ಸೋಮವಾರಪೇಟೆ, ಆ. ೩: ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಆರ್ಗನೈಸೇಷನ್ನ ಸೋಮವಾರಪೇಟೆ ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ವಸಂತ್ ಆಚಾರ್ಯ ಅವರು ಆಯ್ಕೆಯಾಗಿದ್ದಾರೆ.
ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ, ಸಂಘದ ಜಿಲ್ಲಾಧ್ಯಕ್ಷ ಎಂ.ಜೆ. ವಿನೋದ್ ಅವರ ನೇತೃತ್ವದಲ್ಲಿ ನಡೆದ ೩ನೇ ವರ್ಷದ ರೂಪೀಕರಣ ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಸಂಘಟನೆಯ ಕಾರ್ಯದರ್ಶಿಯಾಗಿ ನಿಕಟಪೂರ್ವ ಅಧ್ಯಕ್ಷ ಬಿ.ವಿ. ರವಿ, ಗೌರವಾಧ್ಯಕ್ಷರಾಗಿ ಕೃಷ್ಣಮಣಿ, ಉಪಾಧ್ಯಕ್ಷರಾಗಿ ರಾಘವೇಂದ್ರ ಕರ್ಕಳ್ಳಿ, ಸಹ ಕಾರ್ಯದರ್ಶಿಯಾಗಿ ಭರತ್ ಮಾದಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಮದನ್ ಕೃಷ್ಣ, ಖಜಾಂಚಿಯಾಗಿ ಕೆ.ಎನ್. ದೀಪಕ್, ಸಲಹೆಗಾರರಾಗಿ ಪ್ರಸನ್ನ ಅವರುಗಳನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಪರಶುರಾಮ, ಕಾರ್ಯದರ್ಶಿ ಕಿರಣ್ ಅಮ್ಮತ್ತಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ತೀರ್ಥಪ್ರಸಾದ, ಜಿಲ್ಲಾ ಖಜಾಂಚಿ ಲೋಕೇಶ್ ಉಪಸ್ಥಿತರಿದ್ದರು.