ಮಡಿಕೇರಿ, ಜು. ೩೧: ಪೊನ್ನಂಪೇಟೆಯ ಸರ್ಕಾರಿ ಕೈಗಾರಿಕಾ ಮಹಿಳಾ ತರಬೇತಿ ಸಂಸ್ಥೆಯಲ್ಲಿ ೨೦೨೪-೨೫ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಎಲೆಕ್ಟಾçನಿಕ್ ಮೆಕಾನಿಕ್ ಮತ್ತು ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟ್ಟೆಂಟ್ ವೃತ್ತಿಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಲೆಕ್ಟಾçನಿಕ್ ಮೆಕಾನಿಕ್ ೨ ವರ್ಷ ಎನ್‌ಸಿವಿಟಿ ಯೋಜನೆ ಬಾಕಿ ಉಳಿದಿರುವ ಸೀಟುಗಳು ೩೧ ಮತ್ತು ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟ್ಟೆಂಟ್ (೧ ವರ್ಷ) ಬಾಕಿ ಉಳಿದಿರುವ ಸೀಟುಗಳು ೧೧. ಪ್ರವೇಶಕ್ಕೆ ಆಗಸ್ಟ್ ೩೧ ರವರೆಗೆ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿಯೇ ಪ್ರವೇಶ ಮಾಡಲಾಗುವುದು.

ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಪೊನ್ನಂಪೇಟೆ ಇವರನ್ನು ಕೆಲಸದ ವೇಳೆಯಲ್ಲಿ ಅಥವಾ ದೂ. ೦೮೨೭೪-೨೦೦೨೨೧ ಮತ್ತು ೯೦೩೬೭೯೬೯೩೫, ೮೯೭೧೩೫೮೨೨೦ನ್ನು ಸಂಪರ್ಕಿಸ ಬಹುದು ಎಂದು ಸರ್ಕಾರಿ ಕೈಗಾರಿಕಾ ಮಹಿಳಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.