ಮಡಿಕೇರ, ಆ. ೨: ಜಿಲ್ಲೆಯಲ್ಲಿ ಮುಂಗಾರಿನ ಪರಿಸ್ಥಿತಿ ಮುಂದುವರಿದಿದೆ. ಕಳೆದ ಹಲವು ದಿನಗಳಿಂದ ಜಿಲ್ಲೆ ಸತತವಾಗಿ ಮಳೆಗಾಲವನ್ನು ಎದುರಿಸುತ್ತಿದ್ದು, ಸುಮಾರು ಒಂದೂವರೆ ತಿಂಗಳಿನಿAದಲೂ ಬಿಸಿಲಿನ ವಾತಾವರಣವನ್ನು ಕಾಣದಂತಾಗಿದೆ. ಮೃಗಶಿರ, ಆರ್ದ್ರಾ, ಪುನರ್ವಸು, ಪುಷ್ಯ ಮಳೆ ನಕ್ಷತ್ರಗಳು ಇದೀಗ ಪೂರ್ಣಗೊಂಡಿವೆ. ಈ ಬಾರಿ ಪುನರ್ವಸು ಹಾಗೂ ಪುಷ್ಯ ಮಳೆಯ ಅಬ್ಬರಕ್ಕೆ ಇಡೀ ಜಿಲ್ಲೆ ತತ್ತರಿಸಿದ್ದು, ನೂರಾರು ಅನಾಹುತಗಳು ಸಂಭವಿಸಿದೆಯಲ್ಲದೆ, ಕಾಫಿ ಸೇರಿದಂತೆ ಕೃಷಿ ಫಸಲುಗಳು ವ್ಯಾಪಕವಾಗಿ ಹಾನಿಗೀಡಾಗುತ್ತಿವೆ.
ಇದೀಗ ತಾ. ೩ ರಿಂದ (ಇಂದಿನಿAದ) ಆಶ್ಲೇಷ ಮಳೆ ಪ್ರಾರಂಭವಾಗಲಿದೆ. ಜನತೆಯಲ್ಲಿ ಕಳೆದ ೨೦೧೮ರ ಇಸವಿಯ ಅನುಭವದ ಬಳಿಕ ಆಶ್ಲೇಷಾ ಮಳೆ ಎಂದರೆ ಒಂದು ರೀತಿಯಲ್ಲಿ ಆತಂಕದ ಭಾವನೆಯೇ ಹೆಚ್ಚಿದೆ. ಈಗಾಗಲೇ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಸದ್ಯಕ್ಕೆ ಮಳೆಯಿಂದ ಒಂದಷ್ಟು ವಿರಾಮ ಸಿಗುವಂತಾಗಲಿದೆ ಎಂಬದು ಬಹುತೇಕ ಜನರ ಆಶಾಭಾವನೆಯಾಗಿದೆ.
ಈ ತನಕದ ಮಳೆಯಿಂದಾಗಿ ಜಿಲ್ಲೆಯ ಎಲ್ಲೆಲ್ಲೂ ನೀರಿನ ಮಟ್ಟ ಹೆಚ್ಚಿದ್ದು, ಈ ಪರಿಸ್ಥಿತಿ ಯಥಾ ಸ್ಥಿತಿಯಲ್ಲೇ ಮುಂದುವರಿದಿದೆ. ಎರಡು ದಿನಗಳಿಂದ ಮಳೆಯ ತೀವ್ರತೆಯಲ್ಲಿ ಒಂದಷ್ಟು ಇಳಿಮುಖವಾಗಿದ್ದರೂ ಮೋಡ ಕವಿದ ವಾತಾವರಣವೇ ಮುಂದುವರಿದಿದ್ದು, ಆಗಾಗ್ಗೆ ಮಳೆಯೂ ಸುರಿಯುತ್ತಿರುವುದು ಜಿಲ್ಲೆಯ ಸದ್ಯದ ಪರಿಸ್ಥಿತಿಯಾಗಿದೆ.
ಶುಕ್ರವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೧.೪೩ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೨೬, ವೀರಾಜಪೇಟೆ ೧.೦೮, ಪೊನ್ನಂಪೇಟೆ ೦.೮೬, ಸೋಮವಾರಪೇಟೆ ೨.೦೭ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೯೧ ಇಂಚು ಮಳೆಯಾಗಿದೆ. ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ಸುಮಾರು ೧ ರಿಂದ ೨ ಇಂಚುಗಳಷ್ಟು ಮಳೆ ಸುರಿದಿದೆ.ಶನಿವಾರಸಂತೆ: ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯಾದ್ಯಂತ ಧಾರಾಕಾರ ಮಳೆಯಾಗುತ್ತಿರುವುದರಿಂದ ಭತ್ತದ ಗದ್ದೆಗಳು, ಕಾಫಿ ತೋಟಗಳು ಜಲಾವೃತವಾಗುತ್ತಿದ್ದು, ಕೃಷಿ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಮಳೆ, ಮೈನಡುಗಿಸುವ ಚಳಿಯ ಕಾರಣ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂಜರಿಯುವAತಾಗಿದೆ. ಮಳೆಗಾಗಿ ಹಂಬಲಿಸುತ್ತಿದ್ದ ಕೃಷಿಕರು “ಸಾಕಪ್ಪ ಈ ಮಳೆ... ಯಾವಾಗ ಮಳೆಗಾಲ ಮುಗಿಯುತ್ತೋ ಬಿಸಿಲಾಗುತ್ತೋ’’ ಎಂದು ಕಂಗಾಲಾಗುತ್ತಿದ್ದಾರೆ.
ಮಳೆಯ ರಭಸಕ್ಕೆ ರಸ್ತೆಗಳಲ್ಲಿ ಡಾಂಬರು ಕಿತ್ತುಹೋಗಿ ಹೊಂಡಗಳಾಗಿದ್ದು, ನೀರು ತುಂಬಿ ವಾಹನ ಚಾಲನೆಗೆ ಅಡಚಣೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಬಿದ್ದೆದ್ದು ಹೋಗುವ ದೃಶ್ಯ ಸಾಮಾನ್ಯವಾಗಿದೆ.
ಶನಿವಾರಸಂತೆಗೆ ಸಮೀಪದ ಕಾಜೂರು ಹೊಳೆ ತುಂಬಿ ಹರಿಯುತ್ತಿದ್ದು, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಂಬಳೂರು, ಊರುಗುತ್ತಿ, ಕ್ಯಾತೆ ಗ್ರಾಮಗಳ ಮೂಲಕ ಹರಿದು ಹೋಗಿ ಶಾಂತಪುರ ಗ್ರಾಮದಲ್ಲಿ ಹೇಮಾವತಿ ನದಿ ಸೇರುತ್ತದೆ. ಹೇಮಾವತಿ ಜಲಾಶಯದ ಹಿನ್ನೀರಿನ ಪರಿಣಾಮ ಶಾಂತಪುರ, ಕ್ಯಾತೆ, ಊರುಗುತ್ತಿ, ಬೆಂಬಳೂರು ಗ್ರಾಮಗಳ ಗದ್ದೆ-ತೋಟಗಳು ಜಲಾವೃತಗೊಂಡಿವೆ. ನಾಟಿ ಮಾಡಿದ ಗದ್ದೆಗಳು, ನಾಟಿ ಸಿದ್ಧತೆ ನಡೆಸಿದ್ದ ಹಾಗೂ ಸಸಿಮಡಿಗಳು ಬೆಳೆದು ನಿಂತಿದ್ದ ಗದ್ದೆಗಳೆಲ್ಲಾ ಜಲಾವೃತವಾಗಿ ಮರಳು ತುಂಬಿಕೊAಡಿದ್ದು ರೈತರು ಕಣ್ ಕಣ್ ಬಿಡುವಂತಾಗಿದೆ.
ಮಳೆ ಬಿಡುವು ನೀಡಿದಾಗ ನಾಟಿ ಕೆಲಸ ಮುಗಿಸಿಬಿಡಬೇಕು ಎಂದು ಸಿದ್ಧರಾಗುವ ರೈತರಿಗೆ ಕೂಲಿ ಕಾರ್ಮಿಕರ ಕೊರತೆ ಕಾಡುತ್ತಿದೆ. ‘ಮಳೆಯಲ್ಲಿ ಕೆಲಸ ಮಾಡಲೊಪ್ಪದ ಕಾರ್ಮಿಕರ ಮನವೊಲಿಸಿ ವಾಹನಗಳಲ್ಲಿ ಕರೆತಂದು ನಾಟಿ ಕೆಲಸ ಮಾಡಿಸಬೇಕಾಗಿದೆ. ಗಂಡಾಳಿಗೆ ರೂ. ೭೦೦ ಹಾಗೂ ಹೆಣ್ಣಾಳಿಗೆ ರೂ. ೫೦೦ ಕೂಲಿ ಕೊಡುವುದರ ಜತೆಗೆ ಮಧ್ಯಾಹ್ನ ಬಾಡೂಟ ಭೋಜನ, ಮದ್ಯದ ಸಮಾರಾಧನೆಯಾಗಬೇಕು. ಕೆಲಸ ಮುಗಿದ ಬಳಿಕ ಮತ್ತೆ ವಾಹನದಲ್ಲೆ ವಾಪಾಸ್ಸು ಕರೆದೊಯ್ದು ಮನೆ ಬಾಗಿಲಿಗೆ ಬಿಡಬೇಕು. ನಾಟಿ ಮಾಡಿ ಮುಗಿಸದೆ ವಿಧಿಯಿಲ್ಲ. ವರುಣ-ವಾಯುದೇವರ ಆರ್ಭಟಕ್ಕೆ, ಕಾರ್ಮಿಕರ ತಾಳಕ್ಕೆ ಕುಣಿಯಲೇಬೇಕಾಗಿದೆ’’ ಎಂದು ಕಾಜೂರು ಗ್ರಾಮದ ಚಂದ್ರಶೇಖರ್ ಮತ್ತಿತರ ರೈತರು ಅಸಹಾಯಕತೆ ವ್ಯಕ್ತಪಡಿಸಿದರು.
ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ನರಿಯಂದಡ ಗ್ರಾಮದ ತೋಟಂಬೈಲು ಅಪ್ಪಚ್ಚು ಅವರ ಮನೆಯ ಸಮೀಪದ ಬರೆ ಅಲ್ಪ ಕುಸಿದಿದ್ದು ಮುಂದಿನ ದಿನಗಳಲ್ಲಿ ಮತ್ತೆ ಈ ಬರೆ ಕುಸಿಯುವ ಆತಂಕ ಎದುರಾಗಿದೆ.
ಬರೆಯ ಮೇಲಿನ ಭಾಗ ಸಾರ್ವಜನಿಕ ರಸ್ತೆಯಾಗಿದ್ದು, ಸಾವಿರಾರು ವಾಹನ ರಸ್ತೆಯಲ್ಲಿ ಸಂಚರಿಸುತ್ತವೆ. ರಸ್ತೆಯ ಬರೆ ಜರಿದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಬರೆಗೆ ತಡೆಗೋಡೆ ನಿರ್ಮಿಸಿಕೊಡುವಂತೆ ೨೦೧೩ರಲ್ಲೇ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಸಂಬAಧಪಟ್ಟವರು ಹಾಗೂ ಲೋಕೋಪಯೋಗಿ ಇಲಾಖೆ ತಡೆಗೋಡೆ ನಿರ್ಮಿಸಿಲ್ಲ. ಕೂಡಲೇ ಸಂಬAಧ ಪಟ್ಟ ಇಲಾಖೆ ತಡೆಗೋಡೆ ನಿರ್ಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೃದ್ಧ ದಂಪತಿ ಆಗ್ರಹಿಸಿದ್ದಾರೆ.ಮಡಿಕೇರಿ: ತೀವ್ರ ಮಳೆ-ಗಾಳಿಯಿಂದ ಕಳೆದ ೩ ವಾರಗಳಿಂದ ಬಲ್ಲಮಾವಟಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಇಂದು ನೂತನ ಟ್ರಾನ್ಸ್ಫಾರ್ಮರ್ ಅಳವಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಲಾಯಿತು. ಟ್ರಾನ್ಸ್ಫಾರ್ಮರ್ ಸುತ್ತ ಇದ್ದ ಮರದ ಕೊಂಬೆಗಳನ್ನು ಕಡಿದು ಗ್ರಾಮಸ್ಥರ ಸಹಕಾರದಿಂದ ಟ್ರಾನ್ಸ್ಫಾರ್ಮರ್ ಅನ್ನು ಸೆಸ್ಕ್ ವತಿಯಿಂದ ಅಳವಡಿಸಲಾಯಿತು.ಸೋಮವಾರಪೇಟೆ: ಪುನರ್ವಸು, ಪುಷ್ಯ ಮಳೆಯ ಆರ್ಭಟಕ್ಕೆ ಎಲ್ಲೆಡೆ ಕೆರೆಕಟ್ಟೆಗಳು, ನದಿ ತೊರೆಗಳು, ಹೊಳೆಗಳು ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ಜಲದ ಬುಗ್ಗೆ ಏಳುತ್ತಿದೆ.
ಈ ಹಿಂದೆ ಬರಿದಾಗುವ ಹಂತದಲ್ಲಿದ್ದ ಆನೆಕೆರೆ ಹಾಗೂ ಯಡೂರು ದೇವರ ಕೆರೆಯನ್ನು ದಾನಿ ಹರಪಳ್ಳಿ ರವೀಂದ್ರ ಅವರು ಹೂಳೆತ್ತಿಸಿದ ನಂತರ ಕೆರೆಗಳಲ್ಲಿ ಬೇಸಿಗೆಯಲ್ಲೂ ನೀರಿನ ಸಂಗ್ರಹವಿದ್ದು, ಮಳೆಗಾಲದಲ್ಲಿ ತುಂಬುತ್ತಿವೆ. ಪ್ರಸಕ್ತ ವರ್ಷ ಪುನರ್ವಸು ಹಾಗೂ ಪುಷ್ಯ ಮಳೆಗಳು ನಿರೀಕ್ಷೆಗೂ ಮೀರಿ ಸುರಿದ ಹಿನ್ನೆಲೆ ವಾಡಿಕೆಗೂ ಮುನ್ನವೇ ಪಟ್ಟಣದ ಆನೆಕೆರೆ, ಯಡೂರು ದೇವರ ಕೆರೆ, ಚೌಡ್ಲು ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ.
ಈ ಮೂರೂ ಕೆರೆಗಳ ಏರಿಗಳು ರಸ್ತೆಗಳಾಗಿವೆ. ಯಡೂರು ಮತ್ತು ಆನೆಕೆರೆಯ ಏರಿಗಳು ರಾಜ್ಯ ಹೆದ್ದಾರಿಯಾಗಿದ್ದರೆ, ಚೌಡ್ಲು ಗ್ರಾಮದ ಚೌಡ್ಲಯ್ಯ-ಮೂಡ್ಲಯ್ಯ ದೇವಾಲಯದ ಬಳಿಯಿರುವ ಕೆರೆಯ ಏರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ಮೂರೂ ಕೆರೆಗಳು ತುಂಬಿದ್ದು, ರಸ್ತೆಯ ಮೇಲೆ ನೀರು ಹರಿಯುತ್ತಿರುವುದು ವಿಶೇಷವಾಗಿದೆ.
ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ನರಿಯಂದಡ ಗ್ರಾಮದ ತೋಟಂಬೈಲು ಅಪ್ಪಚ್ಚು ಅವರ ಮನೆಯ ಸಮೀಪದ ಬರೆ ಅಲ್ಪ ಕುಸಿದಿದ್ದು ಮುಂದಿನ ದಿನಗಳಲ್ಲಿ ಮತ್ತೆ ಈ ಬರೆ ಕುಸಿಯುವ ಆತಂಕ ಎದುರಾಗಿದೆ.
ಬರೆಯ ಮೇಲಿನ ಭಾಗ ಸಾರ್ವಜನಿಕ ರಸ್ತೆಯಾಗಿದ್ದು, ಸಾವಿರಾರು ವಾಹನ ರಸ್ತೆಯಲ್ಲಿ ಸಂಚರಿಸುತ್ತವೆ. ರಸ್ತೆಯ ಬರೆ ಜರಿದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಬರೆಗೆ ತಡೆಗೋಡೆ ನಿರ್ಮಿಸಿಕೊಡುವಂತೆ ೨೦೧೩ರಲ್ಲೇ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಸಂಬAಧಪಟ್ಟವರು ಹಾಗೂ ಲೋಕೋಪಯೋಗಿ ಇಲಾಖೆ ತಡೆಗೋಡೆ ನಿರ್ಮಿಸಿಲ್ಲ. ಕೂಡಲೇ ಸಂಬAಧ ಪಟ್ಟ ಇಲಾಖೆ ತಡೆಗೋಡೆ ನಿರ್ಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೃದ್ಧ ದಂಪತಿ ಆಗ್ರಹಿಸಿದ್ದಾರೆ.ಕಣಿವೆ : ಗುಮ್ಮನಕೊಲ್ಲಿ ಗ್ರಾಮದ ಹಾರಂಗಿ ರಸ್ತೆಯಲ್ಲಿ ಮತ್ತೊಂದು ಮಳೆ ಅವಘಡ ಸಂಭವಿಸಿದೆ.
ಸ್ಥಳೀಯ ನಿವಾಸಿ ರಾಜು ಎಂಬವರಿಗೆ ಸೇರಿದ ಮನೆಯ ಬಳಿ ರಸ್ತೆಯ ಬದಿಯಲ್ಲಿ ನಿರ್ಮಿಸಿದ್ದ ತಡೆಗೋಡೆ ಸಹಿತ ಬರೆ ಮಳೆಯಿಂದಾಗಿ ಕುಸಿದಿದೆ. ಇದರಿಂದಾಗಿ ರಸ್ತೆಯ ಬದಿಯಲ್ಲಿ ನಿಂತಿದ್ದ ಆಟೋ ಜಖಂಗೊAಡು ಹಾನಿ ಉಂಟಾಗಿದೆ.
ಸಿದ್ದಾಪುರ: ಗಾಳಿ ಮಳೆಗೆ ಸಿಲುಕಿ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ತ್ಯಾಗತ್ತೂರು ಗ್ರಾಮದ ನಿವಾಸಿ ಮಲ್ಲಿಗೆ ಎಂಬವರ ಮನೆಯ ಗೋಡೆ ಕುಸಿದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಣಿವೆ : ಪುಷ್ಯ ಮಳೆ ಶುಕ್ರವಾರ ಕುಶಾಲನಗರ ವ್ಯಾಪ್ತಿಯಲ್ಲಿ ಅಬ್ಬರಿಸಿದ ಪರಿಣಾಮ ಮುಳ್ಳುಸೋಗೆಯ ಚೌಡೇಶ್ವರಿ ಬಡಾವಣೆಯಲ್ಲಿ ರಸ್ತೆ ಕಾಣದ ರೀತಿಯಲ್ಲಿ ರಸ್ತೆಯ ಮೇಲೆ ಮಳೆಯ ನೀರು ಹರಿಯಿತು.
ಕೂಡಿಗೆ : ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಲಕ್ಷö್ಮಮ್ಮನವರ ಮನೆ ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದ ಸರೋಜ, ಎಂಬವರಿಗೆ ಸೇರಿದ ಮನೆ ಮಳೆ, ಗಾಳಿಯಿಂದ ಬಿದ್ದಿದೆ.
ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಸಂತೋಷ್, ಕೂಡಿಗೆ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.