ಮಡಿಕೇರಿ, ಜು. ೩೧: ಜಿಲ್ಲೆಯ ಸೂಕ್ಷö್ಮ ಪ್ರದೇಶಗಳಲ್ಲ್ಲಿ ವಾಸಿಸುತ್ತಿರುವ ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸುವ ಕೆಲಸವಾಗಬೇಕು. ಅಧಿಕಾರಿಗಳ ಸೂಚನೆ ಮೀರಿಯೂ ಸ್ಥಳಾಂತರಗೊಳ್ಳದಿದ್ದಲ್ಲಿ ಲಾಠಿ ರುಚಿ ತೋರಿಸಿಯಾದರೂ ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಕೆಲಸವಾಗಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲೆಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು ಕುಶಾಲನಗರ ಬಳಿಯ ಅತ್ತೂರು ಗ್ರಾಮದ ಮಳೆಯಿಂದ ಮನೆ ಕಳೆದುಕೊಂಡ ಬಡಕುಟುಂಬಕ್ಕೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಶೇ ೨೮, ಕೊಡಗಿನಲ್ಲಿ ವಾಡಿಕೆಗಿಂತ ಶೇ. ೨೪ರಷ್ಟು ಹೆಚ್ಚು ಮಳೆಯಾಗಿದೆ. ಹವಾಮಾನ ಬದಲಾವಣೆಯಿಂದ ಮಳೆ ತೀವ್ರತೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ಮೇರೆ ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್. ಸೇರಿದಂತೆ ರಕ್ಷಣಾ ಪಡೆಗಳನ್ನು ರಾಜ್ಯದಲ್ಲಿ ನಿಯೋಜಿಸಿಕೊಳ್ಳಲಾಗಿದೆ. ಪರಿಸ್ಥಿತಿ ಎದುರಿಸಲು ರಾಜ್ಯ ಸರಕಾರ ಸರ್ವ ಸನ್ನದ್ಧವಾಗಿದೆ. ಮುಖ್ಯಮಂತ್ರಿ ಕೂಡ ಪ್ರವಾಹ ಪೀಡಿತ, ಭೂಕುಸಿತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ರಾಜ್ಯ ಸರಕಾರ ಜನಪರವಾಗಿದ್ದು, ಮಲೆನಾಡು ಭಾಗದಲ್ಲಿ ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ಹೆಚ್ಚು ವರದಿಯಾಗುತ್ತಿದೆ. ಈ ಹಿನ್ನೆಲೆ ಹೆಚ್ಚುವರಿ ಲೈನ್ಮೆನ್ಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಮಳೆ ಹಿನ್ನೆಲೆ ವಿದ್ಯುತ್ ಸಮಸ್ಯೆ ಪರಿಹಾರ ಕಷ್ಟದಾಯಕವಾಗಿದೆ. ಆದಾಗ್ಯೂ ಪರಿಣಾಮಕಾರಿಯಾಗಿ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು.
‘ಬಲವಂತವಾಗಿ ಸ್ಥಳಾಂತರ ಮಾಡಿ’
ಸೂಕ್ಷö್ಮ ಪ್ರದೇಶವನ್ನು ಈಗಾಗಲೇ ಗುರುತಿಸಿದ್ದು, ಜನರು ಒಪ್ಪಲಿ, ಬಿಡಲಿ ಪರ್ಯಾಯ ಕ್ರಮಕೈಗೊಳ್ಳಬೇಕು. ಜನರು ಬೇಡ ಅಂದ ಮಾತ್ರಕ್ಕೆ ಸ್ಥಳಾಂತರ ಮರೆತು ಬಿಡಬಾರದು. ಜನರ ಪ್ರಾಣ ರಕ್ಷಣೆ ದೃಷ್ಟಿಯಲ್ಲಿ ಕೆಲವು ನಿಷ್ಠುರ ಹೆಜ್ಜೆ ಸರಕಾರ ಇಡಬೇಕಾಗುತ್ತದೆ. ಗುರುತಿಸಿರುವ ಸೂಕ್ಷö್ಮ ಮನೆ, ವಸತಿ ಪ್ರದೇಶಗಳಿಂದ ನಿವಾಸಿಗಳನ್ನು ಬಲವಂತವಾಗಿ ಯಾದರೂ ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವರು ನಿರ್ದೇಶನ ನೀಡಿದರು.
ದುರಂತ ಸಂಭವಿಸಿದರೆ ಸರಕಾರ ಜವಾಬ್ದಾರಿಯಾಗುತ್ತದೆ. ಈ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಶಿಸ್ತಿನಿಂದ ನಡೆದುಕೊಳ್ಳಬೇಕು. ಬೇಜವಾಬ್ದಾರಿ ವರ್ತನೆ, ನಮ್ಮ ಸೂಚನೆ ಪಾಲಿಸದವರ ಮೇಲೆ ಲಾಠಿ ರುಚಿ ತೋರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂತಹ ಕಠಿಣ ಕ್ರಮಕೈಗೊಳ್ಳದಿದ್ದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ. ವಿಜ್ಞಾನಿಗಳ ಅಥವಾ ಹಿಂದಿನ ಘಟನಾವಳಿಗಳನ್ನು ಗಮನಿಸಿ ಸೂಕ್ಷö್ಮ ಪ್ರದೇಶ ವಾಸಿಗಳನ್ನು ಖಾಲಿ ಮಾಡಿಸಬೇಕು. ಈ ಸಂದರ್ಭ ಜನಪ್ರಿಯತೆ ಮುಖ್ಯವಲ್ಲ. ಪ್ರಾಣ ರಕ್ಷಣೆ ಮುಖ್ಯವಾಗುತ್ತದೆ. ಪ್ರಾಣ ಹೋದ ನಂತರ ಪರಿಹಾರ ನೀಡುವುದು ನಮ್ಮ ಉದ್ದೇಶವಲ್ಲ. ಪ್ರಾಣ ಉಳಿಸುವುದು ನಮ್ಮ ಉದ್ದೇಶ. ಯಾವುದೇ ಜೀವಹಾನಿ ಆಗಬಾರದು ಎಂಬುದು ಸರಕಾರದ ಧ್ಯೇಯವಾಗಿದೆ. ಜಿಲ್ಲಾಡಳಿತವೂ ನಿಷ್ಠುರ ನಡೆ ಅನುಸರಿಸಬೇಕು ಎಂದು ಒತ್ತಿ ಹೇಳಿದರು.
ಗುಡ್ಡ ಕುಸಿತ ತಡೆಗೆ ಯೋಜನೆ
ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಭೂಕುಸಿತ ತಪ್ಪಿಸುವ ನಿಟ್ಟಿನಲ್ಲಿ ತಯಾರಿಸಿದ ವೈಜ್ಞಾನಿಕ ವರದಿಯ ಅನ್ವಯ ರೂ. ೩೦೦ ಕೋಟಿಯ ಕಾರ್ಯ ಯೋಜನೆಯನ್ನು ಸಿದ್ಧಪಡಿಸಲಾಗಿದೆ. (ಮೊದಲ ಪುಟದಿಂದ) ಮೊದಲ ಹಂತದಲ್ಲಿ ರೂ. ೧೦೦ ಕೋಟಿ ಬಿಡುಗಡೆಗೊಳಿಸಿ ಕಾಮಗಾರಿ ಗಳನ್ನು ಆರಂಭಿಸ ಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮೂಲಕ ಗುಡ್ಡ ಕುಸಿತದ ಸಂಭವನೀಯ ಜಾಗಗಳನ್ನು ವೈಜ್ಞಾನಿಕವಾಗಿ ಗುರುತಿಸಿ ವರದಿ ತಯಾರಿಸಲಾಗಿದೆ. ಗುಡ್ಡ ಕುಸಿತ ತಡೆಗೆ ರೂ. ೧೦೦ ಕೋಟಿ ಬಿಡುಗಡೆಗೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಾಕಿ ರೂ. ೨೦೦ ಕೋಟಿ ಬಿಡುಗಡೆ ಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ವಿಜ್ಞಾನಿಗಳು ನೀಡಿದ ವರದಿಯನ್ನು ಆಯಾ ಜಿಲ್ಲಾಧಿಕಾರಿಗೆ ನೀಡಿ ಅದರನ್ವಯ ಪ್ರಸ್ತಾವನೆಯನ್ನು ಪಡೆದು ಕಾಮಗಾರಿಗೆ ಮುಂದಾಗಿ ಶಾಶ್ವತ ಕ್ರಮಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಸ್ತೆ ಕಾಮಗಾರಿಗೆ ಅನುದಾನ - ತ್ವರಿತ ಕೆಲಸ ಪ್ರಾರಂಭ
ಅತೀವೃಷ್ಟಿಯಿAದ ಹಲವು ಗ್ರಾಮಗಳ ರಸ್ತೆ ಹಾಳಾಗಿವೆ. ಎಸ್.ಡಿ.ಆರ್.ಎಫ್. ಅನುದಾನದಲ್ಲಿ ಹಾಳಾಗಿರುವ ರಸ್ತೆ ದುರಸ್ತಿಯನ್ನು ತ್ವರಿತವಾಗಿ ಆರಂಭಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಕೃಷ್ಣ ಬೈರೇಗೌಡ ಹೇಳಿದರು. ಕಳೆದ ಜುಲೈ ತಿಂಗಳಿನಲ್ಲಿ ಕೊಡಗಿಗೆ ತಾನು ಬಂದಿದ್ದೆ. ೨೦೧೮ರಲ್ಲಿ ಸಚಿವನಾಗಿದ್ದ ಹಿನ್ನೆಲೆ ಕೊಡಗಿನಲ್ಲಿ ಮಳೆಗಾಲದಲ್ಲಿ ಸಂಭವಿಸುವ ಸಮಸ್ಯೆಯ ಸಂಪೂರ್ಣ ಅರಿವಿದೆ. ರಾಷ್ಟಿçÃಯ ಹೆದ್ದಾರಿ ಹೊರತುಪಡಿಸಿ ಪಿ.ಡಬ್ಲ್ಯೂ.ಡಿ. ಹಾಗೂ ಜಿ.ಪಂ. ರಸ್ತೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು. ಅಗತ್ಯ ಸಂಪನ್ಮೂಲ ಸರಕಾರದಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಬೆಳೆ ನಷ್ಟಕ್ಕೆ ಪರಿಹಾರ
ಭಾರಿ ಮಳೆಯಿಂದ ಕೃಷಿ ಫಸಲುಗಳು ಹಾಳಾಗಿದ್ದು, ಬೆಳೆಗಾರರಿಗೆ ನಷ್ಟ ಭರಿಸಲು ಸರಕಾರ ಸಿದ್ಧವಿದೆ. ಒಂದು ವಾರದಲ್ಲಿ ನಷ್ಟದ ಬಗ್ಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ನಂತರ ಪರಿಹಾರ ನೀಡಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕಳೆದ ವರ್ಷವೇ ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದ್ದು, ಭೂಕುಸಿತ ಸಂಭವನೀಯ ಪ್ರದೇಶಗಳ ‘ಮ್ಯಾಪಿಂಗ್' ಮಾಡಿಸಲಾಗುವುದು. ಸಕಲೇಶಪುರಕ್ಕೆ ವಿಜ್ಞಾನಿಗಳ ತಂಡವನ್ನು ಅಧ್ಯಯನಕ್ಕೆ ಕಳುಹಿಸಿದ್ದೇನೆ. ಈ ಹಿಂದೆ ಕೊಡಗಿನಲ್ಲಿ ಕೈಗೊಂಡ ಅಧ್ಯಯನದ ವರದಿಯನ್ನು ಕೊಡಗು ಜಿಲ್ಲಾಧಿಕಾರಿಗೆ ಕಳುಹಿಸುತ್ತೇನೆ. ಅದರನ್ವಯ ಕೊಡಗಿನಲ್ಲಿ ಕ್ರಮಕ್ಕೆ ಮುಂದಾಗಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಹಶೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕುಶಾಲನಗರ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಸೇರಿದಂತೆ ಇತರರು ಇದ್ದರು.