ಮಡಿಕೇರಿ, ಜು. ೩೧: ಬುಧವಾರದಂದು ಜಿಲ್ಲೆಯ ಪರಿಸ್ಥಿತಿ ಒಂದಷ್ಟು ಬದಲಾದಂತಿತ್ತು. ಕಳೆದ ಕೆಲವು ದಿನಗಳಿಂದ ಕಂಡುಬAದಿದ್ದ ಮಳೆಯ ರಭಸ ಈ ದಿನ ತುಸು ಇಳಿಮುಖವಾಗಿದ್ದು, ಜನರು ಒಂದಷ್ಟು ನಿರಾಳತೆಯನ್ನು ಎದುರಿಸಿದರು. ಆದರೂ, ಪುಷ್ಯ ಮಳೆ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದ್ದು, ಜನರ ಆತಂಕ ಮಾತ್ರ ಕಡಿಮೆಯಾಗಿಲ್ಲ. ಈಗಾಗಲೇ ಧಾರಾಕಾರ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ನದಿ, ತೋಡುಗಳಲ್ಲಿ ನೀರಿನ ಮಟ್ಟ ಮತ್ತೆ ಏರಿಕೆಯಾಗದಿದ್ದರೂ ಯಥಾಸ್ಥಿತಿಯಲ್ಲೇ ಮುಂದುವರಿಯುತ್ತಿದ್ದು, ಭಯದ ನೆರಳಿನಲ್ಲೇ ಜನರು ದಿನದೂಡುತ್ತಿದ್ದಾರೆ. ಇಂದು ಅಪರಾಹ್ನದ ತನಕ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆ ಒಂದಷ್ಟು ಬಿಡುವು ನೀಡಿದ್ದು, ಅಪರಾಹ್ನದ ಬಳಿಕ ಮತ್ತೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಾರಂಭಿಸಿದೆ. ಜಿಲ್ಲೆಯಾದ್ಯಂತ ಇದೇ ಸನ್ನಿವೇಶವಿದ್ದ ಕುರಿತು ವರದಿಯಾಗಿದೆ. ಜಿಲ್ಲೆಯಲ್ಲಿ ಬುಧವಾರ - ಗುರುವಾರ ರೆಡ್ ಅಲರ್ಟ್ ಎಂಬ ಮುನ್ಸೂಚನೆಯಿಂದಾಗಿ ಜನಾತಂಕ ಹೆಚ್ಚಾಗಿತ್ತು. ಆದರೆ ಮಳೆ ಒಂದಷ್ಟು ಇಳಿಮುಖವಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿತ್ತು. ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಸರಾಸರಿ ೨.೪೩ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೪.೦೬, ವೀರಾಜಪೇಟೆ ೩.೧೦, ಪೊನ್ನಂಪೇಟೆ ೨, ಸೋಮವಾರಪೇಟೆ ೧.೮೩ ಹಾಗೂ
(ಮೊದಲ ಪುಟದಿಂದ) ಕುಶಾಲನಗರ ತಾಲೂಕಿನಲ್ಲಿ ೧.೪೮ ಇಂಚು ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಭಾಗಮಂಡಲ ಹೋಬಳಿಯಲ್ಲಿ ಅತಿಹೆಚ್ಚು ೫.೬೦ ಇಂಚು, ಮಡಿಕೇರಿ ೩.೧೬, ನಾಪೋಕ್ಲು ೩.೧೫, ಸಂಪಾಜೆ ೪.೩೬, ವೀರಾಜಪೇಟೆ ೩.೭೪, ಅಮ್ಮತ್ತಿ ೨.೪೬ ಇಂಚು ಮಳೆಯಾಗಿದೆ. ಜಿಲ್ಲೆಯ ಇನ್ನಿತರ ಹೋಬಳಿಗಳಲ್ಲಿ ೧.೫೦ರಿಂದ ೨ ಇಂಚುಗಳಷ್ಟು ಸರಾಸರಿ ಮಳೆಯಾಗಿದೆ.
