ಮಡಿಕೇರಿ, ಆ. 1: ಯುವ ಬಂಟ್ಸ್ ಅಸೋಸಿಯೇಷನ್ ಕೊಡಗು ವತಿಯಿಂದ ಮಡಿಕೇರಿ ನಗರ ಬಂಟರ ಮಹಿಳಾ ಘಟಕದ ಸಹಯೋಗದಲ್ಲಿ ಆಟಿ ಪ್ರಯುಕ್ತ ತಾ. 4 ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 2ನೇ ವರ್ಷದ ಆಟಿಡೊಂಜಿ ದಿನ ಬಂಟೆರೆನ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ನ ಪದಾಧಿಕಾರಿಗಳು ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವ ಬಂಟ್ಸ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ನಿತಿನ್ ರೈ, ಮಾಜಿ ಉಪಾಧ್ಯಕ್ಷ ಶರತ್ಕುಮಾರ್ ಶೆಟ್ಟಿ, ನಿರ್ದೇಶಕ ರವಿಕಿರಣ್ ಶೆಟ್ಟಿ ಈ ಬಗ್ಗೆ ಮಾಹಿತಿಯಿತ್ತರು. ಅಂದು ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಐತಪ್ಪ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನಗರ ಬಂಟರ ಸಂಘದ ಅಧ್ಯಕ್ಷೆ ಸೌಮ್ಯ ಸದಾಶಿವ ರೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟರ ಮಹಿಳಾ ಘಟಕದ ಸ್ಥಾಪಕ ಅಧ್ಯಕ್ಷೆ ವಿಜಯಲಕ್ಷಿö್ಮ ರವಿಶೆಟ್ಟಿ, ಜಿಲ್ಲಾ ಬಂಟರ ಸಂಘದ ಸಹ ಕಾರ್ಯದರ್ಶಿ ಬಿ.ಸಿ. ಹರೀಶ್ ರೈ, ಯುವ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಸುಜಿತ್ ಶೆಟ್ಟಿ, ನಿವೃತ್ತ ಪಿಎಸ್ಐ ಬಾಲಕೃಷ್ಣ ರೈ, ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಹಗ್ಗಜಗ್ಗಾಟ, ಫುಟ್ಬಾಲ್, ಥ್ರೋಬಾಲ್ ಮತ್ತಿತರ ಸ್ಪರ್ಧೆಗಳು ನಡೆಯಲಿದೆ. ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಉದ್ಘಾಟಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ, ಉದ್ಯಮಿಗಳಾದ ಜಯಂತಿ ಆರ್. ಶೆಟ್ಟಿ, ಅಶ್ವಿನಿ ಪುರುಷೋತ್ತಮ ರೈ, ಕೆ.ಡಿ. ಸತೀಶ್ ರೈ, ಬಂಟರ ಸಂಘದ ಮೂರು ತಾಲೂಕುಗಳ ಅಧ್ಯಕ್ಷರುಗಳು ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಬಳಿಕ ಕಲ್ಲಡ್ಕದ ವಿಠಲನಾಯಕ್ ಬಳಗದಿಂದ ಸಂದೇಶ ಸಂತೋಷ ಕಾರ್ಯಕ್ರಮ ನಡೆಯಲಿದೆ. ಆಟಿ ಖಾದ್ಯಗಳ ಪ್ರದರ್ಶನ ಸ್ಪರ್ಧೆಯೂ ಅದೇ ದಿನ ನಡೆಯಲಿದೆ ಎಂದು ಅವರುಗಳು ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ರೈ, ನಿರ್ದೇಶಕ ಸುನಿಲ್ ಶೆಟ್ಟಿ, ಖಜಾಂಚಿ ಶಿವಪ್ರಸಾದ್ ರೈ ಉಪಸ್ಥಿತರಿದ್ದರು.