ಮುಳ್ಳೂರು, ಜು. ೩೧: ಸಮೀಪದ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ದಿವಸವನ್ನು ರೋಟರಿ ಕ್ಲಬ್ ಭವನದಲ್ಲಿ ಆಚರಿಸಲಾಯಿತು. ದಿನದ ಮಹತ್ವ ಕುರಿತು ನಿವೃತ್ತ ಸೈನಿಕರಾದ ಯಶ್ವಂತ್, ಪ್ರತಾಪ್ ಮಾತನಾಡಿದರು.
ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಿವೃತ್ತ ಸೈನಿಕಾಧಿಕಾರಿ ಸುಬೇದಾರ್ ಕ್ಯಾಪ್ಟನ್ ಯಶ್ವಂತ್ ನಾಯಕ್, ನಿವೃತ್ತ ಯೋಧರಾದ ಬಿ.ಎಸ್. ಪ್ರತಾಪ್ ಮತ್ತು ಎಂ.ಟಿ. ಜೋಶ್ ಅವರುಗಳನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಟಿ.ವಿ. ದಯಾನಂದ್, ಕಾರ್ಯದರ್ಶಿ ಹೆಚ್. ಕೆ.ಕಿರಣ್, ವಲಯ ಸೇನಾನಿ ಉದಯ್ಕುಮಾರ್ ಹಾಗೂ ರೋಟರಿ ಸಂಸ್ಥೆಯ ಸದಸ್ಯರುಗಳು ಹಾಜರಿದ್ದರು.