ಸಿದ್ದಾಪುರ, ಆ. ೩ : ನೆಲ್ಯಹುದಿಕೇರಿಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು ಹಾಗೂ ಸಾರ್ವಜನಿಕರ ಅನುಕೂಲತೆಗೆ ಎಟಿಎಂ ಯಂತ್ರ ಅಳವಡಿಸಬೇಕೆಂದು ಒತ್ತಾಯಿಸಿ ನೆಲ್ಯಹುದಿಕೇರಿ ಗ್ರಾಮಸ್ಥರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನೆಲ್ಯಹುದಿಕೇರಿ ಯೂನಿಯನ್ ಬ್ಯಾಂಕ್ ಎದುರು ಜಮಾಯಿಸಿದ ಗ್ರಾಮಸ್ಥರು ದಿನದ ೨೪ ತಾಸು ಬ್ಯಾಂಕ್ ಎದುರು ಜಮಾಯಿಸಿದ ಗ್ರಾಮಸ್ಥರು ದಿನದ ೨೪ ತಾಸು ಎಟಿಎಂ ಯಂತ್ರವು ಸಾರ್ವಜನಿಕರ ಉಪಯೋಗಕ್ಕೆ ದೊರಕಬೇಕು ಹಾಗೂ ಬ್ಯಾಂಕಿನಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕೆಂಬ ನಾಮಫಲಕವನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಮನವಿ ಪತ್ರವನ್ನು ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಲ್ಲಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಪಿ.ಆರ್. ಭರತ್, ಎಂ.ಎ. ಅಜೀಜ್, ಮಣಿ, ಅಯ್ಯೂಬ್, ಉದಯ, ಅಜೀಜ್, ಸಫಿಯ, ಸೆಲ್ವಕುಮಾರ ಸೇರಿದಂತೆ ಇನ್ನಿತರರು ಹಾಜರಿದ್ದರು.