ಜಿಲ್ಲೆಯ ವಿವಿಧೆಡೆಗಳಲ್ಲಿ ಗದ್ದೆಗಳು ಜಲಾವೃತಗೊಂಡಿದ್ದು, ಸಮುದ್ರದಂತಾಗಿವೆ. ಬರೆಜರಿತ, ಭೂಕುಸಿತ, ರಸ್ತೆಗೆ ಹಾನಿ, ವಿದ್ಯುತ್ ಸಮಸ್ಯೆಯಂತಹ ಪ್ರಕರಣಗಳು ಇನ್ನೂ ಮುಂದುವರಿಯುತ್ತಿವೆ. ಪ್ರಸ್ತುತ ಆಷಾಢ ತಿಂಗಳು ಅರ್ಧ ಮುಗಿದಿದ್ದು, ಮಳೆಗಾಲದ ಅವಧಿ ಇನ್ನಷ್ಟು ಇರುವುದರಿಂದ ಸಹಜವಾಗಿಯೇ ಜನಾತಂಕ ಮುಂದುವರಿದಿದೆ.ಪೊನ್ನAಪೇಟೆ : ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳ ಸಭೆಯನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು. ತಾಲೂಕು ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು. ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಮಳೆಹಾನಿ ಬಗ್ಗೆ ರಸ್ತೆ, ವಿದ್ಯುತ್ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳು ತಲೆದೋರಿದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ತಾಲೂಕು ಆಡಳಿತಕ್ಕೆ ಮಾಹಿತಿ ಸಲ್ಲಿಸಬೇಕು. ಹೋಬಳಿಗೊಂದು ಕಾಳಜಿ ಕೇಂದ್ರ ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು, ಆಹಾರ ಕಿಟ್‌ಗಳ ವಿತರಣೆಗೆ ಕ್ರಮಕೈಗೊಳ್ಳಬೇಕೆಂದು ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ವೀಡಿಯೋ ಸಂವಹನದಲ್ಲಿ ತಾಲೂಕುಮಟ್ಟದ ಅಧಿಕಾರಿ ಗಳ ಸಭೆ ಕರೆದು, ಹೆಚ್ಚಾಗಿ ಮಳೆಯಾಗಿರುವ ಪ್ರದೇಶಗಳ ಬಗ್ಗೆ ಎಚ್ಚರಿಕೆ ವಹಿಸ ಬೇಕೆಂದು ಸೂಚನೆ ನೀಡಿದ್ದರು. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಬAಧಿಸಿದ ಇಲಾಖಾಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಧಿಕಾರಿಯವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಯತಿರಾಜ್, ನೋಡಲ್ ಅಧಿಕಾರಿ ನವೀನ್, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಇದ್ದರು.ಸುಂಟಿಕೊಪ್ಪ : ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಸ್ಕೂಲ್ ಬಾಣೆ ನಿವಾಸಿ ಲೀಲಾ ದಿವಾಕರ್ ಅವರ ಮನೆಯ ಒಂದು ಬದಿಯ ಗೋಡೆ ಗಾಳಿ ಮಳೆಗೆ ಸಂಪೂರ್ಣ ಕುಸಿದಿದೆ. ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ, ಉಪಾಧ್ಯಕ್ಷ ಅಬ್ಬಾಸ್, ನೋಡಲ್ ಅಧಿಕಾರಿ ನಾರಾಯಣ, ಕಂದಾಯ ಪರಿವೀಕ್ಷಕ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ಆಶಾ, ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ವೀರಾಜಪೇಟೆ: ಕಳೆದ ಒಂದು ತಿಂಗಳಿAದ ಸುರಿಯುತ್ತಿರುವ ಭಾರಿ ಮಳೆಗೆ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು, ವೀರಾಜಪೇಟೆ ತಾಲೂಕಿನಾದ್ಯಂತ ನದಿ, ಕಾಲುವೆ, ತೋಡು, ತೊರೆಗಳು ತುಂಬಿ ಹರಿಯುತ್ತಿದೆ. ಮುಖ್ಯರಸ್ತೆಗಳು ಹೊರತುಪಡಿಸಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಗ್ರಾಮಗಳ ಸಂಚಾರ ಕಡಿತಗೊಂಡಿದೆ. ನದಿ ಪಾತ್ರದ ಗದ್ದೆ, ತೋಟಗಳು ಜಲಾವೃತಗೊಂಡಿದ್ದು, ನಷ್ಟ ಉಂಟಾಗಿದೆ.
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು, ಬೇತ್ರಿಯಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ವೀರಾಜಪೇಟೆ ತಾಲೂಕು ಬೇತ್ರಿಯಿಂದ ಮಡಿಕೇರಿ ತಾಲೂಕು ಪಾರಾಣೆಗೆ ತೆರಳುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಸಂಪರ್ಕ ಕಡಿದುಕೊಂಡಿದೆ. ಬೇತ್ರಿಯ ಹೆಮ್ಮಾಡು ಗ್ರಾಮ ಸಂಪೂರ್ಣ ನೀರಿನಿಂದ ದ್ವೀಪದಂತಾಗಿದೆ. ಬೊಳ್ಳುಮಾಡು, ನಾಲ್ಕೇರಿ, ಮೈತಾಡಿ, ಅರಮೇರಿ, ಕಡಂಗಮುರೂರು, ಕದನೂರು ಗ್ರಾಮಗಳ ಬಹುತೇಕ ಗದ್ದೆ ಹಾಗೂ ಕಾಫಿ ತೋಟಗಳು ಜಲಾವೃತಗೊಂಡಿವೆೆ. ಬೇತ್ರಿಯ ಹೊಳೆ ದಂಡೆಯಲ್ಲಿ ೬೫ಕ್ಕೂ ಹೆಚ್ಚು ಮನೆಗಳಿದ್ದು ೨೦೦ಕ್ಕೂ ಅಧಿಕ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ೬ ಮನೆಗಳಿಗೆ ನೀರು ನುಗ್ಗಿದೆ. ತಾಲೂಕು ಆಡಳಿತ ತೀವ್ರ ನಿಗಾಯಿಟ್ಟಿದ್ದು ಆ ಭಾಗದ ಜನರಿಗೆ ಉಪಯೋಗವಾಗುವಂತೆ ಕಾಳಜಿ ಕೇಂದ್ರವನ್ನು ಪ್ರಾರಂಭಿಸಿದೆ.
ಕೊಂಚ ಬಿಡುವು
ಬುಧವಾರ ಮಳೆ ಸ್ವಲ್ಪಮಟ್ಟಿಗೆ ಬಿಡುವು ನೀಡಿದ್ದು ನೀರಿನ ಮಟ್ಟ ನಿಧಾನವಾಗಿ ಇಳಿಮುಖಗೊಳ್ಳುತ್ತಿದೆ. ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಬರೆಗಳು ಜರೆದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮೇ ತಿಂಗಳಿAದ ಜುಲೈ ೩೧ರ ಬೆಳಿಗ್ಗೆ ೮ ಗಂಟೆಯವರೆಗೆ ವೀರಾಜಪೇಟೆ ತಾಲೂಕಿನಲ್ಲಿ ೧೬೦.೧೪ ಇಂಚು ಮಳೆಯಾಗಿದೆ. ಮೇ ತಿಂಗಳಲ್ಲಿ ವೀರಾಜಪೇಟೆ ಹೋಬಳಿಯಲ್ಲಿ ೧೦.೩ ಇಂಚು, ಅಮ್ಮತ್ತಿ ಹೋಬಳಿಯಲ್ಲಿ ೯.೭೮ ಇಂಚು, ಜೂನ್ ತಿಂಗಳಲ್ಲಿ ವೀರಾಜಪೇಟೆ ಹೋಬಳಿಯಲ್ಲಿ ೨೧.೯೫ ಇಂಚು, ಅಮ್ಮತ್ತಿ ಹೋಬಳಿಯಲ್ಲಿ ೧೮.೯೬ ಇಂಚು, ಜುಲೈ ತಿಂಗಳಲ್ಲಿ ವೀರಾಜಪೇಟೆ ಹೋಬಳಿಯಲ್ಲಿ ೫೨.೫೦ ಇಂಚು, ಅಮ್ಮತ್ತಿ ಹೋಬಳಿಯಲ್ಲಿ ೪೬.೬೪ ಇಂಚು ಮಳೆ ಪ್ರಮಾಣ ದಾಖಲಾಗಿದೆ.
