ಗೋಣಿಕೊಪ್ಪಲು, ಆ. ೩: ಕೊಡಗಿನಲ್ಲಿ ಪರಿಸರ ಕಾಳಜಿಯೊಂದಿಗೆ ಉತ್ತಮ ರೀತಿಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕು ಇದರಿಂದ ಆದಾಯದ ಮೂಲ ಹೆಚ್ಚಾಗಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಪ್ರತಿಯೊಬ್ಬರು ಉದ್ಯಮಶೀಲರಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಮತ್ತೊಬ್ಬರಿಗೆ ಉದ್ಯೋಗ ಅವಕಾಶಗಳನ್ನು ನೀಡುವಂತಾಗಬೇಕು. ೨೦೪೭ರ ವಿಕಸಿತ ಭಾರತ ಇದೇ ಕಲ್ಪನೆಯದ್ದಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಹಿಂದೂ ಎಕನಾಮಿಕ್ ಫಾರ್ಮ್ ಕೊಡಗು ಲಘು ಉದ್ಯೋಗ ಭಾರತಿ ಮೈಸೂರು ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ನುರಿತ ತಜ್ಞರು ಹಾಗೂ ಪರಿಣಿತರಿಂದ ಬಂಡವಾಳ ಹೂಡಿಕೆ ಮೂಲಕ ನೂತನವಾಗಿ ಉದ್ಯಮಶೀಲ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕೊಡಗಿಗೆ ತನ್ನದೇ ಆದ ವೈಶಿಷ್ಟö್ಯವಿದೆ. ಯುವ ಸಮುದಾಯ ಹಲವು ಕನಸುಗಳನ್ನು ಕಾಣುತ್ತಿದೆ. ಅಂತಹ ಕನಸು ನನಸಾಗಲು ವಿವಿಧ ಸ್ಥರಗಳಲ್ಲಿ ಅನೇಕ ರೀತಿಯ ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ಹಾಗೂ ಮಾರಾಟ ಮಾಡುವ ಮೂಲಕ ಉದ್ಯಮಿಗಳಾಗಿ ಹೊರಹೊಮ್ಮಬೇಕು. ಕೊಡಗಿನಲ್ಲಿ ಇದಕ್ಕಾಗಿ ವಿಪುಲ ಅವಕಾಶವಿದೆ. ಸರ್ಕಾರದ ವತಿಯಿಂದ ಉದ್ದಿಮೆ ದಾರರಿಗೆ ಪೂರ್ಣ ರೀತಿಯ ಸಹಕಾರ ಸಿಗಲಿದೆ. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಉದ್ಯಮಿಗಳು ಹೆಚ್ಚು ಹೆಚ್ಚಾಗಿ ಹೊರ ಹೊಮ್ಮಬೇಕು ಎಂದು ನುಡಿದರು.
ಹಿಂದೂ ಎಕನಾಮಿಕ್ ಫಾರ್ಮ್ ಕೊಡಗು ಜಿಲ್ಲೆಯ ಅಧ್ಯಕ್ಷ ಡಾ. ಶ್ಯಾಂ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚಿಕ್ಕಅಳುವಾರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಅಶೋಕ್ ಸಂಗಪ್ಪ ಆಲೂರು ಮಾತನಾಡಿ, ಕೊಡಗಿನಲ್ಲಿ ಜೇನು ಸಾಕಾಣಿಕೆ, ಉತ್ಪಾದನೆ, ಗೊಬ್ಬರ ತಯಾರಿಕೆ, ಔಷಧಿಗುಣ ಹೊಂದಿರುವ ಗಿಡಗಳ ಉತ್ಪಾದನೆ ಹಣ್ಣು, ತರಕಾರಿ ರಫ್ತುಗಾರಿಕೆ ಸೇರಿದಂತೆ ಅನೇಕ ರೀತಿಯ ಯೋಜನೆಗಳನ್ನು ಕೈಗೆತ್ತಿ ಕೊಂಡು ಆ ಮೂಲಕ ಕೊಡಗಿನಲ್ಲಿ ಉದ್ಯಮ ಬೆಳೆಸುವಂತಾಗಬೇಕು. ಸರ್ಕಾರದಿಂದ ಪಡೆಯುವ ಸಾಲ ಯೋಜನೆಗಳನ್ನು ನಿಗದಿತ ಯೋಜನೆಗೆ ಮೀಸಲಿಡಬೇಕು. ವಿಶ್ವವಿದ್ಯಾನಿಲಯಗಳು ಕೇವಲ ಶಿಕ್ಷಣ ಕೊಡುವ ಸಂಸ್ಥೆ ಮಾತ್ರವಲ್ಲ. ಉದ್ಯಮಿಗಳನ್ನು ಸೃಷ್ಟಿ ಮಾಡುವ ಜವಾಬ್ದಾರಿಯೂ ವಿಶ್ವವಿದ್ಯಾನಿಲಯ ಗಳ ಮೇಲಿದೆ. ಮುಂದಿನ ಸಾಲಿನಲ್ಲಿ ಆಸಕ್ತರಿಗೆ ವಿಶ್ವವಿದ್ಯಾನಿಲಯದಲ್ಲಿ ೨ ದಿನದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಾಗಾರದಲ್ಲಿ ವಿವಿಧ ವಿಷಯ ತಜ್ಞರುಗಳಾದ ಭಾರತ ಸರ್ಕಾರದ ಎಂ.ಎಸ್.ಎA.ಇ.ನ ಜಂಟಿ ನಿರ್ದೇಶಕ ಕೆ. ದೇವರಾಜ್, ಸಿಎಫ್‌ಟಿಆರ್‌ಐನ ಮುಖ್ಯಸ್ಥೆ ಡಾ. ಪುಷ್ಪ ಎಸ್. ಮೂರ್ತಿ, ಖಾದಿ ಗ್ರಾಮೋದ್ಯೋಗದ ನಿರ್ದೇಶಕ ಡಾ. ಮೋಹನ್‌ರಾವ್, ಸಿಎಸ್‌ಐಆರ್‌ನ ಮುಖ್ಯಸ್ಥ ಡಾ. ಪಿ.ಎಸ್. ನೇಗಿ, ಖಾದಿ ಮಂಡಳಿ ಗ್ರಾಮೋದ್ಯೋಗದ ನಿರ್ದೇಶಕ ಹೆಚ್.ಆರ್. ರಾಜಪ್ಪ, ಮಹಾರಾಷ್ಟç ಬ್ಯಾಂಕಿನ ವಿಭಾಗೀಯ ಮುಖ್ಯಸ್ಥ ಚಿರುಕುಲ ಯೋಗೇಶ್ ಬಾಬು ಸೇರಿದಂತೆ ಹಲವು ಗಣ್ಯರು ಮಾತನಾಡಿದರು.