ಮಡಿಕೇರಿ, ಆ. ೧: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವರ್ಷಂಪ್ರತೀ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ.

ಸದರಿ ಸಾಲಿನಲ್ಲಿ ತಾ. ೬ ರಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣ, ಪೆನ್‌ಶನ್ ಲೇನ್, ಮಡಿಕೇರಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಶಾಲಾ ಕಾಲೇಜುಗಳ ಪಠ್ಯ ವಿಷಯಗಳಲ್ಲಿ “ಸಹಕಾರ” ವಿಷಯ ಅಳವಡಿಕೆ’ ‘Iಟಿಣಡಿoಜuಛಿಣioಟಿ oಜಿ subರಿeಛಿಣ oಟಿ ಅo-oಠಿeಡಿಚಿಣioಟಿ iಟಿ ಣhe sಥಿಟಟಚಿbus oಜಿ sಛಿhooಟs ಚಿಟಿಜ ಛಿoಟಟeges’ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಬೆಳಿಗ್ಗೆ ೧೦.೩೦ ಗಂಟೆಗೆ ಏರ್ಪಡಿಸಲಾಗಿದೆ.

ಅಲ್ಲದೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಮಾಹಿತಿ ತಂತ್ರಜ್ಞಾನ ಬಳಕೆ ಮತ್ತು ತಾಂತ್ರಿಕತೆ ಅಳವಡಿಕೆಯಿಂದ ಮಾತ್ರವೇ ಸಹಕಾರಿ ಚಳುವಳಿ ಬಲಾಡ್ಯಗೊಳ್ಳಬಲ್ಲದು’ ‘ಅo-oಠಿeಡಿಚಿಣive movemeಟಿಣ ತಿiಟಟ be sಣಡಿeಟಿgಣheಟಿeಜ oಟಿಟಥಿ ತಿheಟಿ iಟಿಜಿoಡಿmಚಿಣioಟಿ ಣeಛಿhಟಿoಟogಥಿ ಚಿಟಿಜ ಚಿಜoಠಿಣioಟಿ oಜಿ ಣeಛಿhಟಿoಟogಥಿ is ಚಿಛಿಛಿeಠಿಣeಜ’ ವಿಷಯದ ಕುರಿತು ಚರ್ಚಾ ಸ್ಪರ್ಧೆಯನ್ನು ಅದೇ ದಿನ ಬೆಳಿಗ್ಗೆ ೧೧ ಗಂಟೆಯಿAದ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಈ ಸಂಬAಧ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿರುತ್ತದೆ. ಪ್ರಬಂದ ಸ್ಪರ್ಧೆಗೆ ಒಂದು ಶಾಲೆಯಿಂದ ಒಬ್ಬ ವಿದ್ಯಾರ್ಥಿಯನ್ನು ಹಾಗೂ ಚರ್ಚಾ ಸ್ಪರ್ಧೆಗೆ ಒಂದು ಶಾಲೆಯಿಂದ ವಿಷಯದ ಪರವಾಗಿ ಒಬ್ಬರು ಮತ್ತು ವಿರುದ್ಧವಾಗಿ ಒಬ್ಬರನ್ನು ಆಯ್ಕೆ ಮಾಡಿ ಕಳುಹಿಸತಕ್ಕದ್ದು. ಹಾಜರಾಗುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಯಾಣ ದರ ಪಾವತಿಸಲಾಗುವುದು.