ಸ್ಥಳಾಂತರಕ್ಕೆ ಹಿಂದೇಟು
ವೀರಾಜಪೇಟೆ ಬೆಟ್ಟ ಪ್ರದೇಶಗಳಾದ ಅರಸುನಗÀರ, ನೆಹರು ನಗರ, ಅಯ್ಯಪ್ಪ ಬೆಟ್ಟದಲ್ಲಿ ಅಪಾಯದ ಅಂಚಿನಲ್ಲಿರುವ ೬೬ ಕುಟುಂಬಗಳನ್ನು ಸ್ಥಳಾಂತರಿಸುವAತೆ ಪ್ರತಿ ಮಳೆಗಾಲದ ಕೂಗು ಮುನ್ನಲೆಗೆ ಬರುತ್ತದೆ. ನಂತರ ಮುಂದಿನ ಮಳೆಗಾಲದವರೆಗೆ ಯಾವುದೇ ತಂಟೆ ತಕರಾರು ಇರುವುದಿಲ್ಲ. ಪ್ರತಿ ಮಳೆಗಾಲದಲ್ಲಿ ಆ ಭಾಗದ ಜನರು ಸರ್ಕಾರದ ಕಾಳಜಿ ಕೇಂದ್ರಗಳಿಗೆ ತೆರಳಲು ಹಿಂದೇಟು ಹಾಕುತ್ತಾರೆ. ಈ ಬಾರಿಯು ಕೂಡ ಸ್ಥಳೀಯ ಪುರಸಭೆ ಅಧಿಕಾರಿಗಳು ಅಲ್ಲಿಗೆ ತೆರಳಿ ಅವರ ಮನ ಒಲಿಸಲು ಪ್ರಯತ್ನಿಸಿದ್ದಾರೆ. ಕೆಲವರು ಕಾಳಜಿ ಕೇಂದ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಕೆಲವರು ಅಕ್ಕಪಕ್ಕದ ಸಂಬAಧಿಕರ ಮನೆಗೆ ತೆರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದ್ದಾರೆ.
ಪರಿಹಾರ ವಿತರಣೆ
ಜುಲೈ ಅಂತ್ಯದವರೆಗೆÀ ಮನೆ ಹಾನಿಯಲ್ಲಿ ೪೮ ಪ್ರಕರಣಗಳು ವರದಿಯಾಗಿವೆ. ೪೨ ಪ್ರಕರಣಗಳಲ್ಲಿ ಆರಂಭಿಕ ಹಂತದÀ ಅನುದಾನ ಬಿಡುಗಡೆಗೊಳಿಸಲಾಗಿದೆ. ಕೆಲವು ತಾಂತ್ರಿಕ ತೊಂದರೆಗಳಿAದ ೬ ಪ್ರಕರಣದಲ್ಲಿ ಅನುದಾನ ಬಿಡುಗಡೆಗೊಳಿಸಲು ವಿಳಂಬವಾಗಿದೆ. ಅಮ್ಮತ್ತಿ ಹೋಬಳಿಯ ಕರಡಿಗೋಡು ಮತ್ತು ಮಾಲ್ದಾರೆಯಲ್ಲಿ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಬಾಡಗ ಬಾಣಂಗಾಲದಲ್ಲಿ ಪ್ರÀಕೃತಿ ವಿಕೋಪದಲ್ಲಿ ಹಸು ಮೃತಪಟ್ಟಿದ್ದು ಪರಿಹಾರ ನೀಡಲು ಬಾಕಿ ಇದೆ.
ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ
ವೀರಾಜಪೇಟೆ ತಾಲೂಕಿಗೆ ಸಂಬAಧಿಸಿದAತೆ ಸಂತ ಅನ್ನಮ್ಮ ಶಾಲೆ ವೀರಾಜಪೇಟೆ, ಸರ್ಕಾರಿ ಪ್ರಾಥಮಿಕ ಶಾಲೆ ತೋರಾ, ಸ್ವರ್ಣಮಾಲ ಕಲ್ಯಾಣ ಮಂಟಪ ಸಿದ್ದಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಚ್ಚಿನಾಡು ಕಡೆಗಳಲ್ಲಿ ಕಾಳಜಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯಲ್ಲಿ ೧, ಸರ್ಕಾರಿ ಪ್ರಾಥಮಿಕ ಶಾಲೆ ತೋರಾದಲ್ಲಿ ೨೪, ಸ್ವರ್ಣಮಾಲ ಕಲ್ಯಾಣ ಮಂಟಪ ಸಿದ್ದಾಪುರದಲ್ಲಿ ೫೧, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಚ್ಚಿನಾಡುವಿನಲ್ಲಿ ೪೪ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಪ್ರಕೃತಿ ವಿಕೋಪವನ್ನು ಎದುರಿಸಲು ಎನ್.ಡಿ.ಆರ್.ಎಫ್., ತಂಡ ಸಿದ್ಧವಿದೆ. ೨೦೧೯ ರಲ್ಲಿ ತೋರಾದಲ್ಲಿ ನಡೆದ ಗುಡ್ಡಕುಸಿತ ಸ್ಥಳದಲ್ಲಿ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ ರಾಹುಲ್ ಅವರ ನೇತೃತ್ವದ ತಂಡ ಅಲ್ಲಿಯೆ ಎಲ್ಲವನ್ನು ಅವಲೋಕನ ಮಾಡುತ್ತಿದ್ದಾರೆ. ಉಳಿದ ಕಾಳಜಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ, ಅಡುಗೆ, ಇನ್ನಿತರ ವ್ಯವಸ್ಥೆಗಳನ್ನು ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಡಿಓಗಳು, ಕಂದಾಯ ಅಧಿಕಾರಿಗಳು ಉಸÀÄ್ತವಾರಿ ನೋಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೋಂದರೆ ಉಂಟಾದಲ್ಲಿ ನೇರವಾಗಿ ತಹಶೀಲ್ದಾರ್ ರಾಮಚಂದ್ರ ಅವರನ್ನು ಸಂಪರ್ಕಿಬಹುದಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರ ಸಂಪೂರ್ಣ ಜಲಾವೃತಗೊಂಡಿದ್ದು, ಕಳೆದ ಎರಡು ದಿನಗಳಿಂದ ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವ ದೃಶ್ಯ ಗೋಚರಿಸಿದೆ. ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆ ಲಕ್ಷ್ಮಣತೀರ್ಥ ನದಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಶ್ರೀಮಂಗಲದ ಅಯ್ಯಪ್ಪ ದೇವಸ್ಥಾನ ರಸ್ತೆ ಜಲಾವೃತಗೊಂಡಿದೆ. ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯಾಗಿದೆ.
ಮುಳ್ಳೂರು: ಮಂಗಳವಾರ ಹಗಲು, ರಾತ್ರಿಯವರೆಗೂ ಸುರಿದ ಭಾರೀ ಮಳೆಗೆ ಆಲೂರುಸಿದ್ದಾಪುರ ಗ್ರಾ.ಪಂ.ಗೆ ಸೇರಿದ ಹೊಸಳ್ಳಿ ಗ್ರಾಮದ ಮೀಸಲು ಅರಣ್ಯದೊಳಗೆ ಅರಣ್ಯ ಇಲಾಖೆಯಿಂದ ನಿರ್ಮಿಸಿದ ಕೆರೆಯ ದಡ ಒಡೆದು ಹೋಗಿದ್ದರಿಂದ ಕೆರೆ ನೀರು ಪಕ್ಕದ ಕೃಷಿ ಜಮೀನಿನಲ್ಲಿ ಹರಿದು ರೈತರ ಕಾಫಿ, ಬಾಳೆ ತೋಟ, ಶುಂಠಿ, ಜೋಳದ ಹೊಲ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ಮಳೆ ಸುರಿದಿದೆ. ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ೮ ಗಂಟೆ ಸಮಯದಲ್ಲಿ ಹೊಸಳ್ಳಿ ಗ್ರಾಮದ ಮೀಸಲು ಅರಣ್ಯದೊಳಗೆ ನಿರ್ಮಿಸಿದ ಕೆರೆಯ ದಡ ಒಡೆದು ಹೋಗಿ ಕೆರೆ ನೀರು ಅರಣ್ಯದ ಕೆಳ ಭಾಗದಲ್ಲಿನ ರೈತರ ಕಾಫಿ ಮತ್ತು ಬಾಳೆ ತೋಟ ಸೇರಿದಂತೆ ಶುಂಠಿ, ಜೋಳದ ಹೊಲದಲ್ಲಿ ಹರಿದು ಅಕ್ಕ ಪಕ್ಕದ ರೈತರ ಜಮೀನುಗಳಲ್ಲಿ ಹರಿದು ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆÉ. ಈ ಭಾಗದ ರೈತರುಗಳಾದ ಲೋಕೇಶ್, ಕೃಷ್ಣ, ಜಗದೀಶ್, ಚಂದ್ರ, ಜಯಲಕ್ಷಿö್ಮ ಮುಂತಾದವರ ಕೃಷಿ ಫಸಲಿಗೆ ಹಾನಿಯಾಗಿದೆ.ಸಿದ್ದಾಪುರ: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು.
ಸಿದ್ದಾಪುರದ ಸ್ವರ್ಣಮಾಲ ಸಭಾಂಗಣದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊAದಿಗೆ ಮಾಹಿತಿ ಪಡೆದುಕೊಂಡರು. ಕರಡಿಗೋಡು ವ್ಯಾಪ್ತಿಯ ೧೭ ಕುಟುಂಬಗಳ ೬೩ ಸಂತ್ರಸ್ತರು ಸಿದ್ದಾಪುರದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕಾಳಜಿ ಕೇಂದ್ರದ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ರಾಮಚಂದ್ರ, ಜಿಲ್ಲಾ ಪಂಚಾಯಿತಿ ಸಿಇಓ ಆನಂದಪ್ರಕಾಶ್ ಮೀನಾ, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್‌ಕುಮಾರ್, ಗ್ರಾಮ ಆಡಳಿತಾಧಿಕಾರಿ ಓಮಪ್ಪ ಬಣಕಾರ್, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು ಹಾಜರಿದ್ದರು.
ಕರಿಕೆ: ಗ್ರಾಮದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಗೆ ಮನೆಗಳಿಗೆ, ರಸ್ತೆಗೆ ಹಾನಿಯಾಗಿದ್ದು, ನದಿ - ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತೋಟಂ ಕೊಚ್ಚಿ ಪರಿಶಿಷ್ಟ ಜಾತಿ ಕಾಲೋನಿಯ ಕೃಷ್ಣ ಎಂಬವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿದ್ದು, ಸ್ಥಳಕ್ಕೆ ಉಪ ತಹಶೀಲ್ದಾರ್ ಚಂದ್ರಶೇಖರ, ಗ್ರಾಮ ಪಂಚಾಯಿತಿ ಅಧಕ್ಷ ಬಾಲಚಂದ್ರ ನಾಯರ್, ಗ್ರಾಮ ಲೆಕ್ಕಿಗ ಜಟ್ಟಪ್ಪ ಭೇಟಿ ನೀಡಿದ್ದರು. ಎಳ್ಳುಕೊಚ್ಚಿ ಬಾಳೆ ಬಳಪು ಕಾಲೋನಿ ರಸ್ತೆಗೆ ಗುಡ್ಡ ಕುಸಿದು ರಸ್ತೆ ಬಂದ್ ಆಗಿರುತ್ತದೆ. ಮತ್ತೊಂದು ಘಟನೆಯಲ್ಲಿ ಚೆತ್ತುಕಾಯ ಪಚ್ಚೆಪಿಲಾವು ಹೆಚ್.ಎಂ. ಕೇಶವ ಅವರ ಮನೆ ಹಿಂಭಾಗ ಬರೆ ಕುಸಿದು ಮಣ್ಣು ಬಿದ್ದು ಹಾನಿಯಾಗಿರುತ್ತದೆ. ಗುಡ್ಡಗಾಡು ಪ್ರದೇಶವಾದ ಈ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯತ್ತಿದ್ದು ನದಿ - ತೋಡುಗಳು ತುಂಬಿ ಅಪಾಯಕಾರಿಯಾಗಿ ಹರಿಯುತ್ತಿವೆ. ಅಲ್ಲಲ್ಲಿ ರಸ್ತೆ ಬದಿಯಲ್ಲಿ ಗುಡ್ಡಗಳು ಬಿರುಕು ಬಿಟ್ಟಿದ್ದು, ಜಾರುವ ಸ್ಥಿತಿಯಲ್ಲಿವೆ.ಪೊನ್ನಂಪೇಟೆ : ಕುಟ್ಟ ಮುಖ್ಯ ರಸ್ತೆ ಮಂಚಳ್ಳಿ ಸಮೀಪ ಮಳೆಯಿಂದ ರಸ್ತೆ ಭೂಕುಸಿತ ಸಂಭವಿಸಿ ಹಾನಿಗೊಳಗಾದ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟರಾಜ, ಎಸ್. ಪಿ. ರಾಮರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್, ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್, ಜೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಅನಿತಾ ಬಾಯಿ, ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಅಪ್ಪಣ್ಣ, ವೀರಾಜಪೇಟೆ ಡಿ ವೈ ಎಸ್ ಪಿ ಮೋಹನ್ ಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಇನ್ನಿತರ ಅಧಿಕಾರಿಗಳು ಇದ್ದರು. ಗೋಣಿಕೊಪ್ಪಲು: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಶ್ರೀಮಂಗಲ ಹೋಬಳಿಯ ಮಂಚಳ್ಳಿ ಗ್ರಾಮದ ಬಳಿ ಮುಖ್ಯ ರಸ್ತೆ ಕುಸಿದಿದ್ದು ಈ ಮಾರ್ಗದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ವಾಹನ ಸಂಚಾರ ಮುಂದುವರಿಯುತ್ತಿಲ್ಲ.
ಮಳೆಯ ನಡುವೆ ರಸ್ತೆ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ವಿ.ಪ್ರಸಾದ್ ವೀಕ್ಷಣೆ ಮಾಡುವ ಮೂಲಕ ಮಾಹಿತಿ ಪಡೆದರು.
ಭೇಟಿ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್, ಪೊನ್ನಂಪೇಟೆ ಕಂದಾಯ ಅಧಿಕಾರಿ ಸುದೀಂದ್ರ, ಶ್ರೀಮಂಗಲ ಕಂದಾಯ ಅಧಿಕಾರಿ ಪೂಣಚ್ಚ, ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.ಸಿದ್ದಾಪುರ: ಸ್ವರ್ಣಮಾಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿರುವ ಪರಿಹಾರ ಕೇಂದ್ರಕ್ಕೆ ರಾಜ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜು ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರು ಮಾತನಾಡಿ ತಮಗೆ ಕಳೆದ ಒಂದು ವಾರಗಳಿಂದ ಕೆಲಸಕ್ಕೆ ತೆರಳಲು ಸಮಸ್ಯೆಯಾಗಿದ್ದು ಮಳೆಗಾಲದಿಂದಾಗಿ ಕೆಲಸ ಇಲ್ಲದಂತಾಗಿದೆ. ನಮಗೆ ಶಾಶ್ವತ ಸೂರು ಒದಗಿಸಿಕೊಡುವಂತೆ ಕಂದಾಯ ಸಚಿವರ ಬಳಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ವೀ\ರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಬಳಿ ಜಾಗದ ಪ್ರಸ್ತಾವನೆ ಬಗ್ಗೆ ಚರ್ಚಿಸಿದರು. ಪುನರ್ವಸತಿಗೆ ಗುರುತಿಸಿರುವ ಜಾಗದ ಬಗ್ಗೆ ಶೀಘ್ರದಲ್ಲಿ ಚರ್ಚಿಸಿ ಶಾಶ್ವತ ಸೂರು ಕಲ್ಪಿಸುವ ಯೋಜನೆಯನ್ನು ರೂಪಿಸಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟರಾಜ್ ಎಸ್.ಪಿ. ರಾಮರಾಜ್, ಶಾಸಕ ಮಂತರ್ ಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್, ಸದಸ್ಯರುಗಳು, ಇನ್ನಿತರರು ಹಾಜರಿದ್ದರು.ಸಿದ್ದಾಪುರ : ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ತ್ಯಾಗತ್ತೂರು ಗ್ರಾಮದ ರಮ್ಲಾ ಎಂಬುವವರ ಮನೆಯು ಮಳೆಗೆ ಕುಸಿದು ಬಿದ್ದಿದೆ. ಮನೆಯು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮನೆಯವರನ್ನು ಸಮೀಪದ ಬಾಡಿಗೆ ಮನೆಗೆ ಸ್ಥಳಾಂತರ ಮಾಡಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಜಿ.ಪಂ. ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದಲ್ಲದೆ ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಜರಿದ್ದರು.