ಮಡಿಕೇರಿ, ಆ. 1 : 2023-24ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡAತೆ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರುಗಳಿಗೆ ತಾ. 2 ರಿಂದ 12 ರವರೆಗೆ ಮೈಸೂರು ವಿಭಾಗ ಮಟ್ಟದ ವಿಭಾಗದೊಳಗಿನ ಅಂತರ್ ಜಿಲ್ಲಾ ಕೋರಿಕೆ, ಪರಸ್ಪರ ವರ್ಗಾವಣೆಯ ಆನ್‌ಲೈನ್ ಕೌನ್ಸಿಲಿಂಗ್ (ಖಔUಓಆ ಖಔಃIಓ) ಮಾದರಿಯಲ್ಲಿ ಸ್ಥಳ ನಿಯುಕ್ತಿಗೊಳಿಸಬೇಕಿದೆ.
ಅದರಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಮೈಸೂರು ವಿಭಾಗದೊಳಗಿನ ಅಂತರ್ ಜಿಲ್ಲಾ ಕೋರಿಕೆ, ಪರಸ್ಪರ ವರ್ಗಾವಣೆಯ ಕೌನ್ಸಿಲಿಂಗ್ ಖಔUಓಆ ಖಔಃIಓ) ಮಾದರಿಯಲ್ಲಿ ತಾ. 2 ರಿಂದ 12 ರವರೆಗೆ ಬೆಳಿಗ್ಗೆ 9.30 ಗಂಟೆಯಿAದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಕಚೇರಿಯಲ್ಲಿ ನಡೆಯಲಿದೆ.
ವೇಳಾಪಟ್ಟಿ ಅನುಸಾರ ಸಂಬAಧಿಸಿದ ಶಿಕ್ಷಕರು ನಿಗದಿತ ದಿನಾಂಕದAದು ಕೌನ್ಸಿಲಿಂಗ್‌ಗೆ ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲಾತಿಗಳೊಂದಿಗೆ ತಪ್ಪದೇ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಂಗಧಾಮಪ್ಪ ತಿಳಿಸಿದ್ದಾರೆ.
ಕೋರಿಕೆ ವರ್ಗಾವಣೆ : ತಾ. 2 ರಂದು ಪ್ರಾಥಮಿಕ ಶಾಲಾ ವಿಭಾಗದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು. ಪರಸ್ಪರ ವರ್ಗಾವಣೆ: ತಾ. 3 ರಂದು ಸಹ ಶಿಕ್ಷಕರು.
ಕೋರಿಕೆ ವರ್ಗಾವಣೆ: ತಾ. 6 ರಂದು ಪ್ರೌಢಶಾಲಾ ವಿಭಾಗದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಸಹ ಶಿಕ್ಷಕರು, ತಾ. 7 ರಂದು ಸಹ ಶಿಕ್ಷಕರು, ತಾ. 8 ರಂದು ಸಹ ಶಿಕ್ಷಕರು. ಪರಸ್ಪರ ವರ್ಗಾವಣೆ: ತಾ. 12 ರಂದು ಸಹ ಶಿಕ್ಷಕರು ಹಾಜರಾಗಬೇಕು ಎಂದು ರಂಗಧಾಮಪ್ಪ ತಿಳಿಸಿದ್ದಾರೆ.