ಮಡಿಕೇರಿ, ಆ. ೨: ಕೊಡಗು ಜಿಲ್ಲೆಯ ಲೋಕೋಪಯೋಗಿ ಗುತ್ತಿಗೆದಾರರಿಗೆ ವಿವಿಧ ಇಲಾಖೆ ಗಳಿಂದ ಹಲವಾರು ಕಾಮಗಾರಿಗಳಿಗೆ ಒಟ್ಟು ರೂ.೧೬೫.೮೪ ಕೋಟಿ ಹಣ ಬಿಡುಗಡೆ ಬಾಕಿ ಇದ್ದು ಹಣ ಪಾವತಿಯಾಗದೆ ಇದ್ದಲ್ಲಿ ಮುಂದೆ ಕಾಮಗಾರಿಗಳನ್ನು ನಿರ್ವಹಿಸದೇ ಇರಲು ತೀರ್ಮಾನಿಸಲಾಗಿದೆ ಎಂದು ಮಡಿಕೇರಿ ತಾಲೂಕು ಲೋಕೋಪ ಬಿಲ್ಲನ್ನು ಪಾವತಿಸದೇ ಇದ್ದಲ್ಲಿ ಮುಂದೆ ಬರುವಂತಹ ಎಲ್ಲಾ ಕಾಮಗಾರಿಗಳನ್ನು ನಿರ್ವಹಿಸದೇ ಇರುವಂತೆ ತೀರ್ಮಾನಿ ಸಿರುವುದಾಗಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿಯೂ ಈ ಸಂದರ್ಭ ಎಚ್ಚರಿಸಿದರು.
ಬಾಕಿ ಇರುವ ಬಿಲ್ಲಿನ ವಿವರ
ಲೋಕೋಪಯೋಗಿ ಇಲಾಖೆಯಲ್ಲಿ
(ಮೊದಲ ಪುಟದಿಂದ) ವಿವಿಧ ಲೆಕ್ಕ ಶೀರ್ಷಿಕೆಯಡಿ ಪಾವತಿಗೆ ಬಾಕಿಯಿರುವ ಹಣದ ಮೊತ್ತ ರೂ.೧೩,೧೩೯.೪ ಲಕ್ಷ, ಕೊಡಗು ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗದಲ್ಲಿ ಲೆಕ್ಕ ಶೀರ್ಷಿಕೆ ೫೦೫೪ ರಲ್ಲಿ ರೂ.೧,೮೯೦ ಲಕ್ಷ, ೩೦೫೪ ಟಾಸ್ಕ್ ಫೋರ್ಸ್ (೨೦೨೨-೨೩) ರೂ.೨೦೭.೪೫ ಲಕ್ಷ, ೩೦೫೪ ಟಾಸ್ಕ್ ಫೋರ್ಸ್ (೨೦೨೩-೨೪) ರೂ. ೨೨೬.೫೨ ಲಕ್ಷ, ಐ.ಟಿ.ಡಿ.ಪಿ ರೂ.೧೧೭.೭೧ ಲಕ್ಷ, ಮಡಿಕೇರಿ ತಾಲೂಕು ಮಳೆ ಹಾನಿ ದುರಸ್ತಿ (ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್) ೨೦೧೯-೨೦, ೨೦೨೦-೨೧ ಒಟ್ಟು ರೂ.೫೨೦.೮೯ ಲಕ್ಷ, ಸೋಮವಾರಪೇಟೆ ತಾಲೂಕು ಮಳೆ ಹಾನಿ ದುರಸ್ತಿ (ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್) ೨೦೨೧-೨೨ ಒಟ್ಟು ರೂ.೪೫.೧೦ ಲಕ್ಷ, ವೀರಾಜಪೇಟೆ ತಾಲೂಕು ಮಳೆ ಹಾನಿ ದುರಸ್ತಿ (ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್) ೨೦೧೯-೨೦,೨೦೨೦-೨೧,೨೦೨೧-೨೨ ಒಟ್ಟುರೂ.೫೬.೯೯ ಲಕ್ಷ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ (PಒಉSಙ - S-ಅ-P- ರೂ.೨೦೦ ಲಕ್ಷ ಹಾಗೂ ಸಣ್ಣ ನೀರಾವರಿ ಇಲಾಖೆ ಯಿಂದ ಒಟ್ಟು ಬಾಕಿ ರೂ.೧೮೦ಲಕ್ಷ ಸೇರಿ ರೂ.೧೬೫.೮೪ ಕೋಟಿ ಹಣ ಪಾವತಿಗೆ ಬಾಕಿ ಇದೆ ಎಂದು ಸಂಘದ ಸದಸ್ಯರು ಮಾಹಿತಿ ಇತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಬಿ.ಆರ್. ಸದಾಶಿವ ರೈ, ಕಾರ್ಯದರ್ಶಿ ಕೆ.ಬಿ. ಪೂಣಚ್ಚ, ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಎನ್.ಎ. ವಿನೋದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಆರ್. ರವಿಕುಮಾರ್, ಜಿಲ್ಲಾ ಖಜಾಂಚಿ ರವೀಂದ್ರ ರೈ ಹಾಗೂ ಅಧ್ಯಕ್ಷರು ಉಪಸ್ಥಿತರಿದ್ದರು.