ಸಿದ್ದಾಪುರ, ಜು. ೩೧: ತಾಯಿಯೊಂದಿಗೆ ತನ್ನ ದೊಡ್ಡಮ್ಮನ ಮನೆಗೆ ತೆರಳಿದ್ದ ಗುಹ್ಯ ಗ್ರಾಮದ ಬಾಲಕ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಗುಹ್ಯದ ಲತಾ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಿರುವ ರವಿ ಮತ್ತು ಕವಿತ ಎಂಬವರ ಪುತ್ರ ರೋಹಿತ್(೯) ಮೃತ ದುರ್ಧೈವಿ. ಗುಹ್ಯ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ರೋಹಿತ್, ಕಳೆದ ಕೆಲವು ದಿನಗಳ ಹಿಂದೆ ಶಾಲೆಗೆ ನೀಡಿದ ರಜೆಯಲ್ಲಿ ತನ್ನ ತಾಯಿಯೊಂದಿಗೆ ಕೇರಳದ ವಯನಾಡಿನ ಮೇಪಾಡಿ ಎಂಬಲ್ಲಿರುವ ತನ್ನ ದೊಡ್ಡಮ್ಮನ ಮನೆಗೆ ತೆರಳಿದ್ದರು. ಕೊಡಗು ಜಿಲ್ಲೆಯಲ್ಲಿ ಶಾಲೆಗಳಿಗೆ ಮಳೆ ರಜೆ ಇರುವ ಹಿನ್ನೆಲೆಯಲ್ಲಿ ದೊಡ್ಡಮ್ಮನ ಮನೆಯಲ್ಲೇ ಉಳಿದುಕೊಂಡಿದ್ದ.
ಭಾನುವಾರದಂದು ಬರಬೇಕಿದ್ದ ಬಾಲಕ ಮತ್ತು ಆತನ ತಾಯಿಯು ಜಿಲ್ಲೆಯ ಶಾಲೆಗಳಿಗೆ ರಜೆ ನೀಡಿರುವ ಹಿನ್ನೆಲೆ ಯಲ್ಲಿ ಕೇರಳದಲ್ಲೇ ಉಳಿದರು. ತಡರಾತ್ರಿ ಸಂಭವಿಸಿದ ಘಟನೆ ಯಲ್ಲಿ ಬಾಳಬೇಕಾದ ಬಾಲಕ ಮಣ್ಣು ಪಾಲಾ ಗಿರುವುದು ದುರದೃಷ್ಟಕರ ಸಂಗತಿ.
ಮುಗಿಲು ಮುಟ್ಟಿದ ಆಕ್ರಂದನ
ರವಿ ಹಾಗೂ ಕವಿತ ದಂಪತಿಗೆ ಜಿಲ್ಲೆಯ ಶಾಲೆಗಳಿಗೆ ರಜೆ ನೀಡಿರುವ ಹಿನ್ನೆಲೆ ಯಲ್ಲಿ ಕೇರಳದಲ್ಲೇ ಉಳಿದರು. ತಡರಾತ್ರಿ ಸಂಭವಿಸಿದ ಘಟನೆ ಯಲ್ಲಿ ಬಾಳಬೇಕಾದ ಬಾಲಕ ಮಣ್ಣು ಪಾಲಾ ಗಿರುವುದು ದುರದೃಷ್ಟಕರ ಸಂಗತಿ.
ಮುಗಿಲು ಮುಟ್ಟಿದ ಆಕ್ರಂದನ
ರವಿ ಹಾಗೂ ಕವಿತ ದಂಪತಿಗೆ ಕುಟುಂಬ ಕಣ್ಮರೆ
ಪ್ರವಾಹಕ್ಕೆ ಅಂಜಿ ಸಂಬAಧಿಕರ ಮನೆಯಲ್ಲಿ ಆಶ್ರಯ ಪಡೆದ ಕೊಡಗು ಮೂಲದ ಯುವತಿ ಹಾಗೂ ಕುಟುಂಬ ಭೂ ಕುಸಿತಕ್ಕೆ ಸಿಲುಕಿ ಕಣ್ಮರೆಯಾದ
(ಮೊದಲ ಪುಟದಿಂದ) ಹೃದಯವಿದ್ರಾವಕ ಘಟನೆ ವಯನಾಡಿನಲ್ಲಿ ಸಂಭವಿಸಿದೆ.
ಕೇರಳದ ವಯ ನಾಡಿನಲ್ಲಿ ನಡೆದ ಭೀಕರವಾದ ಭೂಕುಸಿತ ದಲ್ಲಿ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಪುತ್ರಿ ದಿವ್ಯ (೩೬) ಹಾಗೂ ಆಕೆಯ ಸಂಬAಧಿಕರಾದ ೯ ಮಂದಿ ಕಣ್ಮರೆಯಾಗಿದ್ದಾರೆ. ದಿವ್ಯಾಳನ್ನು ಕೇರಳದ ವಯನಾಡಿನ ಮೇಪಾಡಿ ಎಂಬಲ್ಲಿಗೆ ವಿವಾಹ ಮಾಡಿಕೊಡಲಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಓರ್ವ ಮಗ ಹಾಸ್ಟೆಲ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.
ಕಳೆದ ಸೋಮವಾರದಂದು ಮೇಪಾಡಿಯಲ್ಲಿರುವ ದಿವ್ಯಾಳ ಮನೆಯ ಸುತ್ತ ಪ್ರವಾಹದ ಭೀತಿ ಇರುವ ಹಿನ್ನೆಲೆಯಲ್ಲಿ ಪ್ರವಾಹಕ್ಕೆ ಹೆದರಿ ತನ್ನ ಮಗು ಹಾಗೂ ಗಂಡನೊAದಿಗೆ ಅದೇ ಗ್ರಾಮದ ತನ್ನ ಸಂಬAಧಿಕರ ಮನೆಗೆ ತೆರಳಿದ್ದಾರೆ. ಆದರೆ ಪ್ರವಾಹಕ್ಕೆ ಅಂಜಿದವರು ಭೀಕರ ಭೂ ಕುಸಿತಕ್ಕೆ ಸಿಲುಕಿ ದಿವ್ಯ, ಆಕೆಯ ಮಗು, ಗಂಡ ಸೇರಿದಂತೆ ಮನೆಯ ಒಂಭತ್ತು ಮಂದಿ ಕಣ್ಮರೆಯಾಗಿದ್ದಾರೆ. ಸ್ಥಳಕ್ಕೆ ಯುವತಿಯ ತಾಯಿ, ಅಣ್ಣಂದಿರು ತೆರಳಿ ಮಗಳಿಗಾಗಿ ಕಣ್ಣೀರಿಡುತ್ತಿದ್ದಾರೆ. -ವಾಸು