ವಯನಾಡು, ಜು. ೩೦: ತೀವ್ರ ಮಳೆ ಗಾಳಿ ಹಿನ್ನೆಲೆಯಲ್ಲಿ ಕೊಡಗು ಗಡಿ ಸನಿಹದ ಕೇರಳದ ವಯನಾಡು ಜಿಲ್ಲೆಯ ಚೂರಲ್ಮಾಲ, ಮೆಪ್ಪಾಡಿ, ನೂಲ್ಪುಳ, ಅಟ್ಟಮಾಲ ಮತ್ತು ಮುಂಡಕೈ ಪ್ರದೇಶಗಳಲ್ಲಿ ಸಂಭವಿಸಿದ ಭಾರೀ ಗುಡ್ಡ ಕುಸಿತದಲ್ಲಿ ಅಪಾರ ನಾಶ, ನಷ್ಟ ಸಂಭವಿಸಿದೆ. ರಾತ್ರಿ ಬೆಳಗಾಗುವುದರೊಳಗೆ ಗ್ರಾಮಗಳೇ ಮಣ್ಣಿನಡಿಯಲ್ಲಿ ಬಿದ್ದಿದ್ದು, ಇಲ್ಲಿವರೆಗೆ ನೂರಕ್ಕಿಂತಲೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ದುರಂತದಲ್ಲಿ ಸುಮಾರು ೫೦ ಕ್ಕಿಂತಲೂ ಅಧಿಕ ಮನೆಗಳು ಕೊಚ್ಚಿ ಹೋಗಿವೆ. ಇನ್ನೂ ಹಲವು ಮಂದಿ ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಹೊರತರಲು ಸೇನೆ ಪ್ರಯತ್ನಿಸುತ್ತಿದೆ.
ಇಲ್ಲಿನ ನದಿಗಳು ಉಕ್ಕಿ ಹರಿಯುತ್ತಿದ್ದು ೨೦೧೮ರ ಪ್ರವಾಹವನ್ನು ನೆನಪಿಸುತ್ತಿದೆ. ಕೆಸರು ಮಣ್ಣುಗಳಿಂದ ಮುಳುಗಿರುವ ದುರಂತ ಸ್ಥಳದಲ್ಲಿ ರಕ್ಷಣಾ (ಮೊದಲ ಪುಟದಿಂದ) ಕಾರ್ಯಾಚರಣೆ ಮುಂದುವರಿದಿದೆ. ವಯನಾಡು ಗುಡ್ಡ ಕುಸಿತದಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಕೇರಳದ ನಾಲ್ಕು ಜಿಲ್ಲೆಗಳಾದ ಕೋಝಿಕ್ಕೋಡ್, ಮಲಪ್ಪುರಂ, ವಯನಾಡು ಮತ್ತು ಕಾಸರಗೋಡಿಗೆ ರೆಡ್ ಅಲರ್ಟ್ ಘೋಷಿಸಿದೆ.
ವಯನಾಡು ದುರಂತದಿAದ ಕೇರಳ ತತ್ತರಿಸಿದ್ದು, ಎರಡು ದಿನಗಳ ಮಲಪ್ಪುರಂ, ವಯನಾಡು ಮತ್ತು ಕಾಸರಗೋಡಿಗೆ ರೆಡ್ ಅಲರ್ಟ್ ಘೋಷಿಸಿದೆ.
ವಯನಾಡು ದುರಂತದಿAದ ಕೇರಳ ತತ್ತರಿಸಿದ್ದು, ಎರಡು ದಿನಗಳ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಕೇರಳ ಸರ್ಕಾರ ಘೋಷಿಸಿದೆ.
ಮುಂಡಕೈಯಲ್ಲಿ ಬೆಳಗಿನ ಜಾವ ಒಂದು ಗಂಟೆಗೆ ಮತ್ತು ನಂತರ ಬೆಳಗಿನ ಜಾವ ನಾಲ್ಕು ಗಂಟೆಗೆ ಎರಡು ಬಾರಿ ಭೂಕುಸಿತ ಸಂಭವಿಸಿದೆ. ಮಧ್ಯರಾತ್ರಿ ಭೂಕುಸಿತದ ನಂತರ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಮತ್ತೊಂದು ಭೂಕುಸಿತ ಸಂಭವಿಸಿದೆ ೪೦೦ ಕ್ಕೂ ಹೆಚ್ಚು ಕುಟುಂಬಗಳು ಭೂಕುಸಿತದಿಂದ ಹಾನಿಗೊಳಗಾದವು ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ಇನ್ನೂ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಸೇನೆ ಕೂಡ ನೆರವಿಗೆ ಬಂದಿದೆ. ನೂರಾರು ಜನರನ್ನು ರಕ್ಷಿಸುವ ಪ್ರಯತ್ನ ಆರಂಭಿಸಿರುವುದಾಗಿ ಸೇನೆ ತಿಳಿಸಿದೆ.
ಪ್ರಧಾನಿ ನೆರವು ಘೋಷಣೆ
ವಯನಾಡು ದುರಂತದ ಕುರಿತು ಮಾಹಿತಿ ಪಡೆದ ಪ್ರಧಾನಿ ಮೋದಿ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯ್ ಅವರೊಂದಿಗೆ ಮಾತನಾಡಿದ್ದಾರೆ. ಪ್ರಧಾನ ಮಂತ್ರಿ ರಾಷ್ಟಿçÃಯ ವಿಪತ್ತು ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ ರೂ ೨ ಲಕ್ಷ, ಗಾಯಗೊಂಡವರಿಗೆ ತಲಾ ರೂ. ೫೦ ಸಾವಿರ ಘೋಷಿಸಿದ್ದಾರೆ.
ಅಲ್ಲದೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ವಯನಾಡಿಗೆ ರೂ.ಐದು ಕೋಟಿ ರೂಪಾಯಿಗಳನ್ನು ಪರಿಹಾರ ಸಹಾಯಕ್ಕಾಗಿ ಬಿಡುಗಡೆ ಮಾಡಿದ್ದಾರೆ.
ಅನೇಕ ಮನೆಗಳು ಧ್ವಂಸಗೊAಡಿದ್ದು, ಆಹಾರ ಮತ್ತು ನೀರಿನ ಕೊರತೆಯಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಳೆದ ೨೪ ಗಂಟೆಗಳಲ್ಲಿ ವಯನಾಡು ಜಿಲ್ಲೆಯ ಒಂಬತ್ತು ಸ್ಥಳಗಳಲ್ಲಿ ೩೦೦ ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.
ಮುಂಡಕೈಯಲ್ಲಿ ಹಲವು ಮೃತದೇಹಗಳ ರಾಶಿ ಬಿದ್ದಿವೆ ಎಂದು ವರದಿಯಾಗಿದೆ. ಪ್ರಸ್ತುತ ನಡೆಯುತ್ತಿರುವ ಪರಿಹಾರ ಕಾರ್ಯಗಳನ್ನು ಬೆಂಬಲಿಸಲು ವಯನಾಡಿನ ಚೂರಲ್ ಮಲದಲ್ಲಿರುವ ಮಸೀದಿ ಮತ್ತು ಮದರಸಾದಲ್ಲಿ ತಾತ್ಕಾಲಿಕ ಆಸ್ಪತ್ರೆ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು ಎಂದು ಕೇರಳ ಆರೋಗ್ಯ ಸಚಿವರು ಹೇಳಿದ್ದಾರೆ. ನದಿ ಮತ್ತು ಮಣ್ಣಿನಡಿಯಿಂದ ಮೃತದೇಹಗಳನ್ನು ಹೊರ ತೆಗೆಯುವುದು ರಕ್ಷಣಾ ಕಾರ್ಯಕರ್ತರಿಗೆ ಸವಾಲಿನ ಕೆಲಸವಾಗಿದ್ದು, ಸದ್ಯಕ್ಕೆ ಸತ್ತವರ ಸಂಖ್ಯೆಯನ್ನು ನಿಖರವಾಗಿ ಹೇಳಲಾಗುತ್ತಿಲ್ಲ ಎಂದು ತಿಳಿಸಿದೆ.
ಈ ದುರಂತ ಪ್ರಕರಣದ ಸಂಬAಧ ಕೇರಳ ರಾಜ್ಯಕ್ಕೆ ಎಲ್ಲ ನೆರವು ನೀಡುವಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅವರು ಇಂದು ಸಂಸತ್ ಅಧಿವೇಶನ ಸಂದರ್ಭವೂ ಈ ಕುರಿತು ಪ್ರಸ್ತಾಪಿಸಿದರು.
ಚೂರಲ್ಮಲ ಮಾರುಕಟ್ಟೆಯೇ ಕಣ್ಮರೆಯಾಗಿದೆ. ಎಷ್ಟು ಮನೆಗಳು ನಾಶವಾಗಿವೆ ಎಂಬುದಕ್ಕೆ ನಿಖರವಾದ ಲೆಕ್ಕವಿಲ್ಲ. ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್ಗಳನ್ನು ಕೂಡ ರಕ್ಷಣಾ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ ಎಂದು ಕೇರಳ ಸರಕಾರ ತಿಳಿಸಿದೆ. ಈ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದ ಕಾರಣ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಅನೇಕ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆಯಿದ್ದು, ಚೂರಲ್ಮಾಲಾದಿಂದ ಮುಂಡಕೈಗೆ ಹೋಗುವ ರಸ್ತೆ ಕೊಚ್ಚಿಹೋಗಿದ್ದು, ರಕ್ಷಣಾ ಪ್ರಯತ್ನಗಳಿಗೆ ತೀವ್ರ ಅಡ್ಡಿಯಾಗಿದೆ. ದುರಂತದಲ್ಲಿ ಹಲವು ವಾಹನಗಳು ಕೊಚ್ಚಿ ಹೋಗಿವೆ. ಚೂರಲ್ಮಾಲ ಪಟ್ಟಣದ ಒಂದು ಭಾಗ ಕೊಚ್ಚಿ ಹೋಗಿದೆ. ವೆಲ್ಲರ್ಮಲಾ ಶಾಲೆ ಸಂಪೂರ್ಣ ಜಲಾವೃತಗೊಂಡಿದೆ.