ಕಾರ್ಯದರ್ಶಿಯಾಗಿ ನರೇಂದ್ರ ಪಿ.ಟಿ.
ವೀರಾಜಪೇಟೆ, ಆ. ೨: ಒಂದು ಸಂಸ್ಥೆಯು ಸಮಾಜದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತಿದ್ದಲ್ಲಿ ಅದಕ್ಕೆ ಮುಖ್ಯ ಕಾರಣ ಸಂಸ್ಥೆಯ ಅಡಳಿತ ಮಂಡಳಿಯ ಕಾರ್ಯದಕ್ಷತೆ ಎಂದು ಲಯನ್ಸ್ ಸಂಸ್ಥೆಯ ಅಂರ‍್ರಾಷ್ಟಿçÃಯ ತರಬೇತಿದಾರ ಪ್ರೀತಂ ಪೊನ್ನಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ವೀರಾಜಪೇಟೆ ವತಿಯಿಂದ ೨೦೨೪-೨೫ನೇ ಸಾಲಿನ ಪದಗ್ರಹಣ ಸಮಾರಂಭವು ಕೊಡವ ಸಮಾಜ ವೀರಾಜಪೇಟೆ ರಿಕ್ರಿಯೇಷನ್ ಕ್ಲಬ್‌ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿ ನೂತನ ಅಡಳಿತ ಮಂಡಳಿಯ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಪ್ರೀತಂ ಪೊನ್ನಪ್ಪ, ಸಭೆಯು ಸುದೀರ್ಘವಾಗಿ ನಡೆಯಬಾರದು. ಸಭೆಯಲ್ಲಿ ನಡೆಯುವ ಎಲ್ಲಾ ಕಾರ್ಯಸೂಚಿಗಳ ಪಟ್ಟಿ ಸಭೆಯ ಮುಂಚಿತವಾಗಿ ಸಿದ್ಧಪಡಿಸಬೇಕು. ಒಂದು ಉತ್ತಮವಾದ ಸಂಸ್ಥೆಯು ಬೆಳೆಯುವಲ್ಲಿ ಶಿಸ್ತು ಮತ್ತು ಸಮಯಪಾಲನೆ ಅತಿ ಮುಖ್ಯವಾಗಿ ಪರಿಗಣಿಸುವಂತಾಗಬೇಕು. ಲಯನ್ಸ್ ಸಂಸ್ಥೆಯ ಧ್ಯೇಯ ಉದ್ದೇಶಗಳಿಗೆ ಪ್ರಮುಖ್ಯತೆ ನೀಡುವಂತಾಗಬೇಕು ಎಂದು ನೂತನ ಆಡಳಿತ ಮಂಡಳಿ ಸದಸ್ಯರಿಗೆ ಕಿವಿಮಾತು ಹೇಳಿದರು.
ನಿರ್ಗಮಿತ ಅಧ್ಯಕ್ಷರಾದ ಕರ್ಣಂಡ ಜಯ ಮಾತನಾಡಿ, ಸಂಸ್ಥೆಯು ಕಳೆದ ಸಾಲಿನಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಅದರಂತೆ ವಿವಿಧ ಸಂಸ್ಥೆಗಳೊAದಿಗೆ ಜಂಟಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿತ್ತು ಎಂದರು.
ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿಪತ್ರ ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
೨೦೨೪-೨೫ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆಗೊಂಡು ಅಧ್ಯಕ್ಷರಾಗಿ ಬಿ.ಪಿ. ಅಶ್ವತ್ ಗಣಪತಿ, ಕಾರ್ಯದಶಿಯಾಗಿ ನರೇಂದ್ರ ಪಿ.ಟಿ., ಆಡಳಿತಾಧಿಕಾರಿಗಳಾಗಿ ತ್ರೀಶು ಗಣಪತಿ ಬಿ.ಯು., ಕೋಶಾಧಿಕಾರಿಗಳಾಗಿ ಕರ್ಣಂಡ ಜಯ, ಉಪಾಧ್ಯಕ್ಷರಾಗಿ ಬಿ.ಸಿ. ಸೋಮಯ್ಯ, ಅಜಿತ್ ಎ.ಎ., ಸುಬ್ರಮಣಿ ಪಿ.ಪಿ. ಆಯ್ಕೆಗೊಂಡರು. ನಿರ್ದೇಶಕರಾಗಿ ಸೋಮಯ್ಯ ಕೆ.ಎಂ., ಮೋಹನ್ ರೈ, ಪ್ರತಾಪ್ ಚಿಣ್ಣಪ್ಪ, ಸುಬ್ರಮಣಿ ಎ.ಪಿ., ಗಿಲ್ ಸೋಮಯ್ಯ, ಪೌಲ್ ಕ್ಸೆವಿಯರ್, ಪ್ರಸನ್ನ ಎ.ಪಿ. ಆಯ್ಕೆಗೊಂಡರು. ವಿವಿಧ ಸಮಿತಿಯ ಸದಸ್ಯರಾಗಿ ಸತೀಶ್ ಬಿ.ಎಂ., ಎಂ.ಎA. ಸುರೇಶ್, ತಿಮ್ಮಯ್ಯ ಮಾದಂಡ, ನಿಯಾಜ್ ಕೆ.ಪಿ. ಕೃಷ್ಣಮೂರ್ತಿ ಬಿ.ಎ, ವಿಕ್ರಂ ಚೆಂಗಪ್ಪ ಪಟ್ಟಡ, ಆಯ್ಕೆಗೊಂಡರು.
ವೇದಿಕೆಯಲ್ಲಿ ವಲಯ ಅಧ್ಯಕ್ಷೆ ಕನ್ನಿಕಾ ಹಾಗೂ ವಿವಿಧ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು. ನಿರ್ಗಮಿತ ಅಧ್ಯಕ್ಷ ಕರ್ಣಂಡ ಜಯ ಸ್ವಾಗತಿಸಿದರು, ಕಾರ್ಯದರ್ಶಿ ನರೇಂದ್ರ ಪಿ.ಟಿ. ವಂದಿಸಿದರು.