ಪೊನ್ನAಪೇಟೆ, ಆ. ೨: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಳಿಸಿ, ಸರ್ಕಾರವು ೨೪.೭.೨೦೨೪ ರಂದು ಅಧಿಕೃತ ಆದೇಶ ಹೊರಡಿಸಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯ ಮಂತ್ರಿಗಳ ಕಾನೂನು ಪೊನ್ನಂಪೇಟೆ, ಆ. ೨: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಳಿಸಿ, ಸರ್ಕಾರವು ೨೪.೭.೨೦೨೪ ರಂದು ಅಧಿಕೃತ ಆದೇಶ ಹೊರಡಿಸಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣನವರ ಅವಿರತ ಪ್ರಯತ್ನದಿಂದ ಇದೀಗ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ಪಟ್ಟಣ ಪಂಚಾಯಿತಿ ಭಾಗ್ಯ ದೊರಕಿದೆ. ಪೊನ್ನಂಪೇಟೆ ತಾಲೂಕು ರಚನೆಗೊಂಡ ನಂತರ ತಾಲೂಕು ಕೇಂದ್ರ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆ ಗೊಳ್ಳುವುದು ನಿಯಮ. ಅದರಂತೆ ಶಾಸಕ ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ತುರ್ತಾಗಿ ಈ ಕಾರ್ಯ ಸರ್ಕಾರದಿಂದ ನಡೆದಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗಿಗೆ ಆಗಮಿಸುವ ದಿನದಂದೇ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಂಡಿರುವ ಸುದ್ದಿ ಈ ಭಾಗದ ನಾಗರಿಕರಿಗೆ ಸಂತಸ ತಂದಿದೆ.
ಪ.ಪA.ಗೆ ಸೇರ್ಪಡೆಗೊಳ್ಳುವ ಪ್ರದೇಶಗಳು
ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಒಟ್ಟು ವಿಸ್ತೀರ್ಣ ೧೧.೩೪ ಚ.ಕಿ.ಮೀ. ಆಗಿದ್ದು, ಅರ್ವತೊಕ್ಲು ಗ್ರಾಮಕ್ಕೆ ಸೇರಿದ ನೆಹರು ನಗರ, ಹಳ್ಳಿಗಟ್ಟು ಗ್ರಾಮಕ್ಕೆ ಸೇರಿದ
(ಮೊದಲ ಪುಟದಿಂದ) ಗಣಪತಿನಗರ, ಶಾಂತಿ ನಗರ, ಮೈತ್ರಿ ಲೇಔಟ್, ಎಂ. ಜಿ. ನಗರ, ನಿಸರ್ಗ ನಗರ, ಮತ್ತೂರು ಗ್ರಾಮಕ್ಕೆ ಸೇರಿದ ಜನತಾ ಕಾಲೋನಿ, ದತ್ತಾ ಕರುಂಬಯ್ಯ ಬಡಾವಣೆ, ತ್ಯಾಗರಾಜ ರಸ್ತೆ, ಶಿವ ಕಾಲೋನಿ, ದೇಚಮ್ಮ ಬಡಾವಣೆ, ಕಾಮತ್ ಬಡಾವಣೆ, ಕಾವೇರಿ ನಗರ, ಹುದೂರು ಗ್ರಾಮಕ್ಕೆ ಸೇರಿದ ಕೃಷ್ಣ ನಗರ, ಕಾಟ್ರಕೊಲ್ಲಿ, ಮುಗುಟಗೇರಿ ಗ್ರಾಮಕ್ಕೆ ಸೇರಿದ ಕಲ್ಲುಕೋರೆ, ತಣ್ಣಿಕೋಡ್, ಭಗವತಿನಗರ, ಪೊನ್ನಪ್ಪ ಲೇಔಟ್, ವಿಜಯನಗರ, ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ರಸ್ತೆ ಕಾಲೋನಿ, ಮಾಪಿಳ್ಳೆತೋಡು ಸೇತುವೆ, ಕಾವೇರಮ್ಮ ಬಡಾವಣೆ, ಇತರ ಬಡಾವಣೆಗಳನ್ನು ಒಳಗೊಂಡAತೆ ಮುಗುಟಗೇರಿ ಗ್ರಾಮ ಪೊನ್ನಂಪೇಟೆ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ.
ಪೊನ್ನAಪೇಟೆ ತಾಲೂಕು ರಚನೆಗೊಂಡ ನಂತರ ತಾಲೂಕು ಕೇಂದ್ರವನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು.
ಪೊನ್ನಂಪೇಟೆ ತಾಲೂಕು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೊನ್ನಂಪೇಟೆ ನಾಗರಿಕ ವೇದಿಕೆಯು ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಳ್ಳಲು ಬೇಕಾದ ಎಲ್ಲಾ ಕಡತಗಳನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಿದ್ದರು.
ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಬೇಡಿಕೆಯನ್ನು ಹಿಂದಿನ ಶಾಸಕ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ಸರ್ಕಾರದ ಮುಂದಿಡಲಾಗಿತ್ತು. ಆದರೆ ನಗರ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಸರ್ಕಾರದ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ದಿನಾಂಕ.೧೩.೦೯.೨೦೨೩ ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಿ, ಪುರಸಭೆಯಾಗಿ ಮಾರ್ಪಡಿಸಲು ಚಿಂತಿಸಲಾಗಿತ್ತು. ಹಾಗೂ ಮತ್ತೊಮ್ಮೆ ಸಮಗ್ರವಾಗಿ ಪರಿಶೀಲಿಸಿ, ಮಾಹಿತಿಯನ್ನು ಸಲ್ಲಿಸುವಂತೆ ಪಂಚಾಯಿತಿಗೆ ಪತ್ರ ಮುಖೇನ ಸೂಚಿಸಲಾಗಿತ್ತು. ನಂತರ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಶಾಸಕ ಪೊನ್ನಣ್ಣ ನವರ ಶಿಫಾರಸ್ಸಿನ ಮೇರೆಗೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಇದೀಗ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಗ್ರಾಮ ಪಂಚಾಯಿತಿಯ ಅವಧಿ ಮುಗಿಯುವವರೆಗೂ, ಪ್ರಸ್ತುತ ಇರುವ ಗ್ರಾಮ ಪಂಚಾಯಿತಿ ಸದಸ್ಯರೇ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಮುಂದುವರೆಯಲಿದ್ದು, ಮುಂದಿನ ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. -ಚನ್ನನಾಯಕ