ಸೋಮವಾರಪೇಟೆ, ಆ. ೨: ಅಂತರಾಷ್ಟಿçÃಯ ಲಯನ್ಸ್ ಸಂಸ್ಥೆ ಸೋಮವಾರಪೇಟೆ ಘಟಕದ ವತಿಯಿಂದ ಗರಗಂದೂರು ಬಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಪರಿಸರ ಸ್ನೇಹಿ ಚಿತಾಗಾರವನ್ನು ಬೆಂಗಳೂರು ವಿದ್ಯಾರಣ್ಯಪುರ ಲಯನ್ಸ್ ಕ್ಲಬ್ನ ಪಿ.ಎಂ.ಜೆ.ಎಫ್.ಸಿ. ಯುಧಿಷ್ಠಿರ ಅವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪರಿಸರ ಸ್ನೇಹಿ ಚಿತಾಗಾರದ ಅವಶ್ಯಕತೆಗಳು ಹೆಚ್ಚಿವೆ. ಕಡಿಮೆ ಸೌಧೆಯನ್ನು ಉಪಯೋಗಿಸಿ ಅಂತ್ಯಕ್ರಿಯೆಯನ್ನು ಮುಗಿಸಬಹುದು. ಇದರಿಂದ ಪರಿಸರ ರಕ್ಷಣೆಯಾಗುತ್ತದೆ. ಮಾಲಿನ್ಯವನ್ನು ತಡೆಗಟ್ಟಬಹುದು ಎಂದರು.
ಲಯನ್ಸ್ ಮಾಜಿ ಅಧ್ಯಕ್ಷ ಎ.ಎಸ್. ಮಹೇಶ್ ಮಾತನಾಡಿ, ತನ್ನ ಅಧಿಕಾರ ಅವಧಿಯಲ್ಲಿ ರೂ. ೧೪ ಲಕ್ಷ ವೆಚ್ಚದಲ್ಲಿ ಸಮಾಜಮುಖಿ ಯೋಜನೆಗಳನ್ನು ರೂಪಿಸಿದ್ದೇವೆ. ದಾನಿಗಳಾದ ಶಂಕರಪ್ಪ, ಶಾರದ ಅವರುಗಳು ನೀಡಿದ ಹಣದಲ್ಲಿ ಬಸವೇಶ್ವರ ರಸ್ತೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಪಿಎಂಜೆಎಫ್ ಬಿ.ಎಸ್. ರಾಜಶೇಖರಯ್ಯ, ವಲಯ ಅಧ್ಯಕ್ಷ ಚೆಟ್ಟಿಮಾಡ ಕೆ. ರೋಹಿತ್, ಕ್ಲಬ್ ಅಧ್ಯಕ್ಷ ಸಿ.ಕೆ. ಶಿವಕುಮಾರ್, ಖಜಾಂಚಿ ಕೆ.ಡಿ. ವೀರಪ್ಪ, ಕಾರ್ಯದರ್ಶಿ ಪದ್ಮಾಕರ ರಾಜೇ ಅರಸ್, ಜಗತ್ ಪ್ರಧಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಲೀಲಾವತಿ ಇದ್ದರು.