ಮಡಿಕೇರಿ, ಆ. ೨: ಮಡಿಕೇರಿ ಪ್ರವಾಸಿಗರ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ವಾರ್ಷಿಕ ಮಹಾಸಭೆ ಹೊಟೇಲ್ ಚಾಯ್ಸ್ ಸಭಾಂಗಣದಲ್ಲಿ ನಡೆಯಿತು. ಈ ಸಾಲಿನ ಅಧ್ಯಕ್ಷರಾಗಿ ಅವಿರೋಧವಾಗಿ ಕುಳಿಯಕಂಡ ಸಂಪತ್ ಆಯ್ಕೆಯಾಗಿದ್ದಾರೆ. ನಂತರ ಸಭೆಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಕಿಶೋರ್ ಕೊಟ್ಟಗೇರಿ ಮರಗೋಡು, ಗೌರವಾಧ್ಯಕ್ಷರಾಗಿ ಸಂತು ಕಾರ್ಯಪ್ಪ, ಕಾರ್ಯದರ್ಶಿಯಾಗಿ ನವೀನ್ ಕುಮಾರ್, ಖಜಾಂಚಿಯಾಗಿ ವೀರೇಂದ್ರ ಗೌಡ, ಸಹ ಕಾರ್ಯದರ್ಶಿಯಾಗಿ ಶಬೀರ್ ಶೇಕ್, ನೂತನ ಸಮಿತಿ ಸದಸ್ಯರುಗಳಾಗಿ ವಿನೋದ್ ಡಿ.ಆರ್., ಸ್ಟೀಫನ್ ಸಫಿ, ರಿಯಾಜ್ ಎಂ.ಯು., ನವೀನ್ ಬಿ.ಕೆ., ಶರತ್, ಬೆಳ್ಳಿಯಪ್ಪ, ಟಿ.ಕೆ. ಥಾಮಸ್, ಕುಟ್ಟಪ್ಪ ನಾಯಕಂಡ, ಸುರೇಶ್ ಬಿ.ಎಸ್., ರೃಫಕತ್ ಎಂ.ಎನ್. ನೇಮಕಗೊಂಡಿದ್ದಾರೆ.