ಮಡಿಕೇರಿ, ಜು. ೩೧: ಕೊಡವ ಹಿತರಕ್ಷಣಾ ಬಳಗ, ಕಿಗ್ಗಟ್ಟ್ನಾಡ್, ಪೊನ್ನಂಪೇಟೆ ಇವರ ವತಿಯಿಂದ ಕಕ್ಕಡ ೧೮ರ ಅಂಗವಾಗಿ ಆ.೩ರಂದು ೧೩ನೇ ವರ್ಷದ ಕಾರ್ಯಕ್ರಮ ಜರುಗಲಿದೆ.
ಶನಿವಾರ ಸಂಜೆ ೬ ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜ ದಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಪಂಜಿನ ಮೆರವಣಿಗೆ, ಬಳಿಕ ಕೊಡವ ಸಮಾಜದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ಎಂ. ರಾಜಾ ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರುಗಳು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭ ಡಾ. ಬಿಜ್ಜಂಡ ವೈ. ಕಾರ್ಯಪ್ಪ, ಡಾ. ಮುಕ್ಕಾಟಿರ ಗ್ರೀಷ್ಮ ಬೋಜಮ್ಮ,
(ಮೊದಲ ಪುಟದಿಂದ) ಶೈಕ್ಷಣಿಕವಾಗಿ ಸಾಧನೆ ಮಾಡಿದ ಕಾಟಿಮಾಡ ಭಾಷಿತ ದೇವಯ್ಯ, ಚೆಪ್ಪುಡೀರ ಹರ್ಷಿಣಿ ಪ್ರದೀಪ್ ಅವರುಗಳನ್ನು ಸನ್ಮಾನಿಸಲಾಗುವುದು. ಇದಾದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಮಂದತವ್ವ ತಂಡದಿAದ ಗೆಜ್ಜೆತಂಡ್ ನೃತ್ಯ, ಯಂಗಕಲಾವಿದAಗ ತಂಡದಿAದ ಕೊಡವ ಕಿರು ನಾಟಕ ಮತ್ತು ಇತರ ಕಾರ್ಯಕ್ರಮಗಳು, ಇದರೊಂದಿಗೆ ಕಕ್ಕಡ ೧೮ರ ವಿಶೇಷತೆಯ ಖಾದ್ಯಗಳಾದ ಮದ್ದ್ಪಾಯಸ, ಕಕ್ಕಡ ಕೋಳಿಯ ಊಟೋಪಚಾರ ನಡೆಯಲಿದೆ ಎಂದು ಬಳಗದ ಪ್ರಮುಖರು ತಿಳಿಸಿದ್ದಾರೆ.