ಕುಶಾಲನಗರ, ಜು. ೩೧: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ಕಟ್ಟಡ ಕಾಮಗಾರಿ ಮುಂದಿನ ಸಾಲಿನ ವಾರ್ಷಿಕ ಸಭೆ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಎಂ.ಕೆ. ದಿನೇಶ್ ತಿಳಿಸಿದ್ದಾರೆ.
ಸಂಘದ ೯ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಅಂದಾಜು ರೂ.೫೦ ಲಕ್ಷ ವೆಚ್ಚದ ಕಟ್ಟಡ ಕುಶಾಲನಗರ ಸುಬ್ರಮಣ್ಯ ದೇವಾಲಯದ ಬಳಿ ನಿರ್ಮಾಣವಾಗುತ್ತಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ ಎಂದು ಮಾಹಿತಿಯಿತ್ತರು.
ಸಂಘದಲ್ಲಿ ಸದಸ್ಯರಿಗೆ ನೀಡುವ ಸಾಲದ ಬಡ್ಡಿ ದರದಲ್ಲಿ ಶೇ.೧ ರಷ್ಟು ಇಳಿಸುವ ಬಗ್ಗೆ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ ಎಂದ ಅವರು ಸದಸ್ಯರಿಗೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಈ ಸಂದರ್ಭ ಉಪಾಧ್ಯಕ್ಷ ಜಿ.ಬಿ. ಜಗದೀಶ್, ನಿರ್ದೇಶಕರಾದ ಸಿ.ವಿ. ನಾಗೇಶ್, ಎಸ್.ಸಿ. ಪ್ರಕಾಶ್, ಕೆ.ಪಿ. ರಾಜು, ಕೆ.ಕೆ. ಹೇಮಂತ್ ಕುಮಾರ್, ಎಂ.ಡಿ. ರವಿ, ಎಂ.ಡಿ. ರಮೇಶ್, ರೇಖಾ, ಕಸ್ತೂರಿ ಮಹೇಶ್ ಮತ್ತು ಕಾರ್ಯ ನಿರ್ವಾಹಕಾಧಿಕಾರಿ ಸುನೀತ ಸೇರಿದಂತೆ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.