ಕುಶಾಲನಗರ, ಆ. ೨: ಕೊಡಗರಹಳ್ಳಿ ಬಳಿ ನಡೆದ ಅಕ್ರಮ ಬೀಟಿ ಮರ ಸಾಗಾಟ ಪ್ರಕರಣದ ಸಂಬAಧ ಕಾಫಿ ಬೆಳೆಗಾರ ಅಪ್ಪಯ್ಯ, ಸುಂಟಿಕೊಪ್ಪ ಮರ ವ್ಯಾಪಾರಿ ಮುಸ್ತಫಾ ಮತ್ತು ಮರ ಸಾಗಾಟಕ್ಕೆ ಬಳಸಿದ ಲಾರಿ ಮಾಲೀಕ ಮತ್ತು ಪಿಕಪ್ ವಾಹನದ ಮಾಲೀಕ ಚಾಲಕರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮೊಕದ್ದಮೆ ದಾಖಲಿಸಿದ್ದಾರೆ.
ಗುರುವಾರ ಕೊಡಗರಹಳ್ಳಿ ಬಳಿಯ ಕೂರ್ಗ್ ಕಾಫಿ ಎಸ್ಟೇಟ್ (ಮಹಾಲಕ್ಷಿö್ಮ ಎಸ್ಟೇಟ್)ನಿಂದ ಮೂರು ಬೀಟಿ ಮರಗಳನ್ನು ಕಡಿದು ಸಾಗಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷಾಂತರ ಮೌಲ್ಯದ ಮರಗಳ ನಾಟಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್ ತಿಳಿಸಿದ್ದಾರೆ.
ಆರೋಪಿಗಳ ಮೇಲೆ ಅರಣ್ಯ ಇಲಾಖೆಯ ನಿಯಮಾನುಸಾರ ಪ್ರಕರಣ ದಾಖಲಾಗಿದೆ . ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.