ಮಡಿಕೇರಿ, ಆ. ೨: ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. ೫೦ರಷ್ಟು ಮಳೆ ಪ್ರಮಾಣ ಹೆಚ್ಚಾಗಿದ್ದು, ಪರಿಣಾಮ ಹಲವರು ಮನೆ ಕಳೆದುಕೊಂಡಿದ್ದಾರೆ. ಅವರಿಗೆ ರೂ. ೧.೨೦ ಲಕ್ಷ ಪರಿಹಾರದೊಂದಿಗೆ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ನೂತನ ಮನೆಯನ್ನು ನಿರ್ಮಾಣ ಮಾಡಿಕೊಡಲಾಗುವುದು. ಅದೇ ರೀತಿ ಜಿಲ್ಲೆಯ ಪುನರ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಕುಟ್ಟ ಸಮೀಪದ ಮಂಚಳ್ಳಿ ಭೂಕುಸಿತ ಪ್ರದೇಶ ಹಾಗೂ ಕೆದಮುಳ್ಳೂರು ಕಾಳಜಿ ಕೇಂದ್ರ, ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ರಾಜ್ಯದಲ್ಲಿ ವಾಡಿಕೆಗಿಂತ ಶೇ. ೩೦ರಷ್ಟು ಮಳೆ ಹೆಚ್ಚಾಗಿದೆ. ಕೊಡಗು ಜಿಲ್ಲೆಯಲ್ಲಿ ಶೇ ೫೦ ರಷ್ಟು ಹೆಚ್ಚಿದೆ. ಅದೃಷ್ಟವಶಾತ್ ಜೀವಹಾನಿ ಸಂಭವಿಸಿಲ್ಲ. ಮಳೆಯಿಂದ ಭೂಕುಸಿತ ಸಂಭವಿಸಿದ ಜಾಗದ ದುರಸ್ತಿ ಕಷ್ಟಸಾಧ್ಯವಾಗಿದೆ. ಶೀಘ್ರದಲ್ಲಿ ಈ ಕೆಲಸಗಳು ನಡೆಯಲಿವೆ. ೧೩ ಕಡೆಗಳಲ್ಲಿ ಭೂಕುಸಿತ, ೨೦ ಕಡೆಗಳಲ್ಲಿ ಮಣ್ಣು ಕುಸಿತವಾಗಿದೆ. ೬೭ ಮನೆಗಳು ಪೂರ್ಣ, ೧೭೬ ಮನೆಗಳು ಭಾಗಶಃ ಹಾನಿಯಾಗಿವೆ. ಪೂರ್ಣ ಹಾನಿಯಾದ ಮನೆಗಳಿಗೆ ರೂ. ೧.೨೦ ಲಕ್ಷ ಪರಿಹಾರದೊಂದಿಗೆ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ನೂತನ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ. ಜಿಲ್ಲಾಧಿಕಾರಿ ಮೂಲಕವೇ ಮನೆ ನಿರ್ಮಿಸಿಕೊಡಲಾಗುವುದು. ಈ ಹಿಂದಿನ ಸರಕಾರ ಮನೆಹಾನಿ ಪ್ರಕರಣಕ್ಕೆ ನೀಡಿದ ಅನುದಾನ ಪೂರ್ಣವಾಗಿ ಫಲಾನುಭವಿಗಳ ಕೈ ಸೇರಿಲ್ಲ ಎಂದ ಅವರು, ಭಾಗಶಃ ಮನೆಹಾನಿಗೆ ಎನ್.ಡಿ.ಆರ್.ಎಫ್. ಮೂಲಕ ೬.೫೦ ಸಾವಿರ ನೀಡಲಾಗುತ್ತದೆ. ನಮ್ಮ ಸರಕಾರ ಇದರೊಂದಿಗೆ ರೂ. ೪೪.೫೦ ಸಾವಿರ ಸೇರಿಸಿ ಒಟ್ಟು ರೂ. ೫೦ ಸಾವಿರ ಪರಿಹಾರವನ್ನು ನೀಡುತ್ತಿದೆ. ಈಗಾಗಲೇ ಡಿ.ಬಿ.ಟಿ. ಮೂಲಕ ಪರಿಹಾರವನ್ನು ಒದಗಿಸುವ ಕೆಲಸವೂ ಆಗಿದೆ. ಜಿಲ್ಲೆಯಲ್ಲಿ ೧೬ ಜಾನುವಾರುಗಳು ಮೃತಪಟ್ಟಿದ್ದು, ಈ ಪ್ರಕರಣಗಳಿಗೆ ರೂ. ೩೭ ಸಾವಿರದಂತೆ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
(ಮೊದಲ ಪುಟದಿಂದ) ಜಿಲ್ಲೆಯ ೧೪ ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಈ ಪೈಕಿ ೧೦ ಕೇಂದ್ರದಲ್ಲಿ ಜನರಿದ್ದು, ಉಳಿದ ೪ ಕೇಂದ್ರ ವ್ಯವಸ್ಥೆಗಳೊಂದಿಗೆ ಬಳಕೆಗೆ ಲಭ್ಯವಿದೆ. ೧೮೬ ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ತೋರ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿದ್ದೇನೆ. ಅಲ್ಲಿ ಎಲ್ಲಾ ವ್ಯವಸ್ಥೆ ಇರುವುದು ಗಮನಕ್ಕೆ ತಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಸಮೀಕ್ಷೆ ವರದಿ ನಂತರ ಬೆಳೆ ನಷ್ಟ ಪರಿಹಾರ ನಿಗದಿ
ಪೂರ್ಣ ಪ್ರಮಾಣದ ಸಮೀಕ್ಷೆ ವರದಿ ಬಂದ ಬಳಿಕ ಬೆಳೆ ನಷ್ಟ ಪರಿಹಾರವನ್ನು ನಿಗದಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ೨೮ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಕಾಫಿ ತೋಟ ಹಾನಿ ಕುರಿತು ಕಂದಾಯ ಇಲಾಖೆ ಮತ್ತು ಕಾಫಿ ಮಂಡಳಿ ಮೂಲಕ ಜಂಟಿ ಸಮೀಕ್ಷೆ ಕೈಗೊಳ್ಳಲಾಗುವುದು. ೨,೭೦೮ ವಿದ್ಯುತ್ ಕಂಬ ಹಾಳಾಗಿದ್ದು, ೧೫೦ ಕಂಬ ಮಾತ್ರ ಅಳವಡಿಕೆಗೆ ಬಾಕಿ ಇದೆ. ಇದಕ್ಕಾಗಿ ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದೆ. ೪೭ ಟ್ರಾನ್ಸ್ಫಾರ್ಮರ್ ಹಾಳಾಗಿದ್ದು, ಎಲ್ಲವನ್ನೂ ಸರಿಪಡಿಸಲಾಗಿದೆ. ಫಸಲು ನಷ್ಟ ಪ್ರಕರಣ ಹೆಚ್ಚಿದ್ದಲ್ಲಿ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆ ವರದಿ ಬಂದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರ ಮೊತ್ತ ನಿಗದಿಪಡಿಸಲಾಗುವುದು. ರಾಷ್ಟಿçÃಯ ಹೆದ್ದಾರಿಯಲ್ಲಿ ಭೂಕುಸಿತ ತಡೆಗೆ ಕೇಂದ್ರ ಸರಕಾರದೊಂದಿಗೂ ಸಮಾಲೋಚನೆ ನಡೆಸಲಾಗುವುದು. ಶಾಶ್ವತ ಯೋಜನೆ ಕೈಗೊಳ್ಳಲಾಗದ ಕಡೆಗಳಲ್ಲಿ ತಾತ್ಕಾಲಿಕ ಪರಿಹಾರ ರೂಪಿಸಲಾಗುವುದು. ಜಿಎಸ್‌ಐ ವರದಿಯನ್ನು ಅವಲೋಕಿಸಿ ಕ್ರಮದ ಕುರಿತು ಗಮನ ಹರಿಸಲಾಗುವುದು. ಸೂಕ್ಷö್ಮ ಪ್ರದೇಶಗಳ ನಿವಾಸಿಗಳ ಸಮಸ್ಯೆಗಳ ಬಗ್ಗೆ ಶಾಶ್ವತ ಪರಿಹಾರದ ಬಗ್ಗೆ ಪ್ರಯತ್ನ ಮಾಡಲಾಗುವುದು. ರಸ್ತೆ, ಸೇತುವೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೀಘ್ರದಲ್ಲಿ ಭಾಗ್ಯಲಕ್ಷಿö್ಮ ಹಣ ಸಂದಾಯ
ಕಳೆದೆರಡು ತಿಂಗಳಿAದ ಭಾಗ್ಯಲಕ್ಷಿö್ಮ ಹಣ ಫಲಾನುಭವಿಗಳಿಗೆ ಸಂದಾಯವಾಗದ ಕುರಿತು ಪ್ರಶ್ನಿಸಿದ ಸಂದರ್ಭ ಭಾಗ್ಯಲಕ್ಷಿö್ಮ ಹಣ ಸಂದಾಯಕ್ಕೆ ಬಾಕಿ ಇದ್ದು, ಶೀಘ್ರದಲ್ಲಿ ಪಾವತಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮಾಜಿ ಸಚಿವ ಎಂ.ಸಿ. ನಾಣಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹಾಜರಿದ್ದರು.