ಮಡಿಕೇರಿ, ಆ. 1: ಬೇಸಿಗೆ ಸಂದರ್ಭದಲ್ಲಿ ಈ ಬಾರಿ ಮಳೆ ತೀರಾ ವಿಳಂಬವಾಗಿ ಜಿಲ್ಲೆಯ ಜನರು ಪರಿತಪಿಸುವಂತಾಗಿ ಮೇ ನಂತರದಿAದ ಜಿಲ್ಲೆ ಮಳೆಯನ್ನು ಕಂಡಿತ್ತು. ಬೇಸಿಗೆ ಸಂದರ್ಭದ ಪರಿಸ್ಥಿತಿ ಆ ರೀತಿಯಾಗಿದ್ದರೆ, 2024ರ ಮುಂಗಾರು ಮಳೆ ಜಿಲ್ಲೆಯ ಚಿತ್ರಣವನ್ನು ಬದಲಾಯಿಸಿದೆ. ಜೂನ್ - ಜುಲೈ ತಿಂಗಳಿನಲ್ಲಿ ಮುಂಗಾರಿನ ಅಬ್ಬರಕ್ಕೆ ಇಡೀ ಜಿಲ್ಲೆ ನಲುಗುವಂತಾಗಿದೆ. ಅದರಲ್ಲೂ ಪುನರ್ವಸು ಹಾಗೂ ಪುಷ್ಯ ಮಳೆಯ ಆರ್ಭಟ ಜಿಲ್ಲೆಯಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿರುವುದಲ್ಲದೆ, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಧಾರಾಕಾರ ಮಳೆ- ಗಾಳಿಯಿಂದಾಗಿ ಜಿಲ್ಲೆಯ ಜನರು 2018 ಹಾಗೂ 2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ದುರಂತದ ದಿನಗಳನ್ನು ಮತ್ತೆ ನೆನಪಿಸಿಕೊಂಡು ಆತಂಕ ಎದುರಿಸುವಂತಾಗಿದೆ. ಸತತ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಎಲ್ಲೆಲ್ಲೂ ಜಲ ಎದ್ದಿದ್ದು ನದಿಗಳು, ತೋಡು- ತೊರೆಗಳು ತುಂಬಿ ಹರಿಯುತ್ತಿದೆ. ಈಗಲೂ ಜಿಲ್ಲೆ ಪ್ರವಾಹ ಭೀತಿಯೊಂದಿಗೆ ಹಲವೆಡೆ ಜಲ ದಿಗ್ಭಂದನ ಇನ್ನೂ ಮುಂದುವರಿದಿದೆ. ಶಾಲಾ - ಕಾಲೇಜುಗಳಿಗೂ ನಿರಂತರವಾಗಿ ರಜೆ ಘೋಷಿಸಬೇಕಾದ ಪರಿಸ್ಥಿತಿಯೂ ಈ ವರ್ಷ ಕಂಡುಬAದಿದೆ. ಇದೀಗ ಜಿಲ್ಲೆಯನ್ನು ತಲ್ಲಣಗೊಳಿಸಿದ ಪುಷ್ಯ ಮಳೆ ಆ.2ರಂದು (ಇಂದು) ಮುಕ್ತಾಯಗೊಳ್ಳಲಿದ್ದು, ತಾ.3ರಿಂದ ಆಶ್ಲೇಷ ಮಳೆ ನಕ್ಷತ್ರ ಪ್ರಾರಂಭಗೊಳ್ಳುತ್ತಿದೆ. ಹಿಂದಿನ ವರ್ಷಗಳಲ್ಲಿ ಆಶ್ಲೇಷಾದ ಆರ್ಭಟವೂ ಜನರ ಮನದಲ್ಲಿದ್ದು, ಮುಂಗಾರಿನ ಅವಧಿಯ ಆತಂಕದೊAದಿಗೇ ದಿನದೂಡುವಂತಾಗಿದೆ.
ಜಿಲ್ಲೆಯಲ್ಲಿ ಸರಾಸರಿ 41.24 ಇಂಚು ಅಧಿಕ
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಸರಾಸರಿ 41.24 ಇಂಚುಗಳಷ್ಟು ಅಧಿಕ ಮಳೆಯಾಗಿರುವುದು ಜಿಲ್ಲೆಯ ಈಗಿನ ಆತಂಕದ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ತನಕದ ಅವಧಿಯಲ್ಲಿ ಜಿಲ್ಲೆಗೆ ಕೇವಲ 47.44 ಇಂಚು ಸರಾಸರಿ ಮಳೆಯಾಗಿತ್ತು. ಆದರೆ, ಈ ವರ್ಷ ಈ ಪ್ರಮಾಣ 88.68 ಇಂಚುಗಳಷ್ಟಾಗಿವೆ.
ಜಿಲ್ಲೆಯ ಐದು ತಾಲೂಕುಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ ಈ ಬಾರಿ ಅತ್ಯಧಿಕ ಅಂದರೆ ಸರಾಸರಿ 122 ಇಂಚುಗಳಷ್ಟು ಮಳೆ ದಾಖಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 100.39, ವೀರಾಜಪೇಟೆ ತಾಲೂಕಿನಲ್ಲಿ 82.67, ಪೊನ್ನಂಪೇಟೆ 85.66 ಹಾಗೂ ಕುಶಾಲನಗರ ತಾಲೂಕಿನಲ್ಲಿ ಸರಾಸರಿ 52.66 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 80.33, ಸೋಮವಾರಪೇಟೆ 50.78, ವೀರಾಜಪೇಟೆ 37.34, ಪೊನ್ನಂಪೇಟೆ 38.02 ಹಾಗೂ ಕುಶಾಲನಗರ ತಾಲೂಕಿನಲ್ಲಿ 30.69 ಇಂಚುಗಳಷ್ಟು ಮಾತ್ರ ಮಳೆಯಾಗಿತ್ತು.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 1.72 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 2.86, ವೀರಾಜಪೇಟೆ 1.80, ಪೊನ್ನಂಪೇಟೆ 1.71, ಸೋಮವಾರಪೇಟೆ 1.55 ಹಾಗೂ ಕುಶಾಲನಗರ ತಾಲೂಕಿನಲ್ಲಿ 0.70 ಇಂಚು ಮಳೆಯಾಗಿದೆ. ಭಾಗಮಂಡಲ ಹೋಬಳಿಯಲ್ಲಿ ಅತ್ಯಧಿಕ 4.37 ಇಂಚು ಮಳೆ ದಾಖಲಾಗಿದೆ. ನಿನ್ನೆಯಿಂದ ಮಳೆಯ ತೀವ್ರತೆ ಒಂದಷ್ಟು ಕಡಿಮೆಯಾಗಿರುವಂತೆ ಕಂಡುಬAದಿದ್ದರೂ ಮಳೆಯ ಸನ್ನಿವೇಶ ಮುಂದುವರಿಯುತ್ತಿದೆಇAಚುಗಳಷ್ಟು ಅಧಿಕ ಮಳೆಯಾಗಿರುವುದು ಜಿಲ್ಲೆಯ ಈಗಿನ ಆತಂಕದ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ತನಕದ ಅವಧಿಯಲ್ಲಿ ಜಿಲ್ಲೆಗೆ ಕೇವಲ 47.44 ಇಂಚು ಸರಾಸರಿ ಮಳೆಯಾಗಿತ್ತು. ಆದರೆ, ಈ ವರ್ಷ ಈ ಪ್ರಮಾಣ 88.68 ಇಂಚುಗಳಷ್ಟಾಗಿವೆ.
ಜಿಲ್ಲೆಯ ಐದು ತಾಲೂಕುಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ ಈ ಬಾರಿ ಅತ್ಯಧಿಕ ಅಂದರೆ ಸರಾಸರಿ 122 ಇಂಚುಗಳಷ್ಟು ಮಳೆ ದಾಖಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 100.39, ವೀರಾಜಪೇಟೆ ತಾಲೂಕಿನಲ್ಲಿ 82.67, ಪೊನ್ನಂಪೇಟೆ 85.66 ಹಾಗೂ ಕುಶಾಲನಗರ ತಾಲೂಕಿನಲ್ಲಿ ಸರಾಸರಿ 52.66 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 80.33, ಸೋಮವಾರಪೇಟೆ 50.78, ವೀರಾಜಪೇಟೆ 37.34, ಪೊನ್ನಂಪೇಟೆ 38.02 ಹಾಗೂ ಕುಶಾಲನಗರ ತಾಲೂಕಿನಲ್ಲಿ 30.69 ಇಂಚುಗಳಷ್ಟು ಮಾತ್ರ ಮಳೆಯಾಗಿತ್ತು.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 1.72 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 2.86, ವೀರಾಜಪೇಟೆ 1.80, ಪೊನ್ನಂಪೇಟೆ 1.71, ಸೋಮವಾರಪೇಟೆ 1.55 ಹಾಗೂ ಕುಶಾಲನಗರ ತಾಲೂಕಿನಲ್ಲಿ 0.70 ಇಂಚು ಮಳೆಯಾಗಿದೆ. ಭಾಗಮಂಡಲ ಹೋಬಳಿಯಲ್ಲಿ ಅತ್ಯಧಿಕ 4.37 ಇಂಚು ಮಳೆ ದಾಖಲಾಗಿದೆ. ನಿನ್ನೆಯಿಂದ ಮಳೆಯ ತೀವ್ರತೆ ಒಂದಷ್ಟು ಕಡಿಮೆಯಾಗಿರುವಂತೆ ಕಂಡುಬAದಿದ್ದರೂ ಮಳೆಯ ಸನ್ನಿವೇಶ ಮುಂದುವರಿಯುತ್ತಿದೆ.ಕರಿಕೆ: ಕೆಲ ದಿನಗಳಿಂದ ಪಶ್ಚಿಮ ಘಟ್ಟಗಳ ತಪ್ಪಲಿನ ಕರಿಕೆ ಗ್ರಾಮದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಆಸ್ತಿ - ಪಾಸ್ತಿಗೆ ಹಾನಿಯಾಗಿದೆ. ಚೆತ್ತುಕಾಯ ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯ ಕಟ್ಟಡದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಿಟಕಿಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಪೋಷಕರ ಸಹಕಾರದಿಂದ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ನೂತನ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಕಾಮಗಾರಿ ಪೂರ್ಣಗೊಳ್ಳುವ ತನಕ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಇದನ್ನು ತುರ್ತು ದುರಸ್ತಿ ಮಾಡಲು ಜಿಲ್ಲಾಡಳಿತ ಕ್ರಮವಹಿಸಬೇಕಿದೆ. ಪಚ್ಚೆಪಿಲಾವು ಹೆಚ್.ಎಂ. ಮಿತ್ರ ಕುಮಾರ ಎಂಬವರ ವಾಸದ ಮನೆಯ ಹಿಂಭಾಗ ಗುಡ್ಡ ಕುಸಿದು ಸಿಮೆಂಟ್ ಶೀಟ್ಗಳು ಹಾನಿಯಾಗಿವೆ. ಸ್ಥಳಕ್ಕೆ ಕಂದಾಯ ಸಿಬ್ಬಂದಿಗಳು ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಶೈಲಾ ಕೃಷ್ಣ ಎಂಬವರ ಮನೆಯ ಮುಂದೆ ಇರುವ ಬರೆ ಕುಸಿತಗೊಂಡಿದೆ.
ಗ್ರಾಮ ಪಂಚಾಯಿತಿ ಸದಸ್ಯೆ ಜಯಶ್ರೀ ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತಂದ ಮೇರೆಗೆ ಮಣ್ಣನ್ನು ತೆರವುಗೊಳಿಸಲಾಯಿತು. ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಕಾರ್ಯದರ್ಶಿ ಪುನಿತ್, ಸದಸ್ಯೆ ಜಯಶ್ರೀ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಸಿಬ್ಬಂದಿ ಲೋಕೇಶ್ ಸ್ಥಳ ಪರಿಶೀಲನೆ ನಡೆಸಿದರು.
ಮುಳ್ಳೂರು: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪ್ರವಾಸ ಮಾಡಿ ಮಳೆಹಾನಿಗೆ ಒಳಗಾದ ಸ್ಥಳಗಳನ್ನು ವೀಕ್ಷಿಸಿದರು. ಶನಿವಾರಸಂತೆ ಹೋಬಳಿಯಲ್ಲಿ ಮಳೆಗೆ ಹೆಚ್ಚು ಹಾನಿಯಾದ ಗೌಡಳ್ಳಿ, ಸೀಗೆಮರೂರು, ಕೊಡ್ಲಿಪೇಟೆ ಹೋಬಳಿಯ ಕ್ಯಾತೆ ಹೊಳೆ ಮತ್ತು ಹೇಮಾವತಿ ಜಲಾಶಯ ಹಿನ್ನೀರಿನಿಂದ ಅತಿ ಹೆಚ್ಚು ಹಾನಿಗೊಳಗಾದ ಕ್ಯಾತೆ, ಊರುಗುತ್ತಿ, ಬೆಂಬಳೂರು ಮುಂತಾದ ಗ್ರಾಮಗಳಿಗೆ ತೆರಳಿ ಮಳೆಯಿಂದ ಹಾನಿಗೊಳಗಾದ ಕೃಷಿ ಜಮೀನುಗಳನ್ನು ವೀಕ್ಷಿಸಿದರು.
ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರಸಂತೆ ಹೋಬಳಿಗಾಗಿ ಮುಂಜಾಗ್ರತವಾಗಿ ತೆರೆದಿರುವ ಕಾಳಜಿ ಕೇಂದ್ರ ಮತ್ತು ಕೊಡ್ಲಿಪೇಟೆ ಹೋಬಳಿಗಾಗಿ ಕ್ಯಾತೆ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಸೋಮವಾರಪೇಟೆ ತಹಶೀಲ್ದಾರ್ ನವೀನ್ ಕುಮಾರ್, ಉಪ ತಹಶೀಲ್ದಾರ್ ಶ್ರೀಧರ್, ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಸೋಮವಾರಪೇಟೆ : ಭಾರೀ ಗಾಳಿ-ಮಳೆಯಿಂದ ಮನೆಗಳಿಗೆ ಹಾನಿಯಾದ ಪ್ರದೇಶಗಳಿಗೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಚೆನ್ನಾಪುರ, ದೊಡ್ಡಮಳ್ತೆ, ಒಡೆಯನಪುರ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು, ಭಾರೀ ಮಳೆಯಿಂದ ಮನೆಗಳ ಗೋಡೆ ಕುಸಿದಿರುವುದು, ಬರೆ ಕುಸಿತದಿಂದ ವಾಸದ ಮನೆಗೆ ಹಾನಿಯಾಗಿರುವುದನ್ನು ವೀಕ್ಷಿಸಿದರು.
ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ತಕ್ಷಣ ಸಹಾಯ ನೀಡಬೇಕು. ಮನೆ ಕಳೆದುಕೊಂಡಿರುವ ಬಡವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪರಿಹಾರವನ್ನು ಅತಿ ಶೀಘ್ರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯವರಿಗೆ ಸೂಚಿಸಿದರು. ಇದೇ ಸಂದರ್ಭ ಸಂತ್ರಸ್ಥರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.ವೀರಾಜಪೇಟೆ: ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ವಾಸದ ಮನೆ ಕುಸಿದು ಬಿದ್ದಿರುವ ಘಟನೆ ಕೆದಮುಳ್ಳೂರು ಕೊಟ್ಟೋಳಿ ಗ್ರಾಮದಲ್ಲಿ ನಡೆದಿದೆ.
ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ಯು. ನಬೀಸಾ ವಾಸವಿದ್ದ ಮನೆಯು ತಡರಾತ್ರಿ ಕುಸಿದು ಬಿದ್ದಿದೆ.
ಮಳೆಯಿಂದ ಮನೆಯ ಗೋಡೆಯ ಒಂದು ಭಾಗ ಕುಸಿತಗೊಂಡಿದ್ದು, ಇದರಿಂದ ನಬೀಸಾ ಅವರು ತನ್ನ ಮಗಳ ಮನೆಯಲ್ಲಿ ವಾಸವಾಗಿದ್ದರು. ಕಳೆದ ರಾತ್ರಿ ಸುರಿದ ಮಳೆಗೆ ವಾಸದ ಮನೆಯ ಮೇಲ್ಛಾವಣಿಯೊಂದಿಗೆ ಕುಸಿದು ಬಿದ್ದಿದೆ. ವಿಷಯ ಅರಿತು ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಬಿ. ಮಣಿ, ಅಧÀ್ಯಕ್ಷ ಜೆಫ್ರಿ ಉತ್ತಪ್ಪ, ಸದಸ್ಯರಾದ ಎಂ.ಎA. ಇಸ್ಮಾಯಿಲ್ ಮತ್ತು ಗ್ರಾಮ ಲೆಕ್ಕಿಗರಾದ ಅನುಷಾ ಅವರು ಸ್ಥಳಕ್ಕೆ ಭೇಟಿ ನೀಡಿ ಮನೆಯನ್ನು ಪರಿಶೀಲನೆ ಮಾಡಿದರು.ಕುಶಾಲನಗರ : ಕಳೆದ ನಾಲ್ಕು ದಿನಗಳಿಂದ ಅಪಾಯದ ಹಂತ ಮೀರಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇನ್ನೂ ಇಳಿಕೆಯಾಗಿಲ್ಲ.
ಕುಶಾಲನಗರ - ಕೊಪ್ಪ ವ್ಯಾಪ್ತಿಯಲ್ಲಿ ಸೇತುವೆಯ ಕೆಳಭಾಗದಲ್ಲಿ ಸುಮಾರು 27 ಅಡಿಗಳಷ್ಟು ಎತ್ತರಕ್ಕೆ ಕಾವೇರಿ ನದಿಯಲ್ಲಿ ನೀರು ಹರಿಯುತ್ತಿದೆ.
ಹಾರಂಗಿ ಜಲಾಶಯದಿಂದ ನದಿಗೆ ಬಿಡುವ ನೀರಿನ ಪ್ರಮಾಣ ಇಳಿಕೆಯಾಗಿದ್ದರೂ ಕಾವೇರಿ ನದಿಯಲ್ಲಿ ಮಾತ್ರ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿಲ್ಲ.
ನದಿ ಅಂಚಿನ ತಗ್ಗು ಪ್ರದೇಶದ ಹೊಲ - ಗದ್ದೆಗಳು ಕಳೆದ ನಾಲ್ಕು ದಿನಗಳಿಂದ ಜಲಾವೃತಗೊಂಡಿರುವ ದೃಶ್ಯ ಕಂಡುಬAದಿದೆ.
ಈ ಹಿನ್ನೆಲೆಯಲ್ಲಿ ಕುಶಾಲನಗರದ ತಗ್ಗುಪ್ರದೇಶದ ಬಡಾವಣೆಗಳ ನಿವಾಸಿಗಳು ಹಗಲು - ರಾತ್ರಿ ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಎದುರಾಗಿದೆ. ಹಗಲು ವೇಳೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬಹುತೇಕ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಈ ಸಾಲಿನಲ್ಲಿ ಹಾರಂಗಿ ಜಲಾಶಯಕ್ಕೆ ಒಟ್ಟು 20 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು, ನದಿಗೆ 16.34, ಟಿ ಎಂ ಸಿ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಪ್ರಸಕ್ತ ಜಲಾಶಯಕ್ಕೆ 8500 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿದು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ.ಜೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.ನಾಪೋಕ್ಲು: ಇಲ್ಲಿಗೆ ಸಮೀಪದ ಕಕ್ಕಬ್ಬೆ ಕಾಫಿ ತೋಟಗಳಿಗೆ ಶಾಸಕರು, ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ ನಾರಾಯಣ್ ಭೇಟಿ ನೀಡಿದರು.
ನಾಲಡಿ ಗ್ರಾಮದ ಕಾಫಿ ತೋಟಕ್ಕೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಕಾಫಿ ಬೆಳೆ, ಕರಿ ಮೆಣಸು, ರಸ್ತೆ ಹಾನಿ, ವಿದ್ಯುತ್ ತೊಂದರೆ, ಆನೆಯ ಉಪಟಳ, ಇತರ ತೊಂದರೆಗಳನ್ನು ಅಶ್ವತ್ ನಾರಾಯಣ್ ಅವರ ಗಮನಕ್ಕೆ ತಂದರು.
ಈ ಸಂದರ್ಭ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ರಾಬಿನ್ ದೇವಯ್ಯ, ಸುವಿನ್, ಕಿರಣ್ ಕಾರ್ಯಪ್ಪ, ಸಿ. ಜಗದೀಶ್, ಎಂ. ರಮೇಶ್, ಬಿ. ನಂದ, ಸಂತು ಸುಬ್ರಮಣಿ. ರಘು, ಎ. ಕುಶಾಲಪ್ಪ, ಪಿ. ಸುಬ್ರಮಣಿ, ಕಸ್ತೂರಿ, ಸಿ. ರೋಷನ್, ಎಂ. ಆದೇಶ್, ಎಂ. ಪಳಂಗಪ್ಪ, ಸಿ. ಸರು ಅಪ್ಪಚ್ಚು, ಚುನಾಯಿತ ಪ್ರತಿನಿಧಿಗಳು, ಇನ್ನಿತರ ಪ್ರಮುಖರು ಇದ್ದರು.ಸಿದ್ದಾಪುರ : ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ನದಿ ತೀರದ ನಿವಾಸಿಗಳನ್ನು ಸಿದ್ದಾಪುರದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು. ಇದೀಗ ಸಿದ್ದಾಪುರದ ಪರಿಹಾರ ಕೇಂದ್ರದಲ್ಲಿ 24 ಕುಟುಂಬಗಳ 76 ಮಂದಿ ಆಶ್ರಯ ಪಡೆದಿದ್ದಾರೆ. ಅಮ್ಮತ್ತಿ ಸಮೀಪದ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಹಚ್ಚಿನಾಡು ಗ್ರಾಮದಲ್ಲಿ 10 ಕುಟುಂಬಗಳ 44 ಮಂದಿಯನ್ನು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಮಾಹಿತಿ ನೀಡಿದ್ದಾರೆಕೂಡಿಗೆ : ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ 20 ಎಕರೆಗಳಷ್ಟು ಪ್ರದೇಶದಲ್ಲಿ ಕೃಷಿ ಇಲಾಖೆ ವತಿಯಿಂದ ಭತ್ತದ ಗದ್ದೆಗಳಲ್ಲಿ ಭತ್ತ ಬೆಳೆಯ ನಾಟಿ ಕಾರ್ಯ ಆರಂಭಗೊAಡಿದೆ.
ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಬೋಪಯ್ಯ ಮಾರ್ಗದರ್ಶನದಲ್ಲಿ ನಾಟಿ ಕಾರ್ಯವು ನಡೆಯುತ್ತಿದೆ.
ಸಿದ್ದಾಪುರ: ಧಾರಾಕಾರ ಮಳೆ ಗಾಳಿಯಿಂದ ಮನೆ ಕುಸಿದಿರುವ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ.
ಗುಹ್ಯ ಗ್ರಾಮದ ನಿವಾಸಿ ಜ್ಯೋಸ್ಪಿನ ಎಂಬವರ ಮನೆಯ ಗೋಡೆಗಳು ಕುಸಿದಿದ್ದು ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಓಮಪ್ಪ ಬಣಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಗಾಳಿ, ಮಳೆಯ ಪ್ರಮಾಣ ಇಳಿಮುಖಗೊಂಡಿದ್ದರೂ ಅಲ್ಲಲ್ಲಿ ಅವಾಂತರಗಳು ಸೃಷ್ಟಿಸುತ್ತಲೇ ಇದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಕೆಲವು ಕಡೆ ರಸ್ತೆಗೆ ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿವೆ.
ಕೊಡಗರಹಳ್ಳಿ ರಾಷ್ಟಿçÃಯ ಹೆದ್ದಾರಿಯಲ್ಲಿ ಗುರುವಾರ ಮಧ್ಯಾಹ್ನ ಮರ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ವಿಚಾರ ತಿಳಿದು ಕಾರ್ಯಪ್ರವೃತ್ತರಾದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಸುಮೇಶ್ ಅವರ ನೇತೃತ್ವದಲ್ಲಿ ತ್ವರಿತಗತಿಯಲ್ಲಿ ಮರವನ್ನು ಕತ್ತರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಧನಂಜಯ ಇದ್ದರು.