ಮಡಿಕೇರಿ, ಜು. ೩೧: ಕೊಡವ ಎಂಟರ್‌ಪ್ರಿರ‍್ಸ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ನ ಕೊಡವ ಎಂಟರ್‌ಪ್ರಿರ‍್ಸ್ ಸೌಹಾರ್ದ ಕೋ ಆಪರೇಟಿವ್ ಅಧ್ಯಕ್ಷರಾಗಿ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಹಾಗೂ ಉಪಾಧ್ಯಕ್ಷರಾಗಿ ಮಿನ್ನಂಡ ರಾಮಪ್ಪ ಅವರು ಆಯ್ಕೆಯಾಗಿದ್ದಾರೆ.

ಸಂಘದ ಮಹಾಸಭೆ ಇತ್ತೀಚೆಗೆ ನಡೆದಿದ್ದು, ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ೨೦೧೮ ರಲ್ಲಿ ಸಂಘ ಸ್ಥಾಪನೆಯಾಗಿದ್ದು, ೩೭೫ ಸದಸ್ಯರನ್ನು ಹೊಂದಿದೆ. ೨೦೨೩-೨೪ನೇ ಸಾಲಿನಲ್ಲಿ ಸಂಸ್ಥೆ ರೂ. ೯.೭ ಲಕ್ಷ ಲಾಭವನ್ನು ಸಂಘ ಗಳಿಸಿದೆ. ಸಂಘದ ನಿರ್ದೇಶಕರುಗಳಾಗಿ ಉದಿಯಾಂಡ ಸುದೇಶ್ ಚಂಗಪ್ಪ, ಐತಿಚಂಡ ನಾಣಯ್ಯ, ಮಂಡೇಪAಡ ರತನ್ ಕುಟ್ಟಯ್ಯ, ಕುಕ್ಕೆರ ಜಯ ಚಿಣ್ಣಪ್ಪ, ಅಜ್ಜಿನಂಡ ತಮ್ಮು ಪೂವಯ್ಯ, ಮಾತಂಡ ಪ್ರೀತು ಕಾರ್ಯಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ನಾಯಕಂಡ ರಮ್ಯ ಬ್ರೌನ್, ಉಳ್ಳಿಯಡ ಗಂಗಮ್ಮ ಅವರುಗಳು ಆಯ್ಕೆಗೊಂಡಿದ್ದಾರೆ. ಸಂಘದ ಮುಖ್ಯ ಕಾರ್ಯನಿರ್ವಹ ಣಾಧಿಕಾರಿಯಾಗಿ ಬಲ್ಯಂಡ ಅರುಣ್ ಪೊನ್ನಪ್ಪ ನೇಮಕಗೊಂಡಿದ್ದಾರೆ.