ಪ್ಯಾರಿಸ್, ಆ. ೨: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಪುರುಷರ ಸಿಂಗಲ್ಸ್ ಬ್ಯಾಡ್ ಮಿಂಟನ್ ಕ್ರೀಡಾಕೂಟದಲ್ಲಿ ಭಾರತದ ಲಕ್ಷö್ಯ ಸೆನ್ ಅವರು ಸೆಮಿಫೈನಲ್ಸ್ ಹಂತ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಒಲಂಪಿಕ್ಸ್ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್ನಲ್ಲಿ ಭಾರತವು ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದು, ತಮ್ಮ ಮೊದಲ ಒಲಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ೨೨ ವರ್ಷದ ಲಕ್ಷö್ಯ ಈ ಸಾಧನೆ ಗೈದಿದ್ದಾರೆ. ಇಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ಟೈಪೇ ನ ಚೌ ಟಿಯೆನ್ ಚೆನ್ ಅವರ ವಿರುದ್ಧ ಮೊದಲ ಸೆಟ್‌ನಲ್ಲಿ ೧೯-೨೧ ಅಂಕಗಳ ಮೂಲಕ ಸೋತರೂ ಮತ್ತೆರಡು ಸೆಟ್‌ಗಳಲ್ಲಿ ೨೧-೧೫, ೨೧-೧೨ ಅಂಕಗಳೊAದಿಗೆ ಜಯಿಸಲು ಸಫಲರಾದರು. ಸೆಮಿಫೈನಲ್ ತಾ.೪ ರಂದು ನಡೆಯಲಿದೆ.