ಮಡಿಕೇರಿ, ಆ.೨ : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೨೯ನೇ ವರ್ಷದ ಕಕ್ಕಡ-೧೮ ಆಚರಣೆ ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿರಾಟ್ ಹಿಂದೂಸ್ಥಾನ್ ಸಂಗಮ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಕೊಡವರ ಉಳಿವಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಕೊಡವ ಲ್ಯಾಂಡ್ ಪರವಾದ ಹೋರಾಟಕ್ಕೆ ಸರ್ವರೂ ಬೆಂಬಲ ನೀಡಬೇಕೆಂದು ಕರೆ ನೀಡಿದರು.

ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಬುಡಕಟ್ಟು ಸಮುದಾಯದ ಕೊಡವರು ಮತ್ತು ಕೊಡವ ನೆಲೆ ಉಳಿಯಬೇಕಾದರೆ ಕೊಡವ ಲ್ಯಾಂಡ್ ಘೋಷಣೆ ಅಗತ್ಯವಾಗಿದೆ. ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತ ದೇಶದಲ್ಲಿ ಹಿಂದೂ ಧರ್ಮದಡಿ ವಿಶಿಷ್ಟ ಆಚಾರ, ವಿಚಾರ, ಸಂಸ್ಕೃತಿಯನ್ನು ಅನುಸರಿಸುವ ಅನೇಕ ಸಮುದಾಯಗಳಿವೆ. ಇವುಗಳಲ್ಲಿ ಆದಿಮ ಸಂಜಾತ ಕೊಡವ ಬುಡಕಟ್ಟು ಸಮುದಾಯ ಕೂಡ ಒಂದು. ಸಿಎನ್‌ಸಿ ನಡೆಸುತ್ತಿರುವ ಕೊಡವಲ್ಯಾಂಡ್ ಪರ ಹೋರಾಟಕ್ಕೆ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಬೆಂಬಲಕ್ಕೆ ನಿಂತು ಕಾನೂನು ಹೋರಾಟದ ಬೆಂಬಲ ನೀಡುತ್ತಿದ್ದಾರೆ. ಆದರೆ ಇದನ್ನು ಸಹಿಸದ ಭೂಮಾಫಿಯಾಗಳು, ಕಾರ್ಪೋರೇಟ್ ವಲಯಗಳು ಕಾನೂನು ಹೋರಾಟಕ್ಕೆ ವಿರುದ್ಧವಾಗಿ ಅರ್ಜಿ ಸಲ್ಲಿಸಲು ಮುಂದಾಗಿವೆ. ಕರ್ನಾಟಕ ರಾಜ್ಯದಡಿ, ಭಾರತದ ಸಂವಿಧಾನದ ಆಶಯಕ್ಕೆ ಪೂರಕವಾಗಿ ಸಿಎನ್‌ಸಿ ಸಂಘಟನೆ ನ್ಯಾಯ ಸಮ್ಮತವಾದ ಹೋರಾಟ ನಡೆಸುತ್ತಿದೆ ಎಂದರು.

ಕಕ್ಕಡ-೧೮ ಆಚರಣೆಯ ನೇತೃತ್ವ ವಹಿಸಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ನೀಡಬೇಕು, ಕೊಡವರಿಗೆ ಎಸ್‌ಟಿ ಟ್ಯಾಗ್ ಘೋಷಿಸಬೇಕು, ಆರ್ಟಿಕಲ್ ೨೪೪ನೇ ವಿಧಿ ಮತ್ತು ೬ ಮತ್ತು ೮ನೇ ಶೆಡ್ಯೂಲ್ ಪ್ರಕಾರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಒದಗಿಸಬೇಕು, ಕೊಡವ ಬುಡಕಟ್ಟು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಬೇಕು, ಕೊಡವರ ಪಾರಂಪರಿಕ ಭೂಮಿ, ಭಾಷೆ, ಪರಿಸರ, ಜಲಸಂಪನ್ಮೂಲ, ಜಾನಪದ ಪರಂಪರೆ, ರಾಜಕೀಯ ಅಸ್ಮಿತೆ ಮತ್ತು ಐತಿಹಾಸಿಕ ನಿರಂತರತೆ, ಸಾಂಪ್ರದಾಯಿಕ ಆವಾಸಸ್ಥಾನಗಳನ್ನು ಗುರುತಿಸಬೇಕು ಮತ್ತು ರಾಜ್ಯಾಂಗ ಖಾತ್ರಿ ನೀಡಬೇಕು. ಆದಿಮಸಂಜಾತ ಜನಾಂಗಗಳ ಹಕ್ಕುಗಳ ಸಂರಕ್ಷಣೆಗಾಗಿ ವಿಶ್ವ ಸಂಸ್ಥೆ ಯುಎನ್‌ಒ ಒಡಂಬಡಿಕೆಯAತೆ ಅಂತರರಾಷ್ಟಿçÃಯ ಕಾನೂನಿನಡಿಯಲ್ಲಿ ಕೊಡವರ ಹಕ್ಕುಗಳನ್ನು ಘೋಷಿಸಬೇಕು ಮತ್ತು ಪೋಷಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳ್ಳುವವರೆಗೆ ನಿರಂತರವಾಗಿ ಹೋರಾಟ ನಡೆಸುವುದಾಗಿ ತಿಳಿಸಿದ ಅವರು, ಭೂಮಾಫಿಯಾದಿಂದ ಕೊಡವ ಭೂಮಿಯನ್ನು ರಕ್ಷಿಸಿಕೊಳ್ಳಲು ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ಒಂದೇ ಪರಿಹಾರವೆಂದು ಅಭಿಪ್ರಾಯಪಟ್ಟರು. ಸಭೆ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕರಿಸಿತು. ಅಲ್ಲದೆ ಸಿಎನ್‌ಸಿಯ ಬೇಡಿಕೆಗಳ ಪರ ನಿರ್ಣಯ ಕೈಗೊಂಡಿತು. ಕಾರ್ಯಕ್ರಮದ ಆರಂಭದಲ್ಲಿ ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಯಿತು ಮತ್ತು “ಕಕ್ಕಡ-೧೮”ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಯಿತು. ಮೆರವಣಿಗೆ ಮೂಲಕ ತೆರಳಿ ಮಂದ್‌ಗೆ ಪ್ರದಕ್ಷಿಣೆ ಬರಲಾಯಿತು. ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ಮಾಡಲಾಯಿತು.

ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ “ಕಕ್ಕಡ-೧೮” ರ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ನಂದೇಟಿರ ಕವಿತಾ, ಬೊಟ್ಟಂಗಡ ಸವಿತ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ನಂದಿನೆರವAಡ ನಿಶ, ನಂದಿನೆರವAಡ ಬೀನ ಅಯ್ಯಣ್ಣ, ಮುದ್ದಿಯಡ ಲೀಲಾವತಿ, ನಂದಿನೆರAಡ ರಕ್ಷಿತಾ ನಿಖಿಲ್, ಪೂರ್ಣಿಮ ಶೆಟ್ಟಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಜಮ್ಮಡ ಮೋಹನ್, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಚಂಬAಡ ಜನತ್, ಕಾಂಡೆರ ಸುರೇಶ್, ಕಿರಿಯಮಾಡ ಶೆರಿನ್, ಮಂದಪAಡ ಮನೋಜ್, ಅರೆಯಡ ಗಿರೀಶ್, ನಂದೇಟಿರ ರವಿ, ಪುದಿಯೊಕ್ಕಡ ಪೃಥ್ವಿ, ಅಳ್ಮಂಡ ನೆಹರು, ಪಟ್ಟಮಾಡ ಕುಶ, ಬೇಪಡಿಯಂಡ ದಿನು, ಚೋಳಪಂಡ ನಾಣಯ್ಯ, ಪುದಿಯೊಕ್ಕಡ ಕಾಶಿ, ಮಣವಟ್ಟಿರ ಚಿಣ್ಣಪ್ಪ, ಉದಿಯಂಡ ಚೆಂಗಪ್ಪ, ನಂದಿನೆರವAಡ ವಿಜು, ನಂದಿನೆರವAಡ ಅಯ್ಯಣ್ಣ, ಕಾಟುಮಣಿಯಂಡ ಉಮೇಶ್, ಪುಟ್ಟಿಚಂಡ ಡಾನ್, ಪಂದಿಯAಡ ಮಾಚಯ್ಯ, ನೆರ್ಪಂಡ ಜಿಮ್ಮಿ ಚಂಗಪ್ಪ, ಚಂಙಣಮಕ್ಕಡ ವಿನು, ಸಾದೆರ ರಮೇಶ್, ಚಂಡೀರ ರಾಜ, ಕುಂಜಿಲAಡ ದೊರೆ, ಪಟ್ಟಮಾಡ ಪೃಥ್ವಿ ದೇವಯ್ಯ, ನಂದಿನೆರವAಡ ಅಪ್ಪಯ್ಯ, ಕೂಪದಿರ ಸಾಬು, ಐಲಪಂಡ ಮಿಟ್ಟು, ಬಾಚಿನಾಡಂಡ ಗಿರೀಶ್, ಬಾಚಿನಾಡಂಡ ಕವನ್, ಪಾರ್ವಂಗಡ ದಿವಿನ್ ಗಣಪತಿ, ನಂದಿನೆರವAಡ ದಿನೇಶ್, ನಂದಿನೆರವAಡ ರವಿ ಕುಟ್ಟಪ್ಪ, ನಂದಿನೆರವAಡ ನಂದ, ಕೆಚ್ಚೆಟ್ಟಿರ ಶಂಭು, ನಂದಿನೆರವAಡ ಬೊಪ್ಪಣ್ಣ, ಅರೆಯಡ ಸಾವನ್ ಕೊಡವ, ಮಂದಪAಡ ಸೂರಜ್, ಬೊಪ್ಪಂಡ ಸೂರಜ್, ನಂದಿನೆರವAಡ ನಿಖಿಲ್, ಪಾರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ಮೀದೇರಿರ ತಿಮ್ಮಯ್ಯ, ಕೊಣಿಯಂಡ ಸಂಜು, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದಾ, ಅಳ್ಮಂಡ ಲವ, ಸೊಮೇಯಂಡ ರೇಷ್ಮ ತಿಮ್ಮಯ್ಯ, ಕುಞಮಾಡ ಕಾವೇರಪ್ಪ, ತಡಿಯಂಗಡ ನಿತೇಶ್ ಸೋಮಯ್ಯ, ವಿಜೇಂದ್ರ ಶೆಟ್ಟಿ, ಬಾಚಿರ ಚಿಣ್ಣಪ್ಪ, ಪೊಯೆಟ್ಟಿರ ನಂದ ಹಾಗೂ ಮೇದುರು ಕಂಠಿ ಹಾಜರಿದ್ದರು.