ಕೂಡಿಗೆ, ಆ. ೩: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿAದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಶಾಲನಗರ ತಾಲೂಕು ವ್ಯಾಪ್ತಿಯ ೧೩೯ ಕೆರಗಳು ಬಹುತೇಕ ಭರ್ತಿಯಾಗಿ ಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಬೇಸಾಯಕ್ಕೆ ಅನುಕೂಲಕರವಾಗಿವೆ.
ಕಳೆದ ಮೂರು ತಿಂಗಳ ಹಿಂದಿಯಷ್ಟೆ ಸುಡು ಬಿಸಿಲಿನ ತಾಪಮಾನಕ್ಕೆ ಕಾವೇರಿ ನದಿಯು ಸಹ ಬತ್ತಿಹೋಗಿತು. ಇದರ ಜೊತೆಯಲ್ಲಿ ತಾಲೂಕಿನ ನೂರಾರು ಕೆರೆಗಳು ಸಹ ಬತ್ತಿದ ಹಿನ್ನೆಲೆಯಲ್ಲಿ ಆಯಾ ವ್ಯಾಪ್ತಿಯ ರೈತರು ಕೆರೆ ಮಣ್ಣನ್ನು ತೆಗೆದು ತಮ್ಮ ಜಮೀನಿಗೆ ತೆಗೆದುಕೊಂಡು ಹೋಗುವುದರ ಜೊತೆಯಲ್ಲಿ ಜಮೀನಿನಲ್ಲಿ ಹಾಕಿ ಉಳುಮೆ ಮಾಡಿ ಬೇಸಾಯ ಮಾಡಲು ಆರಂಭಿಸಿದ್ದರು.
ಅನೇಕ ವರ್ಷಗಳಿಂದಲೂ ಕೆಲ ಗ್ರಾಮಗಳಲ್ಲಿ ಕೆರೆಯ ನೀರು ರೈತರ ಉಪ ಬೆಳೆಗಳಿಗೆ ಆಶಾದಾಯಕವಾಗುವುದರ ಜೊತೆಯಲ್ಲಿ ಬೇಸಿಗೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಸೇರಿದಂತೆ ಸಣ್ಣ ಪ್ರಮಾಣದಲ್ಲಿ ಬೇಸಾಯ ಮಾಡಲು ಸಹಕಾರಿಯಾಗಿತ್ತು. ಈ ವರ್ಷದ ಪ್ರಾರಂಭದಲ್ಲಿ ತಾಲೂಕಿನ ಎಲ್ಲಾ ಕೆರೆಗಳು ಸಂಪೂರ್ಣವಾಗಿ ಸುಡು ಬಿಸಿಲಿನ ತಾಪದಿಂದ ತೀರಾ ಬತ್ತಿಹೋದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಸಹ ಕುಡಿಯುವ ನೀರಿಗಾಗಿ ಹಾಹಾಕಾರಪಡುವಂತಹ ಪ್ರಸಂಗ ಎದುರಾಗಿತ್ತು. ಆದರೆ ಕಳೆದ ಒಂದು ತಿಂಗಳುಗಳಿAದ ಬೀಳುತ್ತಿರುವ ಮಳೆಯಿಂದಾಗಿ ಬಹುತೇಕ ತಾಲೂಕು ವ್ಯಾಪ್ತಿಯ ಕೆರೆಗಳು ಭರ್ತಿಯಾಗಿ ಕೆರೆಯ ನೀರನ್ನು ಅವಲಂಬಿಸಿದ ರೈತರು ಭತ್ತದ ಬೇಸಾಯ ಮಾಡಲು ಸಿದ್ದರಾಗಿ, ಕೃಷಿ ಚಟುವಟಿಕೆಯನ್ನು ಆರಂಭ ಮಾಡಿದ್ದಾರೆ.
ಕುಶಾಲನಗರ ತಾಲೂಕಿನ ಕುಶಾಲನಗರ ಹೋಬಳಿಯಲ್ಲಿ ೭೮ ಕೆರೆಗಳು ಮತ್ತು ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ೬೧ ಕೆರೆಗಳಿದ್ದು, ಅವುಗಳಿಂದ ಕೃಷಿ ಚಟುವಟಿಕೆ ಮತ್ತು ನೀರು ಸರಬರಾಜು ವ್ಯವಸ್ಥೆಗೆ ಬಹು ಉಪಯುಕ್ತವಾಗುತ್ತಿವೆ.
ಮಳೆಯಿಂದಾಗಿ ಕೆರೆಗಳು ಬಹುತೇಕವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಆಯಾ ಗ್ರಾಮಗಳ ವ್ಯಾಪ್ತಿಯ ಅಂತರ್ಜಲ ಹೆಚ್ಚಾಗುತ್ತಿರುವುದರಿಂದಾಗಿ ಕೊಳವೆ ಬಾವಿಗಳಿಂದ ನೀರು ಬರುವಿಕೆಯು ಹೆಚ್ಚಾಗಿ ನೀರಿನ ಬಳಕೆಗೆ ಅನುಕೂಲವಾಗುತ್ತಿದೆ. ಅಲ್ಲದೆ ಅನೇಕ ಗ್ರಾಮಗಳಲ್ಲಿ ಊರಿನ ಕೆರೆಯು ಗ್ರಾಮದ ಮೇಲ್ ಪ್ರದೇಶದ ಮೂರು- ನಾಲ್ಕು ಕಿಲೋಮೀಟರ್ ದೂರದಲ್ಲಿದ್ದು, ಆ ಕೆರೆಯು ಭರ್ತಿಯಾದ ಹಿನ್ನೆಲೆಯಲ್ಲಿ ಕೆಳ ಪ್ರದೇಶದ ಗ್ರಾಮಗಳ ಕೊಳವೆ ಬಾವಿಯ ಅಂತರ್ಜಲವು ಸಹ ಹೆಚ್ಚಾಗುತ್ತಿರುವುದರಿಂದಾಗಿ ಮನೆಯ ಬಳಕೆಗೂ, ಗ್ರಾಮ ಪಂಚಾಯಿತಿಗಳಿAದ ಕೊರೆಸಿರುವ ಕೊಳವೆ ಬಾವಿಯಿಂದ ಕುಡಿಯುವ ನೀರು ಸರಬರಾಜಿಗೆ ಅನುಕೂಲವಾಗಿದೆ.
ಸರಕಾರದ ಹೊಸ ಹೊಸ ಯೋಜನೆಗಳ ಅಡಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಏತ ನೀರಾವರಿ ಯೋಜನೆ ಮತ್ತು ಇತರೆ ಯೋಜನೆಗಳ ಅಡಿಯಲ್ಲಿ ಕೆರೆಗಳಿಗೆ ಬೇಸಿಗೆ ಸಂದರ್ಭದಲ್ಲಿ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗುವ ಇಲಾಖೆ, ಇದರ ಬದಲು ಸಣ್ಣ ನೀರಾವರಿ ಇಲಾಖೆಯ ಮುಖೇನ ಕೆರೆಗಳ ಅಭಿವೃದ್ಧಿಗೆ ನಿಯಮಾನುಸಾರ ಕ್ರಿಯಾ ಯೋಜನೆಯನ್ನು ಹಮ್ಮಿಕೊಂಡು ಗ್ರಾಮೀಣ ಕುಡಿಯುವ ನೀರಿನ ಸರಬರಾಜಿನ ವ್ಯವಸ್ಥೆಗೆ ಮುಂದಾಗಬೇಕೆAದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಯಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಅನೇಕ ಕೆರೆಗಳು ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಬರುವುದರಿಂದ ಮತ್ತು ಹೆಚ್ಚು ಅನುದಾನ ಅವಶ್ಯಕತೆಗಳು ಇರುವುದರಿಂದ ನೀರಾವರಿ ಇಲಾಖೆಯ ಅಧಿಕಾರಿಗಳು ಸಹ ಕೆರೆಯ ಅಭಿವೃದ್ಧಿಗೆ ಕೈ ಜೊಡಿಸಬೇಕು.
ಕೆ.ಕೆ. ನಾಗರಾಜಶೆಟ್ಟಿ