ಸೋಮವಾರಪೇಟೆ, ಜು. ೩೦: ‘ಮುಂದಿನ ೨೦೨೮ರ ವಿಧಾನ ಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರಗಳಿಂದ ಯಂಗ್ ಸ್ಟರ್‌ಗಳು ಬಿಜೆಪಿಯಿಂದ ಎಂಎಲ್‌ಎಗಳಾಗಬೇಕು. ಇದರಲ್ಲಿ ವೇದಿಕೆಯ ಮೇಲ್ಭಾಗದಲ್ಲಿರುವವರು ಆಗಬಹುದು;ಅಥವಾ ಕೆಳಭಾಗದಲ್ಲಿ ಇರುವವರು ಆಗಬಹುದು’ ಎಂದು ಮಾಜೀ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಭಾಷಣದಲ್ಲಿ ಹೇಳಿದ ಮಾತುಗಳು ವೇದಿಕೆಯ ಮೇಲಿದ್ದವರ ಸಹಿತ ಕೆಳಗಿದ್ದವರಲ್ಲಿಯೂ ಸಂಚಲನ ಸೃಷ್ಟಿಸಿತು.
ಕೊಡವ ಸಮಾಜದಲ್ಲಿ ಮಂಡಲ ಬಿಜೆಪಿಯಿಂದ ಆಯೋಜಿಸಿದ್ದ ಮಂಡಲ ವಿಶೇಷ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರ ದುರಾಡಳಿತ ನಡೆಸುತ್ತಿದೆ. ಮುಖ್ಯಮಂತ್ರಿಗಳು ಮೂಡಾ ಸೇರಿದಂತೆ ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಎಸ್‌ಸಿ ಎಸ್‌ಟಿ ಮೀಸಲು ಅನುದಾನವನ್ನು ಬೇರೆಯ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ. ‘ಕರಪ್ಟ್ ಕಾಂಗ್ರೆಸ್’ ಬಗ್ಗೆ ಜನರಿಗೆ ತಿಳಿಸಬೇಕು. ಭ್ರಷ್ಟತೆಯನ್ನು ಪ್ರಶ್ನಿಸುವ, ಪರಿಣಾಮಕಾರಿಯಾಗಿ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಮಾತನಾಡುತ್ತಿದ್ದರು.
ಮಾತು ಮುಂದುವರೆಸಿದ ಅವರು, ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವ, ಹೋರಾಟ ಮಾಡುವ ಯುವ ನಾಯಕರು ಬೇಕಾಗಿದ್ದಾರೆ. ಎಂ.ಪಿ. ಚುನಾವಣೆಯಲ್ಲಿ ನನ್ನನ್ನು ಜನ ತಿರಸ್ಕರಿಸಿಲ್ಲ. ಪಕ್ಷವೇ ಕೆಲವೊಂದು ಕಾರಣದಿಂದ ಬದಲಾವಣೆ ಮಾಡಿದೆ. ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ ಯುವ ನಾಯಕರು ಎಂದು ಹೇಳಿಕೊಂಡು ಈರ್ವರು ಗೆದ್ದಿದ್ದಾರೆ. ಮುಂದಿನ ೨೦೨೮ರ ಚುನಾವಣೆಯಲ್ಲಿ ಬಿಜೆಪಿಯಿಂದ ಯಂಗ್ ಸ್ಟರ್‌ಗಳು ಎರಡೂ ಕ್ಷೇತ್ರದಲ್ಲಿ ಎಂಎಲ್‌ಎಗಳಾಗಿ ಆಯ್ಕೆಯಾಗಬೇಕು. ಇದಕ್ಕಾಗಿ ಈಗಿನಿಂದಲೇ ಸಾಮಾಜಿಕ ಹೋರಾಟ ಮಾಡಬೇಕು ಎಂದರು.
ಕಳೆದ ೨೫ ವರ್ಷಗಳ ಹಿಂದೆ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಅವರುಗಳು ಯಂಗ್‌ಸ್ಟರ್‌ಗಳಾಗಿದ್ದಾಗ ಪಕ್ಷವನ್ನು ಕಟ್ಟಿದ್ದಾರೆ. ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಶಾಸಕರುಗಳಾಗಿ ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದಾರೆ. ಅವರಂತೆಯೇ ನೀವುಗಳೂ ಸಹ ಹೋರಾಟಕ್ಕಿಳಿಯಬೇಕು. ಹೋರಾಟಗಾರ ಯುವ ನಾಯಕರು ಎಂಎಲ್‌ಎಗಳಾಗಬೇಕೆAದರು.
ಮಾಜಿ ಸಂಸದರ ಈ ಮಾತುಗಳು ಸಭೆಯಲ್ಲಿದ್ದವರಲ್ಲಿ ಒಂದಿಷ್ಟು ಭರವಸೆ, ಗೊಂದಲಗಳಿಗೂ ಕಾರಣವಾಯಿತು. ವೇದಿಕೆಯ ಮೇಲಿದ್ದ ಮಾಜೀ ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳ ಮುಖದಲ್ಲಿ ಅಸಹನೆಯೂ ಕಂಡುಬAತು. ವಿಧಾನ ಸಭಾ ಚುನಾವಣೆಯಲ್ಲಿ ಸೋಲನುಭವಿಸಿದರೂ ಪಕ್ಷ ಸಂಘಟನೆ, ಪಕ್ಷದ ಕಾರ್ಯ ಕ್ರಮಗಳಲ್ಲಿ ತೊಡಗಿಸಿಕೊಂಡಿರುವ ನಾಯಕರ ಪರವಾಗಿರುವವರು ಸಂಸದರ ಮಾತಿಗೆ ಸಪ್ಪಗಾದರು. ಬದಲಾವಣೆ ಹಾಗೂ ಹೊಸ ನಾಯಕತ್ವ ವಹಿಸಿಕೊಳ್ಳಲು ಉತ್ಸುಕರಾಗಿರುವವರು ಹಾಗೂ ಅವರ ಪರವಾಗಿರುವವರು ಮನಸ್ಸಿನಲ್ಲೇ ಸಂಭ್ರಮಿಸಿದರು! ಇದಕ್ಕೂ ಮೊದಲು ಮಾತನಾಡಿದ ಅವರು, ‘ಕಳೆದ ೧೦ ವರ್ಷಗಳ ಕಾಲ ಸಂಸದನಾಗಿ ಕೆಲಸ ಮಾಡಲು ಕೊಡಗಿನ ಜನತೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಆರಂಭದ ವರ್ಷದಲ್ಲಿ ೪೦ ಸಾವಿರ, ನಂತರದ ಚುನಾವಣೆಯಲ್ಲಿ ೮೦ಸಾವಿರ ಲೀಡ್ ಬಂದಿತ್ತು. ಈ ಬಾರಿ ಟಿಕೇಟ್ ಲಭಿಸಿದ್ದರೆ ೧ ಲಕ್ಷಕ್ಕೂ ಅಧಿಕ ಲೀಡ್ ಬರುವ ವಿಶ್ವಾಸವಿತ್ತು. ಆದರೆ ಪಕ್ಷ ಅವಕಾಶ ಕೊಡಲಿಲ್ಲ. ಹಾಗಂತ ಬೇಸರವೂ ಇಲ್ಲ. ನನಗೆ ಬೆಂಬಲ ನೀಡಿದ ಕೊಡಗಿನ ಜನತೆಗೆ ಋಣಿಯಾಗಿದ್ದೇನೆ. ನೀಡಿದ್ದ ಭರವಸೆಗಳು, ಅರ್ಧಕ್ಕೆ ನಿಂತಿದ್ದ ಕೆಲಸಗಳನ್ನು ಮಾಡಿಸಿಕೊಡುವ ಜವಾಬ್ದಾರಿ ನನ್ನದು’ ಎಂದು ಪ್ರತಾಪ್ ಸಿಂಹ ಹೇಳಿದರು. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಗೃಹ ಲಕ್ಷಿö್ಮ ಹೆಸರಿನಲ್ಲಿ ಗಂಡನಿAದ ಹಣ ಕಿತ್ತುಕೊಂಡು ಹೆಂಡತಿಗೆ ನೀಡಲಾಗುತ್ತಿದೆ. ಅದೇ ಹಣವನ್ನು ಮತ್ತೆ ಗಂಡ ತನ್ನ ಹೆಂಡತಿಯಿAದ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆ ಏರಿಕೆ ಹೆಚ್ಚಾಗಿದೆ. ಮದ್ಯ ಮಾರಾಟದ ಅಬಕಾರಿ ಇಲಾಖೆ ಮೂಲಕ ೩೮ ಸಾವಿರ ಕೋಟಿ ನಿರೀಕ್ಷೆ ಮಾಡಲಾಗಿದೆ. ಈ ಹಣದಿಂದ ಸರ್ಕಾರ ನಡೆಸುವ ದುಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಮೈಸೂರು-ಕುಶಾಲನಗರ ಹೈವೇ ಯೋಜನೆಗೆ ಅರಣ್ಯ ಇಲಾಖೆಯಿಂದ ನೀರಾಕ್ಷೇಪಣೆ ಬೇಕಿದೆ. ಇದನ್ನು ಬೆಂಗಳೂರು ಮಟ್ಟದಲ್ಲಿ ವ್ಯವಹರಿಸಲಾಗುವುದು. ಕುಶಾಲನಗರ-ಮಡಿಕೇರಿ-ಮಾಣಿ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿಸುವ ಯೋಜನೆಯೂ ಕೇಂದ್ರದಲ್ಲಿದೆ. ೮೦ಕ್ಕೂ ಅಧಿಕ ಪ್ರದೇಶದಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಿದ್ದು, ಹೊಸದಾಗಿ ೧೨ ಕಡೆ ಟವರ್‌ಗೆ ಬೇಡಿಕೆ ಬಂದಿದೆ. ಭಾರತ್ ಮಾಲಾ ಪರಿಯೋಜನೆ ಅಡಿಯಲ್ಲಿ ಚನ್ನರಾಯಪಟ್ಟಣ, ಸೋಮವಾರಪೇಟೆ, ಮಡಿಕೇರಿ ಹೈವೇಗೆ ಪ್ರಸ್ತಾವನೆ ಸಲ್ಲಿಸಿದ್ದು, ಈ ರಸ್ತೆಯೂ ಆಗಲಿದೆ. ಸಂಸದನಾಗಿ ಇಲ್ಲದಿದ್ದರೂ ಈ ಎಲ್ಲಾ ಕೆಲಸಗಳನ್ನು ಮಾಡಿಸುತ್ತೇನೆ. ಕೇಳಿದ್ದನ್ನು ಕೊಡುವ ಕಾಮಧೇನುವಾಗಿ ಕೇಂದ್ರದಲ್ಲಿ ಮೋದಿ ಇದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.