ವೀರಾಜಪೇಟೆ, ಆ. ೩: ವಿದ್ಯುತ್ ಪ್ರಹರಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ದೇವಾಂಗ ಬೀದಿಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಕೆರೆ ರಾಂಪುರ ಹರದನಹಳ್ಳಿ ಗ್ರಾಮದ ನಿವಾಸಿ ವೀರಾಜಪೇಟೆ ನಗರದ ದೇವಾಂಗಬೀದಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕೂಲಿ ಕಾರ್ಮಿಕ ಹೆಚ್.ಸಿ. ಸಿದ್ದೇಗೌಡ (೫೬) ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ವ್ಯಕ್ತಿ.

ಸಿದ್ದೇಗೌಡ ಮನೆಯ ಬಿಟ್ಟದಲ್ಲಿ ಹಾದುಹೊಗಿದ್ದ ವಿದ್ಯುತ್ ತಂತಿಯನ್ನು ಅರಿವಿಲ್ಲದೆ ಸ್ಪರ್ಶಿಸಿದ್ದಾರೆ. ಬಳಿಕ ಬಿದ್ದು ಒದ್ದಾಡುತಿದ್ದ ಅವರನ್ನು ಗಮನಿಸಿದ ಅವರ ಮಗ ಮಹೇಶ್ ತಂದೆಯನ್ನು ರಕ್ಷಣೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್ ಮಗನಿಗೂ ಪಸರಿದೆ. ಕ್ಷಣ ಮಾತ್ರದಲ್ಲಿ ಮಹೇಶ್ ಮರದ ಬಡಿಗೆಯೊಂದರಿAದ ವಿದ್ಯುತ್ ತಂತಿಯನ್ನು ತುಂಡರಿಸಿದ್ದಾನೆ. ಬಳಿಕ ಸಿದ್ದೇಗೌಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.