ಸೋಮವಾರಪೇಟೆ, ಜು. ೩೧: ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ, ತಮ್ಮ ಆದಾಯದ ಸ್ವಲ್ಪ ಭಾಗವನ್ನು ಸಮಾಜಕ್ಕಾಗಿ ಮೀಸಲಿಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.
ಜೇಸಿಐ ಸೋಮವಾರಪೇಟೆ ಪುಷ್ಪಗಿರಿ, ಯುವ ಜೇಸಿ ವತಿಯಿಂದ ಜಾನಕಿ ಸಭಾಂಗಣದಲ್ಲಿ ಆಯೋಜಿಸಿದ್ದ ಜೇಸಿಐ ವಲಯ ೧೪ರ ಧ್ರುವತಾರೆ ಮಿನುಗುವ ತಾರೆಗಳ ಸಮಾಗಮ-ಮಹಿಳಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಜೇಸಿಐ ಸಂಸ್ಥೆ ಸಮಾಜಮುಖಿ ಕೆಲಸ ಮಾಡುವ ಮೂಲಕ ಸದಸ್ಯರಿಗೆ ನಾಯಕತ್ವ ಗುಣವನ್ನು ಬೆಳೆಸುವಂತಹ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಜೇಸಿಐ ವಲಯ ಅಧ್ಯಕ್ಷೆ ಆಶಾ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ಮಾನವೀಯತೆಯಲ್ಲಿ ಅಡಗಿದೆ. ನಾವು ಮಾಡುವ ಸಮಾಜಮುಖಿ ಕೆಲಸಗಳು ಮುಂದಿನ ಪೀಳಿಗೆಗೆ ಉಪಯೋಗವಾಗು ವಂತಿರಬೇಕು ಎಂದರು.
ಮುಖ್ಯ ಭಾಷಣ ಕಾರರಾಗಿದ್ದ ಜೇಸಿ ಇಂಡಿಯಾ ಕಾನೂನು ವಿಭಾಗದ ಮುಖ್ಯಸ್ಥೆ ಸೌಜನ್ಯ ಹೆಗಡೆ ಮಾತನಾಡಿ, ಜೀವನದಲ್ಲಿ ಖುಷಿಯಾಗಿದ್ದು, ಸಮಾಜ ಸೇವೆಗೆ ಒಂದಷ್ಟು ಸಮಯವನ್ನು ಮೀಸಲಿಡುವುದು ನಿಜವಾದ ಯಶಸ್ಸು ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಸೋಮವಾರಪೇಟೆ ಜೇಸಿಐ ಘಟಕದ ಅಧ್ಯಕ್ಷ ಎಸ್.ಆರ್. ವಸಂತ್, ವಲಯ ಮಹಿಳಾ ಘಟಕದ ಅಧ್ಯಕ್ಷೆ ರೂಪ ಗೋಪಾಲಕೃಷ್ಣ, ರಾಷ್ಟಿçÃಯ ಮಹಿಳಾ ಸಂಯೋಜಕಿ ಯಶಸ್ವಿನಿ, ವಲಯಾಧ್ಯಕ್ಷ ಎಂ.ಡಿ. ರಂಗಸ್ವಾಮಿ, ಜೇಸಿಐ ವಲಯ ಉಪಾಧ್ಯಕ್ಷರಾದ ರಾಕೇಶ್, ಮಾಯಾ ಗಿರೀಶ್, ಯುವ ಜೇಸಿ ಅಧ್ಯಕ್ಷ ಕೆ.ಡಿ. ಪ್ರಶಾಂತ್, ಸಮ್ಮೇಳನ ನಿರ್ದೇಶಕರಾದ ವಿನುತಾ ಸುದೀಪ್ ಇದ್ದರು. ರಾಜ್ಯದ ಜೇಸಿಐ ವಿವಿಧ ಘಟಕಗಳ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಬಹುಮಾನಗಳನ್ನು ವಿತರಿಸಲಾಯಿತು.