ಸುಂಟಿಕೊಪ್ಪ, ಜು. ೩೧: ಜನವಸತಿ ಪ್ರದೇಶದ ಮುಖ್ಯರಸ್ತೆಯಲ್ಲಿ ಬುಧವಾರ ಮುಂಜಾನೆ ಒಂಟಿಸಲಗ ಸಂಚರಿಸಿ ಜನರಲ್ಲಿ ಆತಂಕ ಸೃಷ್ಟಿ ಮಾಡಿತು.
ಕಂಬಿಬಾಣೆ, ಉಪ್ಪುತೋಡು, ಕೊಡಗರಹಳ್ಳಿ, ೭ನೇ ಹೊಸಕೋಟೆ ವ್ಯಾಪ್ತಿಯಲ್ಲಿ ನಿರಂತರವಾಗಿ ಸಂಚರಿಸುತ್ತಿದ್ದು, ಇಲ್ಲಿನ ನಿವಾಸಿಗಳು ಆತಂಕದಿAದ ದಿನ ದೂಡುವಂತಾಗಿದೆ. ಈ ಕಾಡಾನೆಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಮನವಿ ಮಾಡಿದ್ದು, ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದೇ ಕಾಡಾನೆಯು ಕೆಲವು ದಿನಗಳ ಹಿಂದೆ ಕೊಡಗರಹಳ್ಳಿ ಲಕ್ಷಿö್ಮ ತೋಟದ ಮಾಲೀಕ ಬಿ.ಡಿ. ಸುಭಾಷ್ ಅವರು ವಾಯು ವಿಹಾರಕ್ಕೆ ತೆರಳಿದ್ದ ಸಂದರ್ಭ ಪ್ರತ್ಯಕ್ಷವಾಗಿದ್ದು, ದಾಳಿ ನಡೆಸಲು ಮುಂದಾಗಿತ್ತು. ಅವರು ಕೂದಲೆಳೆಯ ಅಂತರದಿAದ ಪಾರಾಗಿದ್ದರು. ಬುಧವಾರದಂದು ಅವರ ಮನೆ ತೋಟವನ್ನು ದಾಟಿಕೊಂಡೆ ೭ನೇ ಹೊಸಕೋಟೆ ಮೂಲಕ ಆನೆಕಾಡನ್ನು ಸೇರಿದೆ ಎಂದು ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ಪಡೆ ತಿಳಿಸಿದೆ.