ಮಡಿಕೇರಿ, ಜು. ೩೧: ಹಿರಿಯ ಟೆನಿಸ್ ಆಟಗಾರ ಕೊಡಗಿನವರಾದ ಮಚ್ಚಂಡ ರೋಹನ್ ಬೋಪಣ್ಣ ಅವರು ಅಂತರರಾಷ್ಟಿçÃಯ ಟೆನ್ನಿಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವುದಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ೨೦೨೪ರಲ್ಲಿ ಪುರುಷರ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ತಂಡವು ೭-೫, ೬-೨ ರಿಂದ ಸೋಲನ್ನು ಎದುರಿಸಿತು. ಈ ಬೆನ್ನಲ್ಲೇ ರೋಹನ್ ಬೋಪಣ್ಣ ಇದು ತಮ್ಮ ವೃತ್ತಿ ಜೀವನದಲ್ಲಿ ಭಾರತವನ್ನು ಪ್ರತಿನಿಧಿಸಿದ ಕೊನೆಯ ಪಂದ್ಯ ಎಂದಿದ್ದಾರೆ. ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ರೋಹನ್ ಬೋಪಣ್ಣ ೨೦೨೬ರ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುವುದಿಲ್ಲ. ೨೦೧೬ರ ರಿಯೊ ಒಲಿಂಪಿಕ್ಸ್ನಲ್ಲಿ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ತಂಡ ಮಿಶ್ರ ಡಬಲ್ಸ್ನಲ್ಲಿ ಸೆಮಿಫೈನಲ್ ತಲುಪಿತ್ತು. ರೋಹನ್ ಬೋಪಣ್ಣ ತಮ್ಮ ಐತಿಹಾಸಿಕ ಟೆನಿಸ್ ವೃತ್ತಿ ಜೀವನದಲ್ಲಿ ೬ ಬಾರಿ ಡಬಲ್ಸ್ ಸ್ಪರ್ಧೆಯಲ್ಲಿ ಗ್ರಾಂಡ್ ಸ್ಲಾಮ್ ಫೈನಲಿಸ್ಟ್ ಆಗಿದ್ದಾರೆ. ಎರಡು ಬಾರಿ ಗ್ರ‍್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಹೆಗ್ಗಳಿಕೆಯೂ ಇವರಿಗಿದೆ. ಗ್ರ‍್ಯಾಂಡ್ ಸ್ಲಾಮ್ ಟೆನಿಸ್‌ನಲ್ಲಿ (ಫ್ರೆಂಚ್, ವಿಂಬಲ್ಡನ್, ಆಸ್ಟೆçÃಲಿಯಾ ಹಾಗೂ ಯು.ಎಸ್ ಓಪನ್) ಡಬಲ್ಸ್ ನಲ್ಲಿ ತಂಡದ ಇಬ್ಬರೂ ದೇಶವನ್ನು ಪ್ರತಿನಿಧಿಸುವುದು ಕಡ್ಡಾಯವಿಲ್ಲದಿರುವುದರಿಂದ ಆಸ್ಟೆçÃಲಿಯಾದ ತಮ್ಮ ಜೋಡಿ ಮ್ಯಾಥಿವ್ ಎಬ್ಡನ್ ಅವರೊಂದಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಗ್ರ‍್ಯಾಂಡ್ ಸ್ಲಾಮ್ ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ. ಇತ್ತೀಚೆಗೆ ನಡೆದಿದ್ದ ಆಸ್ಟೆçÃಲಿಯಾ ಓಪನ್‌ನಲ್ಲಿ ಕಿರೀಟ ಹೊತ್ತಿದ್ದ ರೋಹನ್ - ಎಬ್ಡನ್ ಜೋಡಿ ವಿಶ್ವ ಟೆನಿಸ್ ಡಬಲ್ಸ್ನಲ್ಲಿ ಅಗ್ರಸ್ಥಾನ (ಮೊದಲ ಸ್ಥಾನ ರೋಹನ್, ೨ ನೆ ಸ್ಥಾನ ಎಬ್ಡನ್) ಪಡೆದಿತ್ತು. ಪ್ರಸ್ತುತ ಎಬ್ಡನ್ ೩ ನೆ ಸ್ಥಾನ ಹಾಗೂ ರೋಹನ್ ೪ ನೆ ಸ್ಥಾನವನ್ನು ಪಡೆದಿದ್ದಾರೆ.