*ಗೋಣಿಕೊಪ್ಪ, ಆ. 1: ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಫ್ ಕೊಡಗು ಸಂಸ್ಥೆ ವತಿಯಿಂದ ಅಕ್ಟೋಬರ್ 19 ಮತ್ತು 20 ರಂದು ಮೈಸೂರು ವಲಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ಶಿಪ್ ಅನ್ನು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಸೋಷಿಯೇಷನ್ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್ ತಿಳಿಸಿದ್ದಾರೆ.
ಮೈಸೂರು, ಹಾಸನ, ಮಂಗಳೂರು, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 25ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಹಿಳೆ ಮತ್ತು ಪುರುಷರಿಗೆ ಅಥ್ಲೆಟಿಕ್ಸ್ ನಡೆಯಲಿದೆ. ಓಟದಲ್ಲಿ 100 ಮೀ, 200 ಮೀ, 400 ಮೀ, 800 ಮೀ, 1500 ಮೀ. ಮತ್ತು 5000 ಮೀ. ಓಟ ನಡೆಯಲಿದೆ. ವೇಗ ನಡಿಗೆಯಲ್ಲಿ ಮಹಿಳೆಯರಿಗೆ 3000 ಮೀ, ಪುರುಷರಿಗೆ 5000 ಮೀ. ನಡಿಗೆ ಇರಲಿದೆ. ಉದ್ದ ಜಿಗಿತ, ಟ್ರಿಪಲ್ ಜಿಗಿತ, ಭಾರದ ಗುಂಡು ಎಸೆತ, ತಟ್ಟೆ ಎಸೆತ, ಜಾವ್ಲಿನ್ ಎಸೆತ, 4x100 ಮೀ., ರಿಲೇ ಇರಲಿದೆ.
ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಫ್ ಕೊಡಗು ಸಂಸ್ಥೆ 2016ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಆರಂಭದಲ್ಲಿ ಕೇವಲ 7 ಸದಸ್ಯರನ್ನು ಹೊಂದಿತ್ತು. ನಂತರದ ವರ್ಷಗಳಲ್ಲಿ ಸದಸ್ಯರ ಸಂಖ್ಯೆ 75ಕ್ಕೆ ಏರಿಕೆ ಕಂಡಿದೆ. ವರ್ಷಂಪ್ರತಿ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಅಥ್ಲೆಟಿಕ್ನಲ್ಲಿ ಜಿಲ್ಲೆಯ ಹಿರಿಯ ಓಟಗಾರರು ಪಾಲ್ಗೊಳ್ಳುತ್ತಾರೆ. 15ಕ್ಕೂ ಹೆಚ್ಚು ಸದಸ್ಯರುಗಳು ಅಂತರರಾಷ್ಟಿçÃಯ ಮಟ್ಟದ ಅಥ್ಲೆಟಿಕ್ಸ್ನಲ್ಲ್ಲಿ ಭಾಗವಹಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಪೆಮ್ಮಂಡ ಎಂ. ಅಪ್ಪಯ್ಯ, ಖಜಾಂಚಿ ಮೂಕಳೇರ ಮೀರಾ ಅಶೋಕ್, ಹಿರಿಯ ಸಲಹೆಗಾರ ಕಂಬೀರAಡ ಕಿಟ್ಟು ಕಾಳಪ್ಪ, ನಿರ್ದೇಶಕಿ ಕಂಬೀರAಡ ರಾಖಿ ಪೂವಣ್ಣ ಇದ್ದರು.