ವೀರಾಜಪೇಟೆ, ಜು. ೩೧: ಪೊನ್ನಂಪೇಟೆಯ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಪಿರಿಯಾಪಟ್ಟಣ ತಾಲೂಕು ರಾವಂದೂರುವಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತರಬೇತಿಯನ್ನು ಪಡೆದುಕೊಂಡರು.

೧೫ ದಿವಸಗಳ ಕಾಲ ಜರುಗಿದ ತರಬೇತಿ ಕಾರ್ಯಾಗಾರದಲ್ಲಿ ಶಿವು ಸೈನಿಕ ಅಕಾಡೆಮಿಗೂ ಭೇಟಿ ಕೊಟ್ಟರು. ಉಚಿತ ಸೈನಿಕ ಅಕಾಡೆಮಿ ಇದಾಗಿದ್ದು, ವಿದ್ಯಾರ್ಥಿಗಳಿಗೆ ಅಕಾಡೆಮಿ ವತಿಯಿಂದ ಅಧ್ಯಕ್ಷರು ಹಾಗೂ ಮಾಜಿ ಸೈನಿಕರಾದ ಶಿವು ಅವರು ಸೈನ್ಯಕ್ಕೆ ಸೇರಲು ಹಾಗೂ ವ್ಯಾಯಾಮ, ದೈಹಿಕ ಕಸರತ್ತುಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಪರಿಶ್ರಮ, ದೈಹಿಕ ಚಟುವಟಿಕೆ, ಮಾನಸಿಕ ಸದೃಢತೆ ಹೊಂದಲು ಬೇಕಾದ ಅಂಶಗಳನ್ನು ಉದಾಹರಣೆ ಸಮೇತ ವಿವರಿಸಿದರು. ಸಮಾಜದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭ ಪ್ರಾಧ್ಯಾಪಕರಾದ ಗಣೇಶ್ ಪ್ರಸಾದ್, ಶಿವು ಸೈನಿಕ ಅಕಾಡೆಮಿಯ ಕಾರ್ಯದರ್ಶಿ ಸ್ವಾಮಿ, ವಿದ್ಯಾರ್ಥಿ ನಾಯಕರಾದ ಪ್ರಶಾಂತ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.