ಕೋವರ್‌ಕೊಲ್ಲಿ ಇಂದ್ರೇಶ್ - ‘‘ಚಕ್ರವರ್ತಿ’’
ಬೆಂಗಳೂರು, ಆ. ೩: ಮಹತ್ವದ ತೀರ್ಪೊಂದರಲ್ಲಿ ಕರ್ನಾಟಕ ಭೂಕಂದಾಯ (ಮೂರನೇ ತಿದ್ದುಪಡಿ) ಕಾಯ್ದೆ ೨೦೧೧ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿರುವ ಕರ್ನಾಟಕದ ಹೈಕೋರ್ಟ್, ಕೊಡವ ಕುಟುಂಬಗಳ ಹಿತದೃಷ್ಟಿಯಿಂದ ಈ ತಿದ್ದುಪಡಿ ಸಮರ್ಪಕವಾಗಿದೆ ಎಂದು ದೃಢಪಡಿಸಿದೆ. ಈ ತಿದ್ದುಪಡಿಯು ಕೊಡವ ಸಂಸ್ಕೃತಿ, ಸಂಪ್ರದಾಯಗಳನ್ನು ಅಡ್ಡಿಪಡಿಸುವ ಬದಲು ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಯ ಮೇಲಿನ ಮಾಲೀಕತ್ವದ ಹಕ್ಕುಗಳನ್ನು ಹೆಚ್ಚಿಸುತ್ತದೆ ಎಂದು ನ್ಯಾಯಾಲಯದ ತೀರ್ಪು ಸ್ಪಷ್ಟಪಡಿಸಿದೆ.
ಜುಲೈ ೨೫ ರಂದು ತೀರ್ಪು ನೀಡಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, "ತಿದ್ದುಪಡಿಯು ಎಲ್ಲಾ ರೀತಿಯ ಜಮೀನು ಹೊಂದಿರುವವರು ಸೇರಿದಂತೆ ಕೊಡವ ಕುಟುಂಬಗಳಿಗೆ ಭೂಮಿಯ ಸಂಪೂರ್ಣ ಮಾಲೀಕತ್ವವನ್ನು ನೀಡುತ್ತದೆ, ಆದರೆ ಈ ಹಿಂದೆ ಭೂಮಿಯ ಹಕ್ಕು ಸರ್ಕಾರಕ್ಕೂ ಸೇರಿದ್ದು ಎಂದು ಪ್ರತಿಪಾದಿಸಲಾಗಿತ್ತು. ಬಳಿಕದ ತಿದ್ದುಪಡಿಯು ಕೊಡವ ಸಂಪ್ರದಾಯಗಳಿಗೆ ವಿರುದ್ಧವಾಗಿರುವ ಬದಲಿಗೆ ಪೂರಕವಾಗಿದೆ ಎಂದು ನ್ಯಾಯಮೂರ್ತಿ ಒತ್ತಿ ಹೇಳಿದರು.
೧೯೬೪ರ ಕರ್ನಾಟಕ ಭೂಕಂದಾಯ (ಕೆಎಲ್‌ಆರ್) ಕಾಯ್ದೆಯ ಸೆಕ್ಷನ್ ೨ ಮತ್ತು ೮೦ರ ತಿದ್ದುಪಡಿಯನ್ನು ಪ್ರಶ್ನಿಸಿ ಬ್ರಿಗೇಡಿಯರ್ ಮಾಳೇಟಿರ ಎ. ದೇವಯ್ಯ (ನಿವೃತ್ತ) ಮತ್ತು ಇತರ ೪೨ ಕೊಡವರು ವಕೀಲರಾದ ಕಾಳೇಂಗಡ ಸರೋಜಿನಿ ಮುತ್ತಣ್ಣ ಅವರ ಮೂಲಕ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಕೂಲಂಕಶವಾಗಿ ಪರಿಶೀಲಿಸಿತು. ಪ್ರತಿವಾದಿಗಳಾಗಿ ರಾಜ್ಯ ಸರಕಾರದ ಕಂದಾಯ ಕಾರ್ಯದರ್ಶಿ, ಸಂಸದೀಯ ಮತ್ತು ಶಾಸಕಾಂಗ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾಧಿಕಾರಿ ಯವರನ್ನು ಪರಿಗಣಿಸಲಾಗಿತ್ತು. ಸರಕಾರದ ಪರವಾಗಿ ಸರಕಾರದ ಅಡಿಷನಲ್ ಎಡ್ವೋಕೇಟ್ ಜನರಲ್ ವಿಕ್ರಂ ಹುಲಿಗೋಳ್ ಅವರು ವಾದಿಸಿದರು.
ಮೊಟಕುಗೊಳಿಸಿಲ್ಲ
ಸರಕಾರದ ತಿದ್ದುಪಡಿ ಕೊಡಗಿನ ಜಮ್ಮಾಭೂಮಿಯ ಹಕ್ಕನ್ನು ಎತ್ತಿ ಹಿಡಿದಿದೆಯೇ ಹೊರತು ಹಕ್ಕನ್ನು ಮೊಟಕುಗೊಳಿಸಿಲ್ಲ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಯೊಂದಿಗೆ ರಿಟ್ ಅರ್ಜಿದಾರರ ಅರ್ಜಿಯನ್ನು ನ್ಯಾಯಾಲಯದ ತೀರ್ಪು ವಜಾಗೊಳಿಸಿದೆ. ಜಮ್ಮಾ ಬಾಣೆ ಜಮೀನು ಸೇರಿದಂತೆ ಭೂದಾಖಲೆಗಳಲ್ಲಿ
(ಮೊದಲ ಪುಟದಿಂದ) ಕೊಡವ ಕುಟುಂಬಗಳ ಎಲ್ಲ ಕುಟುಂಬದ ಸದಸ್ಯರ ಹೆಸರನ್ನು ಭೂ ಹಿಡುವಳಿದಾರರೆಂದು ನಮೂದಿಸುವ ಕುರಿತು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತರಲಾದ ತಿದ್ದುಪಡಿಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಅವರ ನಡುವೆ ವಿಭಜನೆಯನ್ನು ಮಾಡದೆಯೇ ಹೆಸರು ಸೇರ್ಪಡೆ ಮಾಡಬಹುದು ಅಥವಾ ಪ್ರತಿಯೊಬ್ಬ ಕುಟುಂಬದ ಸದಸ್ಯರ ಪಾಲಿಗೆ ಬರುವ ಪ್ರದೇಶಕ್ಕೆ ಸಂಬAಧಿಸಿದAತೆ ೧೧-ಇ ಸ್ಕೆಚ್ ಅನ್ನು ಪಡೆಯಬಹುದು ಎಂದು ನ್ಯಾಯಾಲಯವು ಹೇಳಿದೆ. ತಿದ್ದುಪಡಿಯ ಮೂಲಕ, ಜಮ್ಮಾ ಬಾಣೆ ಜಮೀನು ಸೇರಿದಂತೆ ಒಡೆತನದ ಆಸ್ತಿಗೆ ಸಂಬAಧಿಸಿದAತೆ ಇಡೀ ಕುಟುಂಬದ ಹಕ್ಕುಗಳನ್ನು ಗುರುತಿಸಲು ಆರ್‌ಟಿಸಿಯ ಕಾಲಂ ೯ ರಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ನಮೂದಿಸಲಾಗುವುದು. ಅಲ್ಲದೆ, ಅವಿಭಕ್ತ ಕುಟುಂಬದ ಭೂಮಾಲೀಕರ ಹೆಸರನ್ನು ಕಂದಾಯ ದಾಖಲೆಗಳಿಗೆ ತಿದ್ದುಪಡಿಗೆ ಅನುಗುಣವಾಗಿ ನಮೂದಿಸುವ ಪ್ರಕ್ರಿಯೆಯನ್ನು ವಿವರವಾಗಿ ತಿಳಿಸಲು ಮತ್ತು ಸ್ಪಷ್ಟತೆ ನೀಡುವ ಸುತ್ತೋಲೆ ಹೊರಡಿಸಲು ರಾಜ್ಯ ಕಂದಾಯ ಇಲಾಖೆಗೆ ಹಾಗೂ ಕೊಡಗು ಜಿಲ್ಲಾಡಳಿತಕ್ಕೆ ಹೈಕೋರ್ಟ್ ಸೂಚಿಸಿದೆ. ಜಮ್ಮಾ ಬಾಣೆ ಭೂಹಿಡುವಳಿಗೆ ಸಂಬAಧಿಸಿದ ಐತಿಹಾಸಿಕ ಸಂದರ್ಭ ಮತ್ತು ನ್ಯಾಯಾಂಗದ ಪೂರ್ವ ನಿದರ್ಶನಗಳನ್ನು ಪರಿಶೀಲಿಸಿದ ನ್ಯಾಯಾಲಯವು ಕೊಡವ ಕುಟುಂಬಗಳಲ್ಲಿ ಆಸ್ತಿಯನ್ನು ವಿಭಜಿಸುವ ಅಥವಾ ಮಾರಾಟದ ವಿರುದ್ಧ ಎಂದಿಗೂ ಪೂರ್ಣ ನಿಷೇಧವಿಲ್ಲ ಎಂದು ತೀರ್ಮಾನಿಸಿದೆ. ನ್ಯಾಯಮೂರ್ತಿ ಗೋವಿಂದರಾಜ್ ಅವರು, "ಜಮ್ಮಾ ಬಾಣೆ ಭೂಮಿಯನ್ನು ಕೊಡವ ಪದ್ಧತಿಗಿಂತ ಹೆಚ್ಚಾಗಿ ಭೂ ಹಿಡುವಳಿ ಆಧರಿಸಿ ವರ್ಗೀಕರಿಸಲಾಗಿದೆ" ಎಂದು ಹೇಳಿದರು.
ಸಮಾನತೆ
ಕೇವಲ ಪದ್ಧತಿಗಳು ಅಥವಾ ಸಂಪ್ರದಾಯಗಳನ್ನು ಉಲ್ಲಂಘಿಸುವ ಕಾನೂನುಗಳನ್ನು ಪೂರ್ವನಿದರ್ಶನಗಳಾಗಿ ಉಲ್ಲೇಖಿಸುವ ಆಧಾರದ ಮೇಲೆ ಪ್ರಶ್ನೆಯಲ್ಲಿರುವಂತಹ ಶಾಸನಬದ್ಧ ತಿದ್ದುಪಡಿಗಳನ್ನು ಪ್ರಶ್ನಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಪ್ರತಿಪಾದಿಸಿತು. ಜಮ್ಮಾ ಬಾಣೆ ಭೂಮಿಗೆ ಸಕ್ರಮೀಕರಣ ಅಥವಾ ಸ್ವಾಧೀನ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸಲು ಕೊಡವರಿಗೆ ಅವಕಾಶ ನೀಡುವ ಮೂಲಕ ತಿದ್ದುಪಡಿಯು ಸಮಾನತೆಯನ್ನು ತರುತ್ತದೆ ಎಂದು ತೀರ್ಪು ಎತ್ತಿ ತೋರಿಸಿದೆ, ಈ ಹಿಂದೆ ಕೊಡವರಿಗೆ ಈ ಹಕ್ಕು ಲಭ್ಯವಿರಲಿಲ್ಲ . ಈ ಹೊಸ ನಿಬಂಧನೆಯು ರಾಜ್ಯದ ಇತರ ಭೂ ಹಿಡುವಳಿದಾರರಿಗೆ ಹೋಲಿಸಿದರೆ ಕೊಡವರು ಎದುರಿಸುತ್ತಿರುವ ಅಸಮಾನತೆಯನ್ನು ಸರಿಪಡಿಸುತ್ತದೆ.
ಹಿಂದೂ ಉತ್ತರಾಧಿಕಾರ ಕಾಯ್ದೆ
ಎಲ್ಲಾ ಸದಸ್ಯರು ಜಂಟಿಯಾಗಿ ಮುಂದುವರಿಯಲು ಬಯಸಿದರೆ, ಕುಟುಂಬವು ಸಂಪೂರ್ಣ ಆಸ್ತಿಯ ಮೇಲೆ ಮಾಲೀಕತ್ವದ ಹಕ್ಕುಗಳನ್ನು ಚಲಾಯಿಸುವ ಜಂಟಿ ಕುಟುಂಬದ ಆಸ್ತಿಯಾಗಿ ಮುಂದುವರಿಯಬಹುದು. ಕುಟುಂಬದ ಯಾವುದೇ ಸದಸ್ಯರು ಬೇರ್ಪಡಲು ಬಯಸಿದರೆ, ಪರಸ್ಪರÀ ಒಪ್ಪಂದದ ಪ್ರಕಾರ ಅಥವಾ ಕಾನೂನಿನ ಪ್ರಕಾರ ಕೊಡವರು ಹಿಂದೂ ಕಾನೂನಿನ ಮಿತಾಕ್ಷರ ಶಾಖೆಯ ಅನ್ವಯ ಅಧಿಕಾರ ಹೊಂದುತ್ತಾರೆ ಮತ್ತು ಅದರಂತೆ, ಹಾಗೂ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಹಿಂದೂ ಉತ್ತರಾಧಿಕಾರ ಕಾಯಿದೆ, ೧೯೫೬ ರ ಮೂಲಕವೂ ಹಕ್ಕು ಹೊಂದುತ್ತಾರೆ. ಅಂತಿಮವಾಗಿ ಜಮ್ಮಾ ಬಾಣೆೆ ಭೂಮಿಯ ಮೇಲೆ ಸಂಪೂರ್ಣ ಮಾಲೀಕತ್ವದ ಹಕ್ಕನ್ನು ನೀಡುವುದು ತಿದ್ದುಪಡಿಯ ಪರಿಣಾಮವಾಗಿದೆ ಮತ್ತು ಕುಟುಂಬದ ಯಾವುದೇ ಸದಸ್ಯರನ್ನು ಕುಟುಂಬದಿAದ ವಿಭಜಿಸಲು/ ಬೇರ್ಪಡಿಸಲು ಅಥವಾ ಆಸ್ತಿಯನ್ನು ವಿಭಾಗಿಸಲು ಯಾವುದೇ ರೀತಿಯಲ್ಲಿ ಒತ್ತಾಯಿಸುವುದಿಲ್ಲ. ತಿದ್ದುಪಡಿಯು ಭಾರತದ ಸಂವಿಧಾನವನ್ನು ಹೊರತುಪಡಿಸಿ ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ
ಕೊಡಗು ಜಿಲ್ಲೆಯ ಬಾಣೆ ಜಮೀನುಗಳ ಮೌಲ್ಯಮಾಪನ ಸೇರಿದಂತೆ ಕೆಲವು ಹಕ್ಕುಗಳನ್ನು ನೀಡುವ ದೃಷ್ಟಿಯಿಂದ ತಿದ್ದುಪಡಿ ಯನ್ನು ಜಾರಿಗೊಳಿಸಲಾಗಿದೆ.
ತಿದ್ದುಪಡಿಯು ಲಾಭದಾಯಕ ಶಾಸನವಾಗಿದ್ದು, ಕೊಡಗಿನ ಬಾಣೆ ಭೂಮಿಯ ಭೂಹಿಡುವಳಿದಾರರಿಗೆ ಮಾಲೀಕತ್ವದ ಹಕ್ಕುಗಳನ್ನು ನೀಡಲು ಪ್ರಯತ್ನಿಸುತ್ತದೆ. ಭೂಮಿಯ ಸಂಪೂರ್ಣ ಮಾಲೀಕತ್ವಕ್ಕೆ ಅವರು ಅರ್ಹರಾಗಿರುತ್ತಾರೆ. ಇದು ರಾಜ್ಯದ ಭೂ ಕಂದಾಯ ವ್ಯವಸ್ಥೆಯಲ್ಲಿ ಏಕರೂಪತೆಯನ್ನು ತರುತ್ತದೆ.
ಮಾಲೀಕತ್ವ ನೀಡಲಾಗಿದೆ
ಜಮ್ಮಾ ಬಾಣೆ ಭೂಮಿಯ ಸಂಪೂರ್ಣ ಮಾಲೀಕತ್ವದಿಂದ ವಂಚಿತರಾಗಿದ್ದಾರೆ ಎಂದು ರಾಜ್ಯವು ಅಭಿಪ್ರಾಯಪಟ್ಟಿರುವುದರಿಂದ ಈ ಹಿಂದೆ ತಿದ್ದುಪಡಿ ಮೂಲಕ, ಅಂತಹ ಸಂಪೂರ್ಣ ಮಾಲೀಕತ್ವವನ್ನು ನೀಡಲು ಪ್ರಯತ್ನಿಸಿದೆ, ಸದರಿ ಜಮೀನುಗಳಿಗೆ ಸಂಬAಧಿಸಿದAತೆ ರಾಜ್ಯವು ಯಾವುದೇ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ. ತಿದ್ದುಪಡಿ ಕಾಯ್ದೆಯಡಿಯಲ್ಲಿ ನೀಡಲಾದ ಹಕ್ಕುಗಳಿಂದ ಯಾವುದೇ ಕೊಡವರಿಗೆ ತೊಂದರೆಯಾಗುವುದಿಲ್ಲ. ಅದರ ಮೇಲೆ ನೆಲೆಗೊಂಡಿರುವ ಮತ್ತು ಅದರಿಂದ ಉತ್ಪತ್ತಿಯಾಗುವ ಎಲ್ಲಾ ಮರಗಳು ಭೂಮಿಯ ಮಾಲೀಕರ ಸ್ವಾಧೀನಕ್ಕೆ ಒಳಪಡುತ್ತದೆ. ಸದರಿ ಜಮೀನಿನಲ್ಲಿ ಬೆಳೆದಿರುವ ಮರಗಳ ಬಗ್ಗೆ ಸರಕಾರವು ಯಾವುದೇ ಸೀನಿಯರೇಜ್ ಪಡೆಯುವ ಅಥವಾ ಅಂತಹುದೊAದು ಅಧಿಕಾರವನ್ನು ಚಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾವುದೇ ನಿರ್ದಿಷ್ಟ ಮರಗಳನ್ನು ಕಡಿಯಲು ಕುಟುಂಬ ಅಥವಾ ಅದರ ಸದಸ್ಯರು ಅಗತ್ಯವಿರುವ ಯಾವುದೇ ಅನುಮತಿಯನ್ನು ಅಗತ್ಯವಾಗಿ ಪಡೆಯಬೇಕು ಮತ್ತು ಅದಕ್ಕೆ ಸಂಬAಧಿಸಿದ ಕಾರ್ಯವಿಧಾನ ಮತ್ತು ವಿಧಿವಿಧಾನಗಳಿಗೆ ಬದ್ಧವಾಗಿರಬೇಕು. ಆದರೆÉ, ಈ ಭೂಮಿಯಲ್ಲಿ ಬೆಳೆದ ಯಾವದೇ ಉತ್ಪತ್ತಿ ಮೇಲೆ ರಾಜ್ಯವು ಯಾವುದೇ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಖಚಿತಪಡಿಸಲಾಗಿದೆ.