಯ ಮೋರಿ ಕುಸಿದಿತ್ತು. ಸ್ಥಳಕ್ಕೆ ತºಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದರು. ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಹಲವು ಖಾಸಗಿ ಬಸ್‌ಗಳು ಸಂಚಾರ ನಡೆಸಲಿಲ್ಲ. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗಿದ್ದು, ನಾಗರಿಕರು ತಮ್ಮ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಗೋಣಿಕೊಪ್ಪ ನಗರಕ್ಕೆ ಆಗಮಿಸಿದ್ದರು.

ಸೋಮವಾರಪೇಟೆ: ಬಿಡುವು ನೀಡಿದರೂ ಆಗಾಗ್ಗೆ ಅಬ್ಬರಿಸುವ ಮಳೆಯಿಂದಾಗಿ ಜನತೆಯಲ್ಲಿ ಆತಂಕ ಮುಂದುವರಿದಿದೆ. ಕಳೆದ ೧೫ ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಹಲವಷ್ಟು ನಷ್ಟಗಳು ಸಂಭವಿಸಿವೆ. ವಾತಾವರಣದಲ್ಲಿನ ಶೀತದಿಂದಾಗಿ ಹಾನಿಯ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಭೂಮಿಯಲ್ಲಿ ತೇವಾಂಶ ಅಧಿಕವಾಗಿದ್ದು, ಬರೆ, ತೋಟಗಳು ಕುಸಿಯುತ್ತಿವೆ. ತಾಲೂಕಿನ ಶಾಂತಳ್ಳಿ ಹೋಬಳಿಯಾದ್ಯಂತ ಮಳೆಯ ಆರ್ಭಟ ಹೆಚ್ಚಿದೆ. ಅಭಿಮಠ ಬಾಚಳ್ಳಿ ಗ್ರಾಮದ ಪಿ.ಎಂ. ಈಶ್ವರ ಅವರಿಗೆ ಸೇರಿದ ವಾಸದ ಮನೆಯ ಹಿಂಭಾಗ ಬರೆ ಕುಸಿತವಾಗಿದೆ. ಮಳೆ ಮುಂದುವರಿದು ಇನ್ನಷ್ಟು ಕುಸಿದರೆ ವಾಸದ ಮನೆಗೂ ಅಪಾಯ ತಂದೊಡ್ಡಲಿದೆ.

ಚೌಡ್ಲು ಗ್ರಾಮದ ಗಾಂಧಿನಗರದ ತೋಡು-ಗದ್ದೆಯ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಚೌಡ್ಲು ಗ್ರಾಮದ ಯೋಗೇಂದ್ರ ಅವರಿಗೆ ಸೇರಿದ ಸುಮಾರು ಮುಕ್ಕಾಲು ಎಕರೆ ಕಾಫಿ ತೋಟದಲ್ಲಿ ಭೂಕುಸಿತವಾಗಿದ್ದು, ಗಿಡಮರಗಳು ನೆಲಕ್ಕುರುಳಿ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ.

ತೋಟ ಕುಸಿತದಿಂದಾಗಿ ಇದಕ್ಕೆ ಒತ್ತಿಕೊಂಡAತೆ ಇರುವ ವಾಸದ ಮನೆಗಳಿಗೂ ಸಂಚಕಾರ ತಂದೊಡ್ಡಿದೆ. ಮನೆಯ ಹಿಂಭಾಗ ಬರೆ ಕುಸಿತಗೊಂಡಿದ್ದು, ತಾತ್ಕಾಲಿಕವಾಗಿ ಟಾರ್ಪಲ್ ಅಳವಡಿಸಿ ಮಳೆಯ ನೀರಿನಿಂದ ಬರೆಯನ್ನು ರಕ್ಷಿಸುವ ಕೆಲಸ ಮಾಡಲಾಗಿದೆ.

ಕೂಡಿಗೆ: ಕೂಡಿಗೆ, ಹೆಬ್ಬಾಲೆ, ಹುದುಗೂರು ವ್ಯಾಪ್ತಿಯಲ್ಲಿ ಕಾವೇರಿ ಹಾರಂಗಿ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತಿದಂತೆ ನದಿತಟದ ಗ್ರಾಮಗಳಾದ ಕೂಡಿಗೆ, ಹೆಬ್ಬಾಲೆ, ಹುದುಗೂರು ವ್ಯಾಪ್ತಿಯ ೪೦ ಎಕರೆಗಳಷ್ಟು ಪ್ರದೇಶದ ಗದ್ದೆಗಳು ಜಲಾವೃತಗೊಂಡಿವೆ.

ಕಾವೇರಿ - ಹಾರಂಗಿ ಸಂಗಮವಾಗಿ ಮುಂದೆ ಹರಿಯುವ ಸ್ಥಳದಿಂದ ಕೂಡಿಗೆ- ಕಣಿವೆ ಮಧ್ಯಭಾಗದ ೨೦ ಎಕರೆಗಳಷ್ಟು ನಾಟಿ ಮಾಡಲು ಸಿದ್ದವಾಗಿದ್ದ ಗದ್ದೆಗಳು ಕಾವೇರಿ ನೀರಿನಿಂದ ಜಲಾವೃತಗೊಂಡಿವೆ. ಹೆಬ್ಬಾಲೆ ಸಮೀಪದಲ್ಲಿರುವ ಕರ್ನನಹಳ್ಳದ ಹತ್ತಿರ ಶುಂಠಿ, ಮತ್ತು ಸಿಹಿ ಗೆಣಸು ಬೆಳೆದ ೨೦ಕ್ಕೂ ಹೆಚ್ಚು ಪ್ರದೇಶದ ಜಮೀನಿಗೆ ನೀರು ನುಗ್ಗಿ ಬೆಳೆ ಜಲಾವೃತ ಗೊಂಡಿದೆ. ಹಾರಂಗಿ ಅಣೆಕಟ್ಟೆಯಿಂದ ಹೆಚ್ಚು ನೀರನ್ನು ನದಿಗೆ ಹರಿ