ಮಡಿಕೇರಿ, ಆ. ೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೊಳ್ಳುಮಾಡು ಗ್ರಾಮದ ಮಾತಂಡ ಕುಟುಂಬಸ್ಥರ ಗದ್ದೆಯಲ್ಲಿ ತಾ. ೧೪ ರಂದು ಬೆಳಿಗ್ಗೆ ೯.೩೦ ಗಂಟೆಯಿAದ “ಬೇಲ್ ನಮ್ಮೆ” ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಜ್ಯ ಕೃಷಿ ಸಚಿವರು ಹಾಗೂ ಜಿಲ್ಲೆಯ ಶಾಸಕರೂ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಮ್ಮೆಯ ಪ್ರಯುಕ್ತ ಓಟಾಕ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ. ಓಟಾಕ ಓಟದಲ್ಲಿ ಪುರುಷರು, ಸ್ತಿçÃಯರು, ಬಾಲಕರು ಹಾಗೂ ಬಾಲಕಿಯರು ಸೇರಿದಂತೆ ನಾಲ್ಕು ವಿಭಾಗಗಳು ಇರುತ್ತದೆ.
ಓಟಾಕ ಓಟದಲ್ಲಿ ಪುರುಷ ಹಾಗೂ ಸ್ತಿçÃಯರ ವಿಭಾಗದ ಪ್ರಥಮ ವಿಜೇತರಿಗೆ ಕೋರಿಕೊಡೆ, ನಗದು ರೂ. ೨,೦೦೦, ದ್ವಿತೀಯ ರೂ. ೧,೫೦೦ ಹಾಗೂ ತೃತೀಯ ರೂ. ೧,೦೦೦ ಹಾಗೂ ಸ್ಮರಣಿಕೆ, ಅಭಿನಂದನಾ ಪತ್ರ, ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರಥಮ ರೂ. ೧,೫೦೦, ದ್ವಿತೀಯ ರೂ. ೧,೦೦೦ ಹಾಗೂ ತೃತೀಯ ೭೦೦ ಸ್ಮರಣಿಕೆ, ಅಭಿನಂದನಾ ಪತ್ರ ನೀಡಲಾಗುವುದು. ಹಗ್ಗಜಗ್ಗಾಟದಲ್ಲಿ ಪುರುಷರು ಹಾಗೂ ಸ್ತಿçÃಯರು ಸೇರಿ ೨ ವಿಭಾಗಗಳು. ಹಗ್ಗಜಗ್ಗಾಟದಲ್ಲಿ ಪ್ರಥಮ ಬಹುಮಾನವಾಗಿ ರೂ. ೧೦ ಸಾವಿರ ಹಾಗೂ ಸ್ಮರಣಿಕೆ ಅಭಿನಂದನಾ ಪತ್ರ, ದ್ವಿತೀಯ ರೂ. ೭ ಸಾವಿರ ಸ್ಮರಣಿಕೆ ಅಭಿನಂದನಾ ಪತ್ರ ನೀಡಲಾಗುವುದು. ಹಗ್ಗಜಗ್ಗಾಟದ ತಂಡದಲ್ಲಿ ೭+೧ ರಂತೆ ಸ್ಪರ್ಧಾರ್ಥಿಗಳಿಗೆ ಅವಕಾಶವಿದೆ.
ಕೊಡವ ಅಕಾಡೆಮಿಯ ಷರತ್ತು ಹಾಗೂ ನಿಬಂಧನೆಗಳಿಗೆ ಅನ್ವಯವಾಗುವಂತೆ, ಸ್ಪರ್ಧಾರ್ಥಿಗಳು ತಾ. ೧೨ ರ ಸಂಜೆ ೫ ಗಂಟೆಯ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಅಕಾಡೆಮಿಯ ಪ್ರಕಟಣೆಯಲ್ಲಿ ಕೋರಲಾಗಿದೆ.
ಕೊಡವ ಸಾಹಿತ್ಯ ಅಕಾಡೆಮಿ ಕಚೇರಿ ೦೮೨೭೨-೨೨೯೦೭೪/ ೯೯೦೦೨೭೧೮೮೭ ಅಥವಾ ೮೯೭೧೯೫೮೯೯೬ ನ್ನು ಸಂಪರ್ಕಿಸ ಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹಾಗೂ ರಿಜಿಸ್ಟಾçರ್ ಅಜ್ಜಿಕುಟ್ಟಿರ ಗಿರೀಶ್ ತಿಳಿಸಿದ್ದಾರೆ.