ಪೊನ್ನಂಪೇಟೆ, ಜು. ೩೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ನ ಪೊನ್ನಂಪೇಟೆ ವಲಯದ ವತಿಯಿಂದ ಬೇಗೂರು ಶ್ರೀ ಕುಂದೂರು ಭಗವತಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ೧ ಲಕ್ಷ ರೂಪಾಯಿ ಮಂಜೂರು ಮಾಡಿರುತ್ತಾರೆ. ಮಂಜೂರಾದ ಮೊತ್ತದ ಡಿ.ಡಿ.ಯನ್ನು ವೀರಾಜಪೇಟೆ ತಾಲೂಕು ಯೋಜನಾಧಿಕಾರಿ ದಿನೇಶ್‌ರವರು ದೇವಸ್ಥಾನ ಸಮಿತಿಯ ಅಧ್ಯಕ್ಷ ಚೇಂದಿರ ಬೋಪಣ್ಣ ಅವರಿಗೆ ವಿತರಣೆ ಮಾಡಿದರು. ಈ ಸಂದರ್ಭ ಪೊನ್ನಂಪೇಟೆ ವಲಯ ಮೇಲ್ವಿಚಾರಕ ನಾಗರಾಜ್, ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಚೇಂದಿರ ಜೀವನ್, ಖಜಾಂಚಿ ಚೇಂದಿರ ಮಂಜು ಉತ್ತಪ್ಪ, ಸದಸ್ಯರಾದ ಚೇಂದಿರ ಮೋಹನ್ ಕುಟ್ಟಪ್ಪ, ಚೇಂದಿರ ಸಂತೋಷ್, ಚೇಂದಿರ ದೊರೆಮಣಿ, ಅರ್ಚಕ ಸುಂದರೇಶ್ ಭಟ್, ಹುದಿಕೇರಿ ಒಕ್ಕೂಟದ ಅಧ್ಯಕ್ಷೆ ರಾಧಾ ಕರುಂಬಯ್ಯ, ಪದಾಧಿಕಾರಿಗಳಾದ ಮೇರಿ ಪೂಣಚ್ಚ, ರಮಬಾಯಿ, ಅಮೀನಾ ಉಪಸ್ಥಿತರಿದ್ದರು.