ಪ್ಯಾರಿಸ್, ಆ. ೧: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ೩ನೆ ಪದಕ ಲಭಿಸಿದೆ. `೩ ಪೊಸಿಷನ್ಸ್ ೫೦ ಮೀಟರ್ ರೈಫಲ್ ಶೂಟಿಂಗ್' ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್ ಕುಶಲೆ ಅವರು ಕಂಚು ಪದಕ ಪಡೆಯುವುದರ ಮೂಲಕ ಈ ಬಾರಿಯ ಒಲಂಪಿಕ್ಸ್ನಲ್ಲಿ ಭಾರತಕ್ಕೆ ೩ನೆ ಪದಕ ತಂದುಕೊಟ್ಟಿದ್ದಾರೆ. ಕುಶಲೆ ಅವರು ೪೫೧.೪ ಅಂಕಗಳನ್ನು ಗಳಿಸಿ ಕಂಚು ಪಡೆದರೆ, ಚೀನಾದ ಲಿಯು ಅವರು ೪೬೩.೬ ಅಂಕಗಳೊAದಿಗೆ ಚಿನ್ನ ಹಾಗೂ ಉಕ್ರೇನಿನ ಕುಲೊಶ್ ಎಸ್ ಅವರು ೪೬೧.೩ ಅಂಕಗಳೊAದಿಗೆ ಬೆಳ್ಳಿ ಪದಕ ಗಳಿಸಿದರು.

ಶೂಟಿಂಗ್‌ನಲ್ಲಿಯೇ ೩ ಪದಕಗಳು

ಪ್ರಸ್ತುತ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಸದ್ಯದ ಮಟ್ಟಿಗೆ ೩ ಪದಕಗಳು ಲಭಿಸಿದ್ದು, ಮೂರು ಪದಕಗಳು ಕೂಡ ಶೂಟಿಂಗ್ ಕ್ರೀಡೆಗಳಲ್ಲಿಯೇ ದೊರಕಿವೆ. ಮಹಿಳೆಯರ ಏರ್ ಪಿಸ್ತೂಲ್ ೧೦ ಮೀಟರ್ ಶೂಟಿಂಗ್‌ನಲ್ಲಿ ಮನು ಭಾಕರ್ ಅವರಿಗೆ ಕಂಚು, ಇದೇ ಕ್ರೀಡೆಯ ಮಿಶ್ರ ವಿಭಾಗದಲ್ಲಿ ಮನು ಭಾಕರ್-ಸರಬ್ಜೋತ್ ಸಿಂಗ್ ಜೋಡಿಗೆ ಕಂಚು ಹಾಗೂ ಇದೀಗ ೫೦ ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ಸ್ವಪ್ನಿಲ್ ಕುಶಲೆ ಅವರಿಗೆ ಕಂಚು ದೊರಕಿದ್ದು ಭಾರತಕ್ಕೆ ೩ ಪದಕಗಳೂ ಶೂಟಿಂಗ್ ನಲ್ಲಿಯೇ ದೊರಕಿದಂತಾಗಿದೆ.

ಹಾಕಿಯಲ್ಲಿ ಬೆಲ್ಜಿಯಮ್ ವಿರುದ್ಧ ಸೋಲು

ಒಲಂಪಿಕ್ಸ್ ಹಾಕಿಯ ಗ್ರೂಪ್‌ಹಂತದ ೪ನೇ ಪಂದ್ಯದಲ್ಲಿ ಭಾರತವು ಹಾಲಿ ಚಾಂಪಿಯನ್ ಬೆಲ್ಜಿಯಮ್ ವಿರುದ್ಧ ೨-೧ ಗೋಲುಗಳಿಂದ ಸೋಲನುಭವಿಸಿತು. ೨ ಗೆಲುವು, ೧ ಡ್ರಾ ಹಾಗೂ ೧ ಸೋಲಿನ ಮೂಲಕ ಸದ್ಯದ ಮಟ್ಟಿಗೆ ಗ್ರೂಪ್‌ನಲ್ಲಿ ೩ನೇ ಸ್ಥಾನದಲ್ಲಿರುವ ಭಾರತ ಈಗಾಗಲೇ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಮೊದಲ ಸ್ಥಾನವನ್ನು ಬೆಲ್ಜಿಯಮ್, ೨ನೇ ಸ್ಥಾನವನ್ನು ಆಸ್ಟೆçÃಲಿಯ ಪಡೆದುಕೊಂಡಿದೆ. ಇಂದು, ತಾ.೨ ರಂದು ಆಸ್ಟೆçÃಲಿಯಾ ವಿರುದ್ಧ ಗ್ರೂಪ್ ಹಂತದ ಕೊನೆಯ ಪಂದ್ಯ ಆಡಲಿದೆ. ಸಂಜೆ ೪:೪೫ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಇದರಲ್ಲಿ ಗೆದ್ದರೆ ಗ್ರೂಪ್‌ನಲ್ಲಿ ೨ನೇ ಸ್ಥಾನ ಅಲಂಕರಿಸಲಿದೆ.