ಕುಶಾಲನಗರ, ಆ. 1: ಕಾಫಿ ತೋಟದಿಂದ ಅಕ್ರಮವಾಗಿ ಬೀಟಿಮರ ಸಾಗಿಸುತ್ತಿದ್ದ ಸಂದರ್ಭ ಪತ್ತೆ ಹಚ್ಚಿದ ಅರಣ್ಯ ಇಲಾಖೆ ತಂಡ ಎರಡು ವಾಹನಗಳು ಲಕ್ಷಾಂತರ ಮೌಲ್ಯದ ಬೀಟಿ ಮರ ವಶಪಡಿಸಿಕೊಂಡು ಕಾಫಿ ತೋಟದ ಮಾಲೀಕನನ್ನು ಬಂಧಿಸಿರುವ ಪ್ರಕರಣ ಸಮೀಪದ ಕೊಡಗರಹಳ್ಳಿ ಬಳಿ ನಡೆದಿದೆ.

ಕೊಡಗರಹಳ್ಳಿ ಸಮೀಪದ ಮಹಾಲಕ್ಷಿö್ಮ ಎಸ್ಟೇಟ್‌ನಿಂದ 3 ಬೀಟಿ ಮರಗಳನ್ನು ಅಕ್ರಮವಾಗಿ ತುಂಡರಿಸಿ ಲಾರಿಯಲ್ಲಿ ಲೋಡ್ ಮಾಡುತ್ತಿದ್ದ ಸಂದರ್ಭ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಕಾರ್ಯಾಚರಣೆ ನಡೆದಿದೆ.

ಪ್ರಕರಣಕ್ಕೆ ಸಂಬAಧಿಸಿದAತೆ ಕಾಫಿ ತೋಟದ ಮಾಲೀಕರ ಪುತ್ರ ಕೊಕ್ಕಲೆರ ಅಪ್ಪಯ್ಯ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಸಂದರ್ಭ ತೋಟದ ಮಾಲೀಕರು, ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಹಲ್ಲೆಗೂ ಯತ್ನಿಸಿರುವ ಘಟನೆ ನಡೆದಿದೆ.

ಆನೆ ಕಾಡು ಮೀಸಲು ಅರಣ್ಯದ ಉಪ ವಲಯ ಅರಣ್ಯ ಅಧಿಕಾರಿ ದೇವಯ್ಯ ಮತ್ತು ಸಿಬ್ಬಂದಿಗಳು ಕಾಡಾನೆಗಳ ಕಾರ್ಯಾಚರಣೆಗೆ ತೆರಳಿದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಆರೋಪಿ ಗಳನ್ನು ವಿಚಾರಿಸಿದಾಗ ಲಾರಿ ಮತ್ತು ಪಿಕಪ್ ವಾಹನಗಳಿಂದ ಚಾಲಕ ಮತ್ತು ಸಹಾಯಕರು ಪರಾರಿಯಾಗಿರು ವುದಾಗಿ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡದ ಉಪ್ಪಿನಂಗಡಿಗೆ ಸೇರಿದ ಲಾರಿ (ಕೆಎ70-4867)ಗೆ ಎಸ್ಟೇಟ್ ಬಳಿ ಬೀಟಿ ಮರಗಳನ್ನು ತುಂಬಿಸುತ್ತಿರುವುದು ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಗಮನಕ್ಕೆ ಬಂದಿದೆ. ಇದನ್ನು ಕಂಡ

(ಮೊದಲ ಪುಟದಿಂದ) ಪಿಕಪ್ ವಾಹನ ಮತ್ತು ಲಾರಿಯ ಸಿಬ್ಬಂದಿಗಳು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭ ಸ್ಥಳಕ್ಕೆ ಬಂದ ಕಾಫಿ ತೋಟದ ಮಾಲೀಕ ಮತ್ತು ಅವರ ಪುತ್ರ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳೊAದಿಗೆ ವಾಗ್ಯುದ್ಧಕ್ಕೆ ಮುಂದಾಗಿ ಹಲ್ಲೆಗೆ ಯತ್ನಿಸಿದರು ಎಂದು ತಿಳಿದುಬಂದಿದೆ.

ತಕ್ಷಣ ಕಾರ್ಯಾಚರಣೆ ತಂಡ ಕಾಫಿ ತೋಟದ ಮಾಲೀಕರ ಪುತ್ರ ಕೊಕ್ಕಲೆರ ಅಪ್ಪಯ್ಯ ಎಂಬಾತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿಯನ್ನು ಮತ್ತು ಪಿಕಪ್ ವಾಹನವನ್ನು ವಶಪಡಿಸಿಕೊಂಡು ಅದರಲ್ಲಿ ತುಂಬಿದ್ದ ಲಕ್ಷಾಂತರ ಮೌಲ್ಯದ ಮರವನ್ನು ವಶಪಡಿಸಿಕೊಳ್ಳಲಾಗಿದೆ. ಲಾರಿಯಲ್ಲಿ ಮರದ ಮೇಲೆ ಗೊಬ್ಬರದ ಚೀಲಗಳನ್ನು ತುಂಬಲಾಗಿದೆ. ಲಾರಿಗೆ ನಕಲಿ ನೋಂದಣಿ (ಕೆಎ19 ಎಇ4603)ಸಂಖ್ಯೆಯ ನಂಬರ್ ಪ್ಲೇಟ್ ಅಳವಡಿಸಿರುವುದು ವಿಚಾರಣೆಯ ಸಂದರ್ಭ ಬೆಳಕಿಗೆ ಬಂದಿದೆ.

ಪಿಕಪ್ ವಾಹನ ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮದ ವ್ಯಕ್ತಿಗೆ ಸೇರಿದ್ದು ಎಂದು ಖಚಿತಗೊಂಡಿದೆ. ಸ್ಥಳಕ್ಕೆ ಡಿಎಫ್‌ಓ ಭಾಸ್ಕರ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆ ತಂಡದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ದೇವಯ್ಯ, ಸಿದ್ದರಾಮೇಶ್ ನಾಟಿಕಾರ್, ಮತ್ತು ಆರ್‌ಆರ್‌ಟಿ ತಂಡದ ಸದಸ್ಯರು ಪಾಲ್ಗೊಂಡಿದ್ದರು.

ವರದಿ-ಚAದ್ರಮೋಹನ್