ಕೂಡಿಗೆ, ಜು. ೩೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ವಾರದಿಂದ ರೈತರ ಜಮೀನಿಗೆ ಕಾಡಾನೆಗಳು ದಾಳಿ ಮಾಡಿ ಬೆಳೆಗಳನ್ನು ತುಳಿದು, ತಿಂದು ನಷ್ಟಪಡಿಸಿವೆ. ಅತ್ತೂರು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು ಕಳೆದ ಒಂದು ವಾರದಿಂದ ವ್ಯಾಪ್ತಿಯ ರಿಜು, ರಾಜು, ವೇಲು ಸ್ವಾಮಿ, ರಾಮು, ಸಂತೋಷ್ ಸೇರಿದಂತೆ ಹಲವು ರೈತರ ಜಮೀನಿಗೆ ದಾಳಿ ಮಾಡಿ ತೆಂಗು, ಸಿಹಿ ಗೆಣಸು, ಬಾಳೆ, ಕೆಸ ಬೆಳೆಗಳನ್ನು ತುಳಿದು ತಿಂದು ನಷ್ಟಪಡಿಸಿವೆ. ಕಾಡಾನೆಗಳು ದಾಟದಂತೆ ತೆಗೆದಿರುವ ಕಂದಕಗಳಲ್ಲಿ ಹೊಳು ತುಂಬಿಕೊAಡಿರುವುದರಿAದ ಅದೇ ಜಾಗದಲ್ಲಿ ಕಾಡಾನೆಗಳು ದಾಟಿಕೊಂಡು ಬಂದು ಬೆಳೆಗಳನ್ನು ನಷ್ಟಪಡಿಸಿವೆ.

ಸ್ಥಳಕ್ಕೆ ಅತ್ತೂರು ಉಪ ವಲಯ ಅರಣ್ಯ ಅರಣ್ಯಾಧಿಕಾರಿ, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.