ಮಡಿಕೇರಿ, ಆ. ೧ : ಕ್ರೀಡಾ ವಿಭಾಗದಲ್ಲಿ ಅಧ್ಯಯನ ನಡೆಸಿದ ಮಹೇಶ್ ಪಿ.ಎಂ. (ಮಧು) ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.

‘ಎ ಕಂಪೇರಿಟಿವ್ ಸ್ಟಡಿ ಆನ್ ಸೆಲೆಕ್ಟೆಡ್ ಆ್ಯಂಥ್ರೋಪೊಮಟ್ರಿಕಲ್, ಮೋಟಾರ್ ಫಿಟ್‌ನೆಸ್ ಐಂಡ್ ಸೈಕಾಲಾಜಿಕಲ್ ವೇರಿಯೇಬಲ್ಸ್ ಆಫ್ ಫುಟ್‌ಬಾಲ್ ಪ್ಲೇರ‍್ಸ್ ಇನ್ ಮಲ್ನಾಡ್ ಐಂಡ್ ಕೋಸ್ಟಲ್ ಏರಿಯಾ ಇನ್ ಕರ್ನಾಟಕ’ ಎಂಬ ವಿಷಯದಡಿ ಡಾ. ಆರ್. ಮುನಿರೆಡ್ಡಿ ಅವರ ಮಾರ್ಗದರ್ಶನದಡಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಮರಗೋಡು ಗ್ರಾಮದ ಪಾಣತ್ತಲೆ ಮಂದಪ್ಪ ಹಾಗೂ ಭವಾನಿ ದಂಪತಿಯ ಪುತ್ರ.