ಮಡಿಕೇರಿ, ಆ. 1: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆಯಲ್ಲಿ ಸಮಾಗಮ ಸಭೆ ನಡೆಯಿತು.

ನಗರದ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರು, ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಹಾಗೆಯೇ ಅರೆಭಾಷೆ ಸಮುದಾಯದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ನಿರ್ದೇಶಕರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಅಕಾಡೆಮಿ ಮೊದಲ ಸಭೆಯಲ್ಲಿ ಅಕಾಡೆಮಿ ಚಟುವಟಿಕೆ ಸಂಬAಧಿಸಿ ದಂತೆ ಕಳೆದ ಎರಡು ಅವಧಿಯಲ್ಲಿನ ಫೆಲೋಶಿಪ್‌ನ ಪುಸ್ತಕ ಹೊರತರಲು ಬಾಕಿ ಇದ್ದು, ಮೊದಲ ಸಭೆಯಲ್ಲಿಯೇ ಪುಸ್ತಕ ಹೊರ ತರಲು ನಿರ್ಧರಿಸಲಾಗಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ‘ಹಿಂಗಾರ’ ಪುಸ್ತಕವನ್ನು ಹೊರತರ ಲಾಗುತ್ತಿದ್ದು, ಕಳೆದ 18 ತಿಂಗಳಿAದ ಪುಸ್ತಕ ಹೊರತಂದಿಲ್ಲ. ಹಾಗಾಗಿ ‘ಹಿಂಗಾರ ಸಂಯುಕ್ತ ಸಂಚಿಕೆ’ ಹೊರತರಲು ನಿರ್ಧರಿಸಲಾಗಿದೆ. ಹಾಗೆಯೇ 2022-2023 ನೇ ಅವಧಿಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವನ್ನು ನೀಡಲು ಮೊದಲ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಅಕಾಡೆಮಿ ವತಿಯಿಂದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನವನ್ನು ಸುಳ್ಯದಲ್ಲಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಲೇಖನ, ಕವನ, ನಾಟಕ, ಸಾಕ್ಷö್ಯಚಿತ್ರ ಹೀಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಲು ಅಕಾಡೆಮಿ ನಿರ್ಧರಿಸಿದ್ದು, ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಹಾಗೂ ದಾಖಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದರು. ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಮಾತನಾಡಿ, ಅರೆಭಾಷೆಗೆ ಸಂಬAಧಿಸಿ ದಂತೆ ಐಎಸ್‌ಒ ಸ್ಥಾನಮಾನ ಪಡೆಯಲು ಮತ್ತಷ್ಟು ಶ್ರಮಿಸಬೇಕಿದೆ. ಅರೆಭಾಷೆ ಸಾಹಿತ್ಯ ಮತ್ತು ಸಂಶೋಧನೆ ಹಾಗೂ ಪ್ರಕಟಣೆಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.

ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯು ಭಾಷಾ ಅಕಾಡೆಮಿ ಯಾಗಿದ್ದು, ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ನಾಡಿನಾದ್ಯಂತ ಪಸರಿಸು ವಂತಾಗಬೇಕು. ‘ಹಿಂಗಾರ ತ್ರೆöÊಮಾಸಿಕ’ ಪತ್ರಿಕೆಯನ್ನು ಕಾಲ ಕಾಲಕ್ಕೆ ಹೊರತರಬೇಕು ಎಂದು ಹೇಳಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಅರೆಭಾಷೆ ಅಕಾಡೆಮಿ ಕಾರ್ಯ ಚಟುವಟಿಕೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟಗಳಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬರಲಾಗಿದೆ. ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಒಳ್ಳೆಯ ಹೆಸರು ಮಾಡುವಂತಾಗಬೇಕು ಎಂದು ಹೇಳಿದರು.

ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಕೊಡಗು ಜಿಲ್ಲೆಗೂ ಸಹ ಅಕಾಡೆಮಿ ಸ್ಥಾನ ಸಿಗಬೇಕು ಎಂದರು.

ಮೈಸೂರು ಗೌಡ ಸಮಾಜದ ಕೊಂಬಾರನ ಬಸಪ್ಪ ಮಾತನಾಡಿ, ಅರೆಭಾಷೆ ಮಾತನಾಡುವವರು, ಕೊಡಗು, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಇತರೆಡೆ ಇದ್ದು, ಎಲ್ಲೆಡೆ ಕಾರ್ಯಕ್ರಮ ಆಯೋಜಿಸು ವಂತಾಗಬೇಕು ಎಂದು ಸಲಹೆ ಮಾಡಿದರು. ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಅರೆಭಾಷೆಯು ಸಹ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗಳಿದ್ದು, ಆ ನಿಟ್ಟಿನಲ್ಲಿ ಕೊಡಗಿಗೆ ಸಂಬAಧಿಸಿದAತೆ ಸುದ್ದಿಜೊಂಪೆ ವಾಚಿಸಲಾಗುತ್ತಿದ್ದು, ಈ ಸಂಬAಧ ಪ್ರದೇಶವಾರು ಭಾಷೆ ವ್ಯತ್ಯಾಸ ವಿರುವುದರಿಂದ ತರಬೇತಿ ಶಿಬಿರ ಏರ್ಪಡಿಸುವಂತೆ ಸಲಹೆ ನೀಡಿದರು.

ಬಾರಿಯಂಡ ಜೋಯಪ್ಪ ಮಾತನಾಡಿ, ಕೊಡಗಿನಲ್ಲಿ ಸುದ್ದಿಜೊಂಪೆ ಓದುವಂತೆ ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿಯೂ ಸಹ ಸುದ್ದಿಜೊಂಪೆ ಬಿತ್ತರಿಸುವಂತಾಗಬೇಕು ಎಂದರು.

ಅಕಾಡೆಮಿ ಮಾಜಿ ಸದಸ್ಯ ಎ.ಟಿ. ಕುಸುಮಾಧರ ಮಾತನಾಡಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರವನ್ನು ಏರ್ಪಡಿಸುವಂತಾಗಬೇಕು. ಅಜ್ಜಿ ಕಥೆಗಳು, ಗಾದೆಗಳನ್ನು ಸಂಗ್ರಹಿಸಿ ಪುಸ್ತಕಗಳನ್ನು ಪ್ರಕಟಿಸುವಂತಾಗಬೇಕು. ಅರೆಭಾಷೆಯಲ್ಲಿ ಒಳ್ಳೆಯ ಹಾಡು, ಜಾನಪದ ಗೀತೆಗಳನ್ನು ದಾಖಲೀ ಕರಣ ಮಾಡಬೇಕು ಎಂದರು.

ಸೂದನ ಈರಪ್ಪ ಮಾತನಾಡಿ, ಬಂಟ್ವಾಳ, ಪುತ್ತೂರು, ವಿಟ್ಲ ಮತ್ತಿತರ ಕಡೆಯು ಸಹ ಅರೆಭಾಷಿಕರು ಇದ್ದು, ಕಾರ್ಯಕ್ರಮ ಆಯೋಜಿಸು ವಂತಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕÀ ಕುಮಾರ ಮಾತನಾಡಿದರು. ಪ್ರಮುಖರಾದ ತುಂತಜೆ ಗಣೇಶ್, ನವೀನ್ ಅಂಬೆಕಲ್ಲು, ಚಿಲ್ತಡ್ಕ ಪರಶುರಾಮ, ಸುರೇಶ್ ಅಮೈ, ಕೆ.ಟಿ. ವಿಶ್ವನಾಥ, ಎ.ಕೆ. ಹಿಮಕರ, ಸದಸ್ಯರಾದ ತೇಜಕುಮಾರ್ ಕುಡೆಕಲ್ ಹಾಗೂ ಪಿ.ಎಸ್. ಕಾರ್ಯಪ್ಪ ಇದ್ದರು. ಸಭೆಗೆ ಮುನ್ನ ನಿವೃತ್ತ ಸೇನಾಧಿಕಾರಿ ಬೈತಡ್ಕ ಬೆಳ್ಯಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಸದಸ್ಯರಾದ ಸಂದೀಪ್ ಪೂಳಕಂಡ್ರ, ಲೋಕೇಶ್ ಊರುಬೈಲು ಅವರು ಅರೆಭಾಷಿಕ ಸಂಘಟಕರನ್ನು ಗೌರವಿಸಿದರು. ಸದಸ್ಯರಾದ ಚಂದ್ರಶೇಖರ್ ಪೆರಾಲು ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚಂದ್ರಾವತಿ ಬಡ್ಡಡ್ಕ, ಲತಾ ಕುದುಪಜೆ ಅವರು ನಿರೂಪಿಸಿದರು, ಕಾವ್ಯಶ್ರೀ ಕಪಿಲ್ ಪ್ರಾರ್ಥಿಸಿದರು, ರಿಜಿಸ್ಟಾçರ್ ಚಿನ್ನಸ್ವಾಮಿ ವಂದಿಸಿದರು